ಅಕ್ರಮ ಮರಳು ಮಾಫಿಯಾಗೆ ತಡೆಹಿಡಿಯಲು ತೆರಳಿದ ಮಹಿಳಾ ಅಧಿಕಾರಿಗೆ, ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರ ಬಸವೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳಾ ಅಧಿಕಾರಿ ಭದ್ರಾವತಿ ಡಿವೈಎಸ್‌ಪಿಗೆ ಅಧಿಕೃತವಾಗಿ ದೂರು ನೀಡಿದ್ದು, ಪ್ರಕರಣ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆಕ್ರೋಶ
ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, “ಯಾರೇ ಆಗಿರಲಿ, ತಪ್ಪು ಮಾಡಿದರೆ ಶಿಕ್ಷೆ ತಪ್ಪಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಶಾಸಕನ ಮಗನಾಗಿದ್ರೂ ನನಗೆಲ್ಲಾ ಗಣಿ ಇಲ್ಲ. ನಾವು ಮಹಿಳೆಯರ ಗೌರವವನ್ನು ಕಾಪಾಡಲು ಇಲ್ಲಿದ್ದೇವೆ. ಕೂಡಲೇ ಶಾಸಕರ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಕಿಡಿಕಾರಿದ್ದಾರೆ.
ಅವರು ಇನ್ನೂ ಮುಂದುವರಿಯುತ್ತಾ, “ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬಸವೇಶ್ ನ ವಿರುದ್ಧ ಈಗಾಗಲೇ ಸಮನ್ಸ್ ಜಾರಿಯಾಗಿದೆ. ಸಂತ್ರಸ್ತೆ ಮಹಿಳಾ ಅಧಿಕಾರಿ ಮಾತ್ರವಲ್ಲ, ಸಾಮಾನ್ಯ ಮಹಿಳೆ ಆದರೂ ಸಹ ಇಂತಹ ವರ್ತನೆ ಅಸಹ್ಯಕರ” ಎಂದು ಹೇಳಿದರು.
ಮಹಿಳಾ ಅಧಿಕಾರಿ ಜ್ಯೋತಿ ದೂರು ನೀಡಿದ ಕತೆ
ಅಕ್ರಮ ಮರಳು ಮಾಫಿಯಾಗೆ ವಿರುದ್ಧ ದಾಳಿ ನಡೆಸಲು ಹೋದ ವೇಳೆ, ಶಾಸಕರ ಪುತ್ರ ಬಸವೇಶ್ ಮತ್ತು ಮತ್ತಷ್ಟು ಜನರಿಂದ ನಿರ್ಭೀತಿಯಾಗಿ ಅವಮಾನಿಸಲ್ಪಟ್ಟಿದ್ದ ಮಹಿಳಾ ಅಧಿಕಾರಿ ಜ್ಯೋತಿ, ಈ ಸಂಬಂಧ ದೂರು ದಾಖಲಿಸಿದ್ದಾರೆ.
“ನಾವು ದಾಳಿ ಮಾಡಿದಾಗ ನಮ್ಮ ಮೇಲೆ ಗಾಡಿ ಹತ್ತಿಸುತ್ತಾರೆ ಅಂತ ಬೆದರಿಸಿದರು. ಭಯ ಭೀತಿಯಿಂದ ಹಿಂತಿರುಗಬೇಕಾಯಿತು. ಅಲ್ಲದೆ, ಕೆಲವು ಅನಾಮಧೇಯ ದೂರವಾಣಿ ಕರೆಗಳು ಕೂಡ ಬಂದವು. ಆದರೆ, ನನ್ನ ತಂಡ ನನ್ನ ಬೆಂಬಲದಲ್ಲಿ ನಿಂತಿತ್ತು” ಎಂದು ಮಹಿಳಾ ಅಧಿಕಾರಿ ಜ್ಯೋತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಘಟನೆ ಸಂಬಂಧ ಶಿವಮೊಗ್ಗದ ಎಸ್‌ಪಿ ಅವರಿಗೂ ಸಂಪೂರ್ಣ ವರದಿ ನೀಡುವಂತೆ ಮಹಿಳಾ ಆಯೋಗ ಸೂಚನೆ ನೀಡಿದೆ. ಇದರಿಂದ ಶಾಸಕರ ಪುತ್ರನ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಈ ಪ್ರಕರಣ ಸರ್ಕಾರದ ಮಟ್ಟದಲ್ಲಿಯೂ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಹಂತದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವ ನಿರೀಕ್ಷೆಯಿದೆ.
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…