ಬೆಂಗಳೂರು: ನಗರದ ಎಸ್‌ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಮತ್ತೊಂದು ಭಾಷಾ ವಿವಾದವೇ ಉಲ್ಕಿಯಂತೆ ಸಿಡಿದಿದೆ. ಆಟೋ ಚಾಲಕನೊಬ್ಬ ಹಾಗೂ ಹಿಂದಿ ಮಾತನಾಡುವ ವ್ಯಕ್ತಿಯ ನಡುವೆ ನಡೆದ ಮಾತಿನ ಗಲಾಟೆಯ ದೃಶ್ಯಗಳು ಆಗಿದ್ದು, ಕನ್ನಡಿಗರ ಮನಸಿನಲ್ಲಿ ಆಕ್ರೋಶ ಎಬ್ಬಿಸಿದೆ.
ವೈರಲ್ ವಿಡಿಯೋದಲ್ಲಿ, ಆಟೋ ಚಾಲಕನು “ಇಲ್ಲಿ ಕನ್ನಡ ಮಾತನಾಡಬೇಕು” ಎಂಬ ಧಿಟ್ಟಾದ ಮಾತು ಆಡುತ್ತಾನೆ. ಪ್ರತಿಸ್ಪಂದಿಸಿದ ಹಿಂದಿ ಭಾಷಿಕ ಯುವಕನು, “ಇಲ್ಲಿ ಬದುಕಬೇಕಾದರೆ ಹಿಂದಿ ಕಲಿಯಬೇಕು” ಎಂಬ ಧಮ್ಮಿಗೆ ಇಳಿಯುತ್ತಾನೆ. ಇಬ್ಬರ ನಡುವೆ ಮಾತಿನ ಪಟ್ಟು ತೀವ್ರಗೊಂಡಿದ್ದು, ಸ್ಥಳದಲ್ಲಿದ್ದ ಯುವತಿಯೊಬ್ಬಳು ಹಿಂದಿ ಭಾಷಿಕನನ್ನು ಹಿಡಿದು ಎಳೆದೊಯ್ಯುತ್ತಿರುವ ದೃಶ್ಯವೂ ದಾಖಲಾಗಿದೆ.
ಈ ಘಟನೆ ರಾಜ್ಯಾದ್ಯಂತ ಭಾರೀ ಪ್ರತಿಕ್ರಿಯೆ ಹುಟ್ಟುಹಾಕಿದ್ದು, “ಬೆಂಗಳೂರು ಕನ್ನಡಿಗರ ನಗರ, ಇಲ್ಲಿ ಸ್ಥಳೀಯ ಭಾಷೆಗೆ ಗೌರವವಿರಬೇಕು” ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಂತಹೆಡೆ, ಕನ್ನಡ ಮಾತಾಡಿದ ಆಟೋ ಚಾಲಕನ ಧೈರ್ಯಕ್ಕೆ ಬಹುತೆಕ ಜನರು ಬೆನ್ನೆಲುಬು ಕೊಟ್ಟಿದ್ದಾರೆ. ಈ ಘಟನೆಯು ನಗರದಲ್ಲಿ ಭಾಷಾ ಸಂವೇದನೆ ಮತ್ತು ಸ್ಥಳೀಯ ಅಸ್ಮಿತೆಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗುತ್ತಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…