ಕುಂದಗೋಳ; ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಕಟ್ಟಡ ಪಕ್ಕದಲ್ಲಿ ರಾಶಿ ರಾಶಿ ಕಸ ಬಿದ್ದು ಗಬ್ಬೆದ್ದು ನಾರುತ್ತಿದೆ. ಈ ಕಟ್ಟಡದ ಪಕ್ಕ ಭವ್ಯವಾದ ಕುಡಿಯುವ ನೀರಿನ ಕೆರೆ ಇದ್ದು, ಕೆರೆ ಹೊರಭಾಗದಲ್ಲಿ ಕಸದಿಂದ ಆವೃತವಾಗಿದೆ. ಅದರ ಜೊತೆಗೆ ಯರಗುಪ್ಪಿಯಿಂದ ರೊಟ್ಟಿಗವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹೊರವಲಯದಲ್ಲಿ ಕಸ ಸಂಗ್ರಹಗೊಂಡಿದ್ದು, ಹಂದಿಗಳು ಕಸದಲ್ಲಿರುವ ಪ್ಲಾಸ್ಟಿಕ್ ಮತ್ತು ಕಸ ತ್ಯಾಜ್ಯ ವಸ್ತುಗಳನ್ನು ಎಳೆದು ತಂದು ರಸ್ತೆಯಲ್ಲಿ ಬಿಡುತ್ತಿದೆ. ಇದು ಇಲ್ಲಿಯ ನಿವಾಸಿಗಳಿಗೆ ತೆಲೆ ನೋವಾಗಿ ಪರಿಣಮಿಸಿದೆ.

ಹಂದಿಗಳು ಬಿದಿ ಬಿದಿ ತಿರುಗುತ್ತಿದ್ದು ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದಲ್ಲದೇ ರೈತರ ಬಣವೆಗಳಿಗೆ ನುಗ್ಗಿ ಮೇವು ದ್ವಂಸ ಮಾಡಿರುವು ಊದಾಹರಣೆಗಳು ಸಹ ಇವೆ, ಕೂಡಲೇ ಗ್ರಾಪಂ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಇಲ್ಲಯ ಸಾರ್ವಜನಿಕರು ಆಗ್ರಹಸಿದರು.

ಹೀಗೆ ಗ್ರಾಮದ ಎಲ್ಲಡೆ ಕಸದ ರಾಶಿ , ಗಟ್ಟಾರು ಸ್ವಚ್ಚತೆ, ನಿರ್ವಹಣೆ ಇಲ್ಲದೆ ಮೂಲಭೂತ ಸೌಕರ್ಯದಿಂದ ಅವಕಾಶ ವಂಚಿತವಾಗಿದೆ ಈ ಗ್ರಾಮ. ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಾರು ಮತ್ತು ನಿರ್ಲಕ್ಷತನದವುರು ಎಂದು ಗ್ರಾಮಸ್ಥರು ದೂರಿದಾರೆ.

ಒಟ್ಟಿನಲ್ಲಿ ಸರಕಾರ ಯಾವು ಗಣಕಾರಕ್ಕೆ ಸ್ವಚ್ಚತೆ ಅಭಿಯಾನ ಆರಂಭಿಸುತ್ತೋ?

ವರದಿ: ಶಾನು ಯಲಿಗಾರ

Related News

error: Content is protected !!