Categories: CorruptionLatest

ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗೆ ಅಮಾನತು ಬಿಸಿ ಮುಟ್ಟಿಸಿದ ಡಿಸಿಎಂ ಪರಮೇಶ್ವರ್

ದೇವನಹಳ್ಳಿ: ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯೊಬ್ಬರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅಮಾನತುಗೊಳಿಸಿದ್ದಾರೆ.

ಶುಕ್ರವಾರ ದೇವನಹಳ್ಳಿ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿದ ಅವರು, ಕಚೇರಿಯ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ಕಂಡುಬಂದ ಲೋಪದೋಷಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ತೋರಿದ ಅಧಿಕಾರಿಯ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದು, ಉಳಿದ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ, ಕಂದಾಯ ದಾಖಲೆಗಳ ನಿರ್ವಹಣೆ ಹಾಗೂ ಸರ್ಕಾರಿ ಸೇವೆಗಳ ವಿತರಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ಅಧಿಕಾರಿಗಳು ಅವರಿಗೆ ನೀಡುತ್ತಿರುವ ಸ್ಪಂದನೆ ಹಾಗೂ ವಿವಿಧ ಅರ್ಜಿಗಳು ಯಾವ ಹಂತದಲ್ಲಿ ಬಾಕಿ ಉಳಿದಿವೆ ಎಂಬುದನ್ನು ಖುದ್ದಾಗಿ ಪರಿಶೀಲಿಸುವ ಉದ್ದೇಶದಿಂದ ದಿಢೀರ್ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಕಚೇರಿಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿದಾಗ ಹಲವು ಲೋಪದೋಷಗಳು ಕಂಡುಬಂದಿವೆ. ಅವುಗಳನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರಿಗೆ ತ್ವರಿತ ಹಾಗೂ ಸಮರ್ಪಕ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಿ ಕಚೇರಿಗಳ ಕಾರ್ಯವೈಖರಿ, ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಮತ್ತು ಸರ್ಕಾರದ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಇಂತಹ ದಿಢೀರ್ ಭೇಟಿಗಳು ಮುಂದುವರಿಯಲಿವೆ ಎಂದು ಹೇಳಿದರು.

ಇದೇ ವೇಳೆ ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಹೇಳಿದರು.

ವರದಿ: ಶಿವು. ಪಿ. ಆರ್.

ಭ್ರಷ್ಟರ ಬೇಟೆ

Recent Posts

ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ

ಮೀರತ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್‌ನ ಬ್ಲೂ ಡ್ರಮ್ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ…

2 days ago

ಚಿಕ್ಕೋಡಿಯಲ್ಲಿ ಉಪಲೋಕಾಯುಕ್ತರ ದಿಢೀರ್ ತಪಾಸಣೆ: ಸರ್ಕಾರಿ ಕಚೇರಿಗಳ ಲೋಪದೋಷಗಳ ವಿರುದ್ಧ 27 ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸೆಪ್ಟೆಂಬರ್ 24…

5 days ago

ಹೋಟೆಲ್‌ನಲ್ಲಿ ಪತ್ನಿ ಪ್ರಿಯಕರನ ಜೊತೆ! 4 ಗಂಟೆ ಕಾದು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತಿ; ನಡುರಸ್ತೆಯಲ್ಲೇ ಹೈಡ್ರಾಮಾ

ಬಿಜ್ನೋರ್ (ಉತ್ತರ ಪ್ರದೇಶ): ಪತ್ನಿಯು ಮತ್ತೊಬ್ಬ ಯುವಕನೊಂದಿಗೆ ಹೋಟೆಲ್‌ನಲ್ಲಿ ಸಮಯ ಕಳೆದು ಹೊರಬರುತ್ತಿದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದ ಘಟನೆ ಉತ್ತರ…

5 days ago

ಲೈಕ್ಸ್‌, ವ್ಯೂಸ್‌ಗಾಗಿ ತಾಯಿ-ಮಗನ ಸಂಬಂಧವೇ ಅಸ್ತ್ರ? 20 ವರ್ಷದ ಮಗನ ಜೊತೆ ಪ್ರೇಮಿಗಳಂತೆ ರೀಲ್ಸ್‌; ನೆಟ್ಟಿಗರ ಆಕ್ರೋಶ!

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್‌ ಮತ್ತು ವ್ಯೂಸ್‌ ಗಳಿಸುವ ಹುಚ್ಚಿನಲ್ಲಿ ಕೆಲವರು ಸಂಬಂಧಗಳ ಘನತೆಯನ್ನೇ ಮರೆತುಬಿಡುತ್ತಿದ್ದಾರೆಯೇ ಎಂಬ ಚರ್ಚೆ ಇದೀಗ…

5 days ago

ಹನಿ ಟ್ರ್ಯಾಪ್ ಬಲೆಗೆ ಬ್ಯಾಂಕ್ ಮ್ಯಾನೇಜರ್! ₹3 ಲಕ್ಷ ಪಡೆದ ಬಳಿಕ ಮತ್ತೆ ₹5 ಲಕ್ಷಕ್ಕೆ ಬೇಡಿಕೆ; ಐವರ ವಶಕ್ಕೆ ಪಡೆದ ಪೊಲೀಸರು

ಜೋರ್ಹಾಟ್: ಹನಿ ಟ್ರ್ಯಾಪ್ ಮೂಲಕ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಲು ಯತ್ನಿಸಿದ ಆರೋಪದ ಮೇಲೆ…

5 days ago

ಇಡಗುಂಜಿ ಗಣಪತಿ ದೇಗುಲದಲ್ಲಿ ಪೂಜಾ ವಿವಾದ: ನವರಾತ್ರಿಯ ಮೊದಲ ದಿನವೇ ಅರ್ಚಕರಿಂದ ಪೂಜೆ ಬಹಿಷ್ಕಾರ!

ಹೊನ್ನಾವರ: ಪೂಜಾ ಕಮಿಷನ್ ಹಣದ ಹಂಚಿಕೆ ವಿಚಾರವಾಗಿ ವಿವಾದ – ದರ್ಶನಕ್ಕೆ ಬಂದ ಭಕ್ತರಿಗೆ ನಿರಾಸೆ ಉತ್ತರ ಕನ್ನಡ ಜಿಲ್ಲೆಯ…

5 days ago