Categories: CrimeLatest

ಪಕ್ಕದ ಮನೆ ಯುವತಿಯೊಂದಿಗೆ ಅನೈತಿಕ ಸಂಬಂಧ; ಪ್ರಶ್ನಿಸಿದ್ದಕ್ಕೆ ಕಬ್ಬಿಣದ ರಾಡ್‌ನಿಂದ ಹೊಡೆದು ಪತ್ನಿಯ ಹತ್ಯೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಪತ್ನಿಯೇ ಪತಿಯ ಕ್ರೌರ್ಯಕ್ಕೆ ಬಲಿಯಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಪಕ್ಕದ ಮನೆಯ ಯುವತಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತಿಯು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

ಹೊನ್ನಿಕೇರಿ ಗ್ರಾಮದ 26 ವರ್ಷದ ಸಂಜನಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿ ಭಗವತ್ ಜ್ಞಾನೇಶ್ವರ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿಯೊಂದಿಗೆ ಬೀದರ್‌ನ ಶಿವನಗರದಲ್ಲಿ ವಾಸವಾಗಿದ್ದನು. ಇಬ್ಬರಿಗೂ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಭಗವತ್ ಪಕ್ಕದ ಮನೆಯ ಯುವತಿಯೊಂದಿಗೆ ಆಪ್ತ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಸಂಜನಾಗೆ ಬಂದಿತ್ತು. ಈ ವಿಷಯವಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರ ಮತ್ತೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಕೋಪಗೊಂಡ ಭಗವತ್ ಪತ್ನಿಯನ್ನು ಜೂನ್ 29ರಂದು ಕಾರಿನಲ್ಲಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾಲ್ಕಿ ತಾಲೂಕಿನ ಹೊನ್ನಿಕೇರಿ ಸಮೀಪದ ಗಾಯಮುಖ ದೇವಸ್ಥಾನದ ಬಳಿ ನಿರ್ಜನ ಪ್ರದೇಶದಲ್ಲಿ ಪತ್ನಿಯ ತಲೆ ಹಾಗೂ ಕತ್ತಿನ ಭಾಗಕ್ಕೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂಜನಾಳನ್ನು ತಕ್ಷಣ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಸಂಬಂಧ ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ವಿವಾಹಿತೆಯೊಂದಿಗೆ ಯುವಕ ಪರಾರಿ: ಸಿಟ್ಟಿಗೆದ್ದ ಗುಂಪಿನಿಂದ ಮನೆ ಮೇಲೆ ಮಾರಣಾಂತಿಕ ದಾಳಿ

ಬೆಳಗಾವಿ ಜಿಲ್ಲೆಯಲ್ಲಿ ಪ್ರೇಮ ಪ್ರಕರಣವೊಂದು ಹಿಂಸಾತ್ಮಕ ತಿರುವು ಪಡೆದಿದ್ದು, ವಿವಾಹಿತೆಯೊಂದಿಗೆ ಯುವಕ ಓಡಿಹೋದ ಹಿನ್ನೆಲೆ ಆತನ ಮನೆಯ ಮೇಲೆ ಗುಂಪೊಂದು…

2 hours ago

ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಗಂಡನ ಹತ್ಯೆ: ಪತ್ನಿ ಬಂಧನ

ಮೈಸೂರಿನಲ್ಲಿ ದಂಪತಿ ನಡುವಿನ ಕುಟುಂಬ ಕಲಹ ದಾರುಣ ಅಂತ್ಯ ಕಂಡಿದ್ದು, ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಉಂಟಾದ ಜಗಳದಲ್ಲಿ ಪತ್ನಿಯೇ ಗಂಡನನ್ನು…

6 hours ago

ಸತತ 3 ಬಾರಿ UPSC ಫೇಲ್.. ಒಂದೇ ಅಭ್ಯಾಸ ಬದಲಿಸಿ 24ನೇ ವಯಸ್ಸಿಗೆ IAS ಆದ ನೇಹಾ ಬ್ಯಾಡ್ವಲ್!

UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಕನಸು ಲಕ್ಷಾಂತರ ಯುವಕರದ್ದಾಗಿದ್ದರೂ, ಅದನ್ನು ನನಸು ಮಾಡುವುದು ಕೆಲವೇ ಮಂದಿಗೆ ಸಾಧ್ಯವಾಗುತ್ತದೆ. ಹಲವು ಮಂದಿ…

6 hours ago

ಹಳ್ಳಿಯ ಹುಡುಗಿಯಿಂದ ಐಎಎಸ್‌ ಅಧಿಕಾರಿ ತನಕ: ಪ್ರಿಯಾ ರಾಣಿ ಅವರ ಸ್ಪೂರ್ತಿದಾಯಕ ಸಾಧನೆ

ಬಿಹಾರದ ಒಂದು ಸಣ್ಣ ಹಳ್ಳಿಯಿಂದ ಆರಂಭವಾದ ಪ್ರಯಾಣ, ಇಂದು ದೇಶದ ಅತ್ಯುನ್ನತ ನಾಗರಿಕ ಸೇವೆಯಾದ ಐಎಎಸ್‌ ಹುದ್ದೆ ತಲುಪಿದೆ. ದೃಢ…

6 hours ago

ಆರೋಪಿಯ ಬಾಯಿಗೆ ಮರ್ಮಾಂಗ ಇರಿಸಿ ವಿಕೃತ ಮೆರೆದಿದ್ದ ಪಿಎಸ್ಐ ಅರೆಸ್ಟ್..!

ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪೊಲೀಸ್ ಅಧಿಕಾರಿಯೇ ಅಪ್ರಾಪ್ತ ಬಾಲಕರ…

6 hours ago

ಗರ್ಭದಲ್ಲಿರುವ ಮಗುವಿನ ಡಿಎನ್ಎ ಪರೀಕ್ಷೆಗೆ ಒತ್ತಾಯ: ಅನುಮಾನದ ಬೆಂಕಿಗೆ ಬಲಿಯಾದ ಗರ್ಭಿಣಿ, ಪತಿ ಬಂಧನ

ತೆಲಂಗಾಣದಲ್ಲಿ ಮನಕಲಕುವ ಘಟನೆೊಂದು ಬೆಳಕಿಗೆ ಬಂದಿದೆ. ಗರ್ಭದಲ್ಲಿರುವ ಮಗುವಿನ ಪಿತೃತ್ವವನ್ನು ಪ್ರಶ್ನಿಸಿ ಡಿಎನ್‌ಎ ಪರೀಕ್ಷೆ ಮಾಡಿಸಬೇಕೆಂದು ಪತಿ ಪಟ್ಟು ಹಿಡಿದ…

6 hours ago