ಕೊಟ್ಟೂರು:- ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸಂಘ ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಈ ಎರಡು ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಪಟ್ಟಣದ ಬಳ್ಳಾರಿ ಕ್ಯಾಂಪ್ ನಿವಾಸಿ ಆಫ್ರೀನ್ ಬಿ ಆತ್ಮಹತ್ಯೆಗೆ ಯತ್ನಿಸಿದ್ದು,ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನಾಂಕ: 03-02-2025 ರ ಬೆಳಿಗ್ಗೆ 11 ಘಂಟೆ ಸುಮಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸಂಘದ ಸೇವಾ ಪ್ರತಿನಿಧಿ ಜಗದೀಶ್ ರವರು ನನಗೆ ಫೋನ್ ಮಾಡಿ ನೀವು ಸಾಲದ ವಾರದ ಕಂತಿನ ಹಣವನ್ನು ಕಟ್ಟಬೇಕು ನಿಮಗೆ ಟೈಮ್ ಕೊಡಲು ಆಗುವುದಿಲ್ಲ ನೀವು ಏನಾದರೂ ಮಾಡಿಕೊಳ್ಳಿ ಸಾಲ ಕಟ್ಟಿ ಅಂತ ಕಿರುಕುಳ ನೀಡಿರುತ್ತಾರೆ ಹಾಗೂ ದಿನಾಂಕ:-02-02-2025 ರ ಸಂಜೆ 6-15 ಘಂಟೆ ಸುಮಾರಿಗೆ ಎಲ್ ಅಂಡ್ ಟಿ ಫೈನಾನ್ಸ್ ಕಂಪನಿ ಪ್ರತಿನಿಧಿ ಗಂಗಾಧರ ರವರು ಸಾಲದ ಕಂತಿನ ಹಣ ವಸೂಲಿ ಮಾಡಲು ನನ್ನ ಮನೆ ಹತ್ತಿರ ಬಂದು ನಾನು ಕಟ್ಟಬೇಕಾಗಿದ್ದ ಕಂತಿನ ಹಣ ಕಟ್ಟದಿದ್ದರೆ ನಿನಗೆ ಏನು ಮಾಡಬೇಕು ಅಂತ ನನಗೆ ಗೊತ್ತಿದೆ ನಿನಗೆ ಏನು ಮಾಡುತ್ತೇನೆ ನೋಡಿ ಅಂತ ಬೆದರಿಕೆ ಹಾಕಿರುವುದರಿಂದ ನಾನು ಸಾಯಬೇಕು ಅಂತ 03-02-2025 ರ ಮಧ್ಯಾನ್ಹ 12 ಘಂಟೆಗೆ ನನ್ನ ಮನೆಯಲ್ಲಿದ್ದ ಇರುವೆಗಳಿಗೆ ಬರೆಯುವ ವಿಷದ ಲಕ್ಷ್ಮಣ ರೇಖೆಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದಿರುತ್ತೇನೆ ನನಗೆ ಸಂಘದ ಸಾಲಗಳ ಕಂತಿನ ಹಣವನ್ನು ಕೊಡುವಂತೆ ಒತ್ತಾಯಿಸಿ ಕಿರುಕುಳ ನೀಡಿ ಬೆದರಿಕೆ ಹಾಕಿರುವ ಜಗದೀಶ್ ಮತ್ತು ಗಂಗಾಧರ ಇವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ವರದಿ: ಮಣಿಕಂಠ. ಬಿ
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…