Latest

ಚೌಡೇಶ್ವರಿ ದೇವಾಲಯದಲ್ಲಿ ಆಭರಣ ಕಳವು: ಮದುವೆ ಖರ್ಚಿಗಾಗಿ ತಾಯಿ, ಅರ್ಚಕ ಸೇರಿ ಸಂಚು

ಚಿಕ್ಕಬಳ್ಳಾಪುರ, ಆಗಸ್ಟ್ 04: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿರಿಯಲಚೇನಹಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಚೌಡೇಶ್ವರಿ ದೇವಾಲಯದಲ್ಲಿ ಜುಲೈ 23ರಂದು ಸಂಭವಿಸಿದ ಆಭರಣ ಕಳವು ಪ್ರಕರಣದಲ್ಲಿ ಹೊಸ ತಿರುವು ಉಂಟಾಗಿದೆ. ಮಗಳ ಮದುವೆಯ ಖರ್ಚು ಪೂರೈಸಲು ತಾಯಿ ದೇವಾಲಯದ ದೇವಿಯ ಚಿನ್ನ-ಬೆಳ್ಳಿ ಆಭರಣ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಮೂಲದ ಲತಾ ಎಂಬ ಮಹಿಳೆ, ತನ್ನ ಎರಡನೇ ಮಗಳ ಮದುವೆಗೆ ಹಣದ ವ್ಯವಸ್ಥೆ ಮಾಡಲಾಗದೆ ದೇವಾಲಯದ ಆಭರಣಗಳತ್ತ ಕಣ್ಣಿಟ್ಟಿದ್ದಾಳೆ. ಈ ಸಂಚುಕಥೆಯಲ್ಲಿ ಲತಾಗೆ ಸಹಾಯ ಮಾಡಿದವರು ಆಕೆಯ ಮೂರನೇ ಮಗಳ ಪ್ರೇಮಿ ನವೀನ್ ಕುಮಾರ್ ಹಾಗೂ ದೇವಾಲಯದ ಅರ್ಚಕ ಚಿಕ್ಕಮಲ್ಲೇಶಪ್ಪ.

ಚಿಕ್ಕಮಲ್ಲೇಶಪ್ಪ ಮದ್ಯ ಸೇವನೆಯ ಲಾಲಸೆಯಿಂದ ಬಳಲುತ್ತಿದ್ದು, ಆತನಿಗೆ ಹಣದ ಆಮಿಷ ನೀಡಿದ ಲತಾ ಹಾಗೂ ನವೀನ್ ದೇವಾಲಯದ ಒಳಗಿನಿಂದ ಬೆಳ್ಳಿ ಮುಖವಾಡ, ಮೂಗುತಿ, ಮಾಂಗಲ್ಯದ ಬೊಟ್ಟಗಳು, ಕಾಲು ಚೈನುಗಳು ಸೇರಿದಂತೆ ಹಲವು ಅಮೂಲ್ಯ ಆಭರಣಗಳನ್ನು ಕದ್ದಿದ್ದಾರೆ.

ಘಟನೆ ಬಗ್ಗೆ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲದೆ, ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದರು. ಆರೋಪಿ ಚಿಕ್ಕಮಲ್ಲೇಶಪ್ಪನನ್ನು ವಿಚಾರಣೆ ನಡೆಸಿದಾಗ ಆತ ಕೃತ್ಯವನ್ನು ಒಪ್ಪಿಕೊಂಡಿದ್ದು, ತನಿಖೆಯಲ್ಲಿ ಸಹಕರಿಸಿದ್ದಾನೆ. ಪೋಲಿಸರು ಇತರ ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಿದ್ದು, ಕಳವುಗೆ ಒಳಗಾದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವು ದೇವತೆ ಮೇಲೆ ನಂಬಿಕೆ ಇಡುವ ಭಕ್ತರಲ್ಲಿ ಆತಂಕ ಮೂಡಿಸಿರುವುದರ ಜೊತೆಗೆ, ಮಾನವ ಸಂಬಂಧಗಳ ಗಂಭೀರ ಮುಖವನ್ನೂ ತೋರಿಸಿದೆ. ಮಗಳ ಮದುವೆಗಾಗಿ ತಾಯಿ ದೇವಾಲಯ ದೋಚಿದ ಘಟನೆ, ಜವಾಬ್ದಾರಿ ಮತ್ತು ನೈತಿಕತೆಯ ಅರಿವಿನ ಕೊರತೆಯ ಪರಿಣಾಮವೆಂಬಂತೆ ಅಭಿಪ್ರಾಯ ವ್ಯಕ್ತವಾಗಿದೆ.

nazeer ahamad

Recent Posts

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

7 hours ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

11 hours ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

14 hours ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

19 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

1 day ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

2 days ago