Latest

ಇಂದಿರಾ ಕ್ಯಾಂಟೀನ್‌ ದುರ್ಬಲ ಸೇವೆ: ಬಡವರಿಗೆ ಅನ್ಯಾಯ, ಗುತ್ತಿಗೆದಾರರಿಗೆ ಲಾಭ.!

ಬಡವರ್ಗದ ಜನರಿಗೆ ಕುಡಿದಿನ, ಕೂಲಿಕಾರ್ಮಿಕರು, ಹಮಾಲಿಗಳು, ಬೀದಿ ವ್ಯಾಪಾರಿಗಳು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಿಂಡಿ–ಊಟದ ವಿಲ್ಲದ ಬದುಕು ಕಲ್ಪಿಸಲು ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ ಯೋಜನೆ, ವರ್ಷಗಳ ಬಳಿಕ ದಿನದಿಂದ ದಿನಕ್ಕೆ ಗುಣಮಟ್ಟ ಕಳೆದುಕೊಳ್ಳುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಬಿ.ಎಚ್ ರಸ್ತೆಯಲ್ಲಿ ಇರುವ ಇಂದಿರಾ ಕ್ಯಾಂಟೀನ್‌ ಇದೀಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ತಿಂಗಳುಗಳಿಂದ ಫ್ರಿಡ್ಜ್‌ ಕೆಲಸ ಮಾಡುತ್ತಿಲ್ಲ. ಅದರೊಳಗೆ ತರಕಾರಿ ಇಡುವ ಬದಲು ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ತುಂಬಲಾಗುತ್ತಿದ್ದು, ಫ್ರಿಡ್ಜ್ ಬಳಕೆಯಿಲ್ಲದ ಸ್ಥಿತಿಗೆ ತಲುಪಿದೆ. ಹಾಗೆಯೇ ವಾಟರ್ ಫಿಲ್ಟರ್‌ ಕೂಡ ನಿಷ್ಕ್ರಿಯವಾಗಿದ್ದು, ಸಾರ್ವಜನಿಕರಿಗೆ ಶುದ್ಧ ನೀರು ಲಭ್ಯವಿಲ್ಲ ಎಂಬ ಅನುಮಾನ ಮೂಡಿಸುತ್ತಿದೆ.

ಅದಕ್ಕೂ ಹೆಚ್ಚು ಗಂಭೀರವಾದ ವಿಷಯವೇನೆಂದರೆ ಅಡುಗೆ ಯಂತ್ರಗಳು ಧೂಳು ಹಿಡಿದು ನಿಲ್ಲುತ್ತಾ ಹೋಗಿದ್ದು, ಕ್ಯಾಂಟೀನ್‌ನಲ್ಲಿ ಅಲ್ಪ ಪ್ರಮಾಣದ ಅಡುಗೆಯನ್ನಷ್ಟೇ ಸಣ್ಣ ಪಾತ್ರೆಗಳಲ್ಲಿ ಮಾಡಲಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ‘ಊಟ ಮುಗಿಯಿತು’ ಎಂಬ ಸಲುವಾಗಿ ಬಡವರನ್ನು ಹಿಂಪಡೆಯಲಾಗುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ನಿಗದಿಪಡಿಸಿರುವ ಆಹಾರದ ಪ್ರಮಾಣಕ್ಕೆ ಅನುಗುಣವಾಗಿ ತೂಕ ಮಾಡುವ ಯಂತ್ರ ಇದ್ದರೂ, ಅದನ್ನು ಮೂಲೆಗೆ ತಳ್ಳಿರುವ ಕಾರಣ, ಆಹಾರವು ಅಂದಾಜಿನ ಮೇರೆಗೆ ನೀಡಲಾಗುತ್ತಿದೆ. ಇದರೊಂದಿಗೆ ದಿನದ ಪಂಚಿಕೆಯಲ್ಲಿ ಬಡವರ ಹೆಸರು ನೋಂದಾಯಿಸಲು ಉದ್ದೇಶಿಸಿರುವ ಪುಸ್ತಕದಲ್ಲಿಯೂ ಕೆಲವರು ಮಾತ್ರ ಸಹಿ ಮಾಡುತ್ತಿದ್ದಾರೆ, ಉಳಿದ ಸಹಿಗಳನ್ನು ಸಿಬ್ಬಂದಿಯೇ ಹಾಕುತ್ತಿರುವ ಅನುಮಾನ ವ್ಯಕ್ತವಾಗಿದೆ.

“ಇತ್ತೀಚೆಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ನೀಡಲಾಗ  ಆದರೆ ಅದು ನೆಪಕ್ಕೆ ಮಾತ್ರ. ರುಚಿಯೂ ಇಲ್ಲ, ಗುಣಮಟ್ಟವೂ ಇಲ್ಲ. ಕೆಲವರಿಗೆ ಕೊಟ್ಟು, ಉಳಿದವರಿಗೆ ಮುಗಿದಿದೆಯೆಂದು ತಿರಸ್ಕರಿಸುತ್ತಾರೆ,” ಎಂದು ಕೂಲಿ ಕಾರ್ಮಿಕ ಗಂಗಪ್ಪ ವಿಷಾದ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಮನೋಜ್ ಕೂಡ “ಅಡುಗೆ ಮಾಡದೇ ಹೋದ ದಿನ ಕ್ಯಾಂಟೀನ್‌ಗೆ ಹೋಗ್ತೀನಿ. ಆದರೆ ಅಲ್ಲಿ ರುಚಿಯೂ ಇಲ್ಲ, ತರಕಾರಿಯೂ ಇಲ್ಲ. ಹೀಗೆ ಇದ್ದರೆ ಹಸಿವನ್ನು ತಣಿಸಲು ಇನ್ನು ಯಾವತ್ತಿಗೂ ಈ ಯೋಜನೆ ನೆರವಾಗದು,” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಇಂತಹ ಪರಿಸ್ಥಿತಿಯ ಮಧ್ಯೆ, ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕಿದ್ದರೂ ಅವರು ಅಪರೂಪಕ್ಕೆ ಮಾತ್ರ ಭೇಟಿ ನೀಡಿ, ಗುತ್ತಿಗೆದಾರರಿಗೆ ಶಹಬ್ಬಾಸ್‌ ಹೇಳಿ ಹೊರಟು ಹೋಗುತ್ತಿರುವುದರಿಂದ ಬಡವರಿಗೆ ನೆರವಾಗಬೇಕಿದ್ದ ಯೋಜನೆ ಹಣದ ಲಾಭದ ಯೋಜನೆಯಾಗಿ ಬದಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಾರ್ವಜನಿಕರ ಬೇಡಿಕೆಯಂತೆ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಇಂದಿರಾ ಕ್ಯಾಂಟೀನ್‌ಗಳ ಸೇವೆಯನ್ನು ಪುನಃ ಶ್ರದ್ಧೆಯಿಂದ ಪರಿಶೀಲಿಸಿ, ಬಡವರ ಆಶಯಕ್ಕೆ ತಕ್ಕಂತೆ ಗುಣಮಟ್ಟದ ಆಹಾರ ನೀಡುವಂತಹ ಕ್ರಮ ಕೈಗೊಳ್ಳಬೇಕಾಗಿದೆ. ವರದಿ ಅವಿನಾಶ್

nazeer ahamad

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

16 minutes ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

15 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

19 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago