ಕೊಲೆಯಾದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆ. ಪತ್ನಿಯ ಕೊಲೆ ಪ್ರಕರಣದಲ್ಲಿ ಮೊದಲನೆಯ ಪತಿ ಜೈಲಿಗೆ ಹೋಗಿರುತ್ತಾರೆ ಆದರೆ ಪತ್ನಿ ಎರಡನೇ ಪತಿಯೊಂದಿಗೆ ರಾಜಸ್ಥಾನದಲ್ಲಿ ವಾಸವಿರುವುದು ಕಂಡುಬಂದಿರುತ್ತದೆ. ಈಕೆಯ ಕೊಲೆಯ ಕೇಸ್ ನಲ್ಲಿ ಮೊದಲನೆಯ ಪತಿ ಜೈಲು ಪಾಲಾಗಿದ್ದರು ಈಕೆ ಬದುಕಿರುವುದು ಹೇಗೆ ಎಂಬುದೇ ಆಚಾರಿ.
ಆರತಿ ದೇವಿಯ ಕೊಲೆ ಆಪಾದನೆ ಮೇರೆಗೆ ಈಕೆಯ ಪತಿ ಸೋನು ಸೈನಿ, 18 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಇದೇ ಕೊಲೆ ಕೇಸ್‌ನಲ್ಲಿ ಅವರ ಸ್ನೇಹಿತ ಗೋಪಾಲ್ ಸೈನಿ ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದಾರೆ. ಆದರೆ ಇದೇ ಮಹಿಳೆ ಮತ್ತೊಬ್ಬನ ಜತೆ ಪತ್ತೆಯಾಗಿದ್ದಾಳೆ. ಆರು ವರ್ಷದಿಂದ ಆತನ ಜತೆ ಇರುವುದು ತಿಳಿದು ಬಂದಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ಆರತಿ 2015 ರಲ್ಲಿ ನಾಪತ್ತೆಯಾಗಿದ್ದರು. ತಂದೆ ದೂರು ದಾಖಲಿಸಿದ್ದರು. ಅಪರಿಚಿತ ಮಹಿಳೆಯ ಶವ ದೊರಕಿತ್ತು. ಇದು ಆರತಿಯದ್ದೇ ಎಂದು ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಅಳಿಯನ ವಿರುದ್ಧ ಕೊಲೆ ಕೇಸ್‌ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರತಿ ಪತಿ ಹಾಗೂ ಅವರ ಸ್ನೇಹಿತ ಜೈಲಿನಲ್ಲಿದ್ದರು. ನಂತರ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಈಗ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದು, ತನಿಖೆ ನಡೆಸುತ್ತಿದ್ದಾರೆ.

Related News

error: Content is protected !!