Latest

ಸರಗಳ್ಳತನ ಮಾಡಿದ ಆರೋಪಿತರ ಬಂಧನ

ರಾಷ್ಟ್ರೀಯ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಕುತ್ತಿಗೆಯಲ್ಲಿದ್ದ ಅಂದಾಜು 20 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಭಟ್ಕಳ ಪಡಿತರ ಬಂಧಿಸಿದ್ದಾರೆ.

17-04-2025 ರಂದು ನಾಗಮ್ಮ ಗಂಡ ಸುಕ್ರ ಮೊಗೇರ ಮುರ್ಡೇಶ್ವರ, ಭಟ್ಕಳ ತಾಲೂಕ ರವರು ರಾಷ್ಟ್ರೀಯ ಹೆದ್ದಾರಿ-66ರ ಮೇಲೆ ನಡೆದುಕೊಂಡು ಮನೆಗೆ ಹೋಗುವಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕನಲ್ಲಿ ಬಂದು ಕುತ್ತಿಗೆಯಲ್ಲಿ ಇದ್ದ ಅಂದಾಜು 20 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಹೋದ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸದ್ರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗೆ ಶ್ರೀ ನಾರಾಯಣ ಎಂ. ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಶ್ರೀ ಕೃಷ್ಣಮೂರ್ತಿ, ಜಿ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ, ಹಾಗೂ ಶ್ರೀ ಜಗದೀಶ ಎಂ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಮತ್ತು ಶ್ರೀ ಮಹೇಶ ಎಮ್, ಪೊಲೀಸ್ ಉಪಾಧಿಕ್ಷಕರು ಭಟ್ಕಳ ಉಪ ವಿಭಾಗ ರವರ ಮಾರ್ಗ ದರ್ಶನದಲ್ಲಿ ತನಿಖಾಧಿಕಾರಿಯಾದ ಶ್ರೀ ಸಂತೋಷ ಕಾಯ್ಕಿಣಿ ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ಗ್ರಾಮಾಂತರ ವೃತ್ತ ಶ್ರೀ ಹಣಮಂತ ಬಿರಾದಾರ ಪೊಲೀಸ್ ಉಪ ನಿರೀಕ್ಷಕರು ಮುರ್ಡೇಶ್ವರ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿ ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಮಹೇಶ ತಂದೆ ಪರಸಪ್ಪ ಕುರಿ ಸಾ|| ಸಂತಿಸಿಗ್ಲಿ, ಲಕ್ಷೇಶ್ವರ, ಗದಗ ಜಿಲ್ಲೆ ಹಾಗೂ ಮಣಿಕಂಠ ತಂದೆ ಹಣಮಂತ ಶಿರಹಟ್ಟಿ ಸಾ|| ಆನಂದ ನಗರ. ಕೃಷ್ಣಾ ಕಾಲೋನಿ ರವರನ್ನು ಬಂಧಿಸಿದ್ದಾರೆ.ಹುಬ್ಬಳ್ಳಿ ಇವರಿಬ್ಬರನ್ನು ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ 150000/- ರೂ ಬೆಲೆ ಬಾಳುವ ಬೈಕ,ಸರಗಳ್ಳತನ ಮಾಡಿದ್ದ 26 ಗ್ರಾಂ ತೂಕದ 220000 ರೂ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರ ಹಾಗೂ ಎರಡು ಮೊಬೈಲ ಪೋನ್ ಗಳನ್ನು ಹೀಗೆ ಒಟ್ಟು ಅಂದಾಜು 3,80,000/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ .

ಈ ಕಾರ್ಯಾಚರಣೆಯಲ್ಲಿ, ಶ್ರೀ ನಾರಾಯಣ ಎಂ. ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಶ್ರೀ ಕೃಷ್ಣಮೂರ್ತಿ. ಜಿ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ, ಹಾಗೂ ಶ್ರೀ ಜಗದೀಶ ಎಂ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಮತ್ತು ಶ್ರೀ ಮಹೇಶ ಎಮ್, ಪೊಲೀಸ್ ಉಪಾಧಿಕ್ಷಕರು ಭಟ್ಕಳ ಉಪ ವಿಭಾಗ ರವರ ಮಾರ್ಗ ದರ್ಶನದಲ್ಲಿ ಶ್ರೀ ಸಂತೋಷ ಕಾಯ್ಕಿಣಿ, ಸಿ.ಪಿ.ಐ. ಭಟ್ಕಳ ಗ್ರಾಮಾಂತರ ವೃತ್ತ ಮತ್ತು ಶ್ರೀ ಹಣಮಂತ ಬಿರಾದಾರ ಪಿ.ಎಸ್.ಐ ಮುರ್ಡೇಶ್ವರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಶ್ರೀ ಸಬ್ರಮಣ್ಯ ನಾಯ್ಕ,ಮಂಜುನಾಥ ಲಕ್ಕಾಪೂರ,ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಯೊಗೇಶ ನಾಯ್ಕ ಮಂಕಿ ಪೊಲೀಸ್ ಠಾಣೆಯ ಕಿರಣಕುಮಾರ ರೆಡ್ಡಿ, ಅಣ್ಣಪ್ಪ ಕೋರಿ ಹಾಗೂ ಶಿರಸಿ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಾದ, ಶ್ರೀ ಸಂತೋಷ ಕಮಟಗೇರಿ, ಹನಮಂತ ಬರ್ಗಿ, ಪ್ರಶಾಂತ ಪಾವಸ್ಥರ, ಶಿವಲಿಂಗ ತುಪ್ಪದ, ಮಾಲತೇಶ, ರಾಮಯ್ಯ, ಮಂಜು ಪೂಜಾರಿ, ಸದ್ದಾಂ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು,ಸದ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಸಂಶೆ ವ್ಯಕ್ತಪಡಿಸಿರುತ್ತಾರೆ.

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

19 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

1 day ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago