Categories: CrimeLatest

“30 ಲಕ್ಷ ಕೊಡ್ತೀನಿ… ಬೆತ್ತಲೆ ಫೋಟೋ ಕಳುಹಿಸು!” — ರಾಮನಗರದಲ್ಲಿ ಜ್ಯೋತಿಷಿಯ ಕಿರುಕುಳ ಆರೋಪ

ರಾಮನಗರ ಜಿಲ್ಲೆಯ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಜ್ಯೋತಿಷಿಯೊಬ್ಬ ಮಹಿಳೆಗೆ ಅಸಭ್ಯವಾಗಿ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ವಿಶೇಷ ಪೂಜೆಯ ಹೆಸರಿನಲ್ಲಿ ಮಹಿಳೆಯ ಬೆತ್ತಲೆ ಫೋಟೋಗಳನ್ನು ಕೇಳಿ, ಹಣದ ಆಮಿಷ ನೀಡಿದ ಆರೋಪ ಕೇಳಿಬಂದಿದೆ.

ಗ್ರಾಮದ ಕಿರಣ್ ಎಂಬಾತ, ಮನಿ ಡಬ್ಲಿಂಗ್ ಪೂಜೆ ಮಾಡಿಸುವುದಾಗಿ ಹೇಳಿ ಮಹಿಳೆಯನ್ನು ಸಂಪರ್ಕಿಸಿದ್ದಾನೆ. ಈ ಪೂಜೆಗೆ ಆಯ್ಕೆ ಆಗಬೇಕಾದರೆ “ದೇಹದ ಮೇಲೆ ಮಚ್ಚೆ ಇಲ್ಲದ ಮಹಿಳೆ ನಗ್ನವಾಗಿ ಕುಳಿತುಕೊಳ್ಳಬೇಕು” ಎಂದು ಹೇಳಿ, ತನ್ನ ಆಯ್ಕೆಗಾಗಿ ಮೊದಲು ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಪೂಜೆ ಯಶಸ್ವಿಯಾಗಿ ಮುಗಿದ ಬಳಿಕ ₹30 ಲಕ್ಷ ಹಣ ನೀಡುವುದಾಗಿ ಆಮಿಷವನ್ನೂ ನೀಡಿದ್ದಾನೆ. ಕಳೆದ ಒಂದು ವಾರದಿಂದ ನಿರಂತರವಾಗಿ ರಾತ್ರಿ ವೇಳೆ ಸಂದೇಶಗಳನ್ನು ಕಳುಹಿಸಿ ಮಹಿಳೆಯನ್ನು ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಹಿಳೆ ಎರಡು ದಿನಗಳ ಹಿಂದೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

3 minutes ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

5 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

20 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

1 day ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago