Latest

ಮಹಿಳೆಯ ಕೊಲೆ ಪ್ರಕರಣಕ್ಕೆ ನಾಲ್ವರು ವಶ — ದೇಹವನ್ನು ತುಂಡುಮಾಡಿ 10ಕ್ಕೂ ಹೆಚ್ಚು ಕಡೆ ಎಸೆದ ಆರೋಪಿಗಳು

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದ ಭೀಕರ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮಹಿಳೆಯೊಬ್ಬಳನ್ನು ನಿರ್ದಯವಾಗಿ ಕೊಂದು, ಶವವನ್ನು ತುಂಡುಮಾಡಿ ವಿವಿಧ ಸ್ಥಳಗಳಲ್ಲಿ ಎಸೆದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಮೃತರನ್ನು ಲಕ್ಷ್ಮೀ ದೇವಮ್ಮ ಎಂದು ಗುರುತಿಸಲಾಗಿದ್ದು, ಈಕೆಯ ಅಳಿಯ ಡಾ. ರಾಮಚಂದ್ರ (ದಂತ ವೈದ್ಯ) ಸೇರಿ ಸತೀಶ್, ಕಿರಣ್ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಇವರ ವಿರುದ್ಧ ಭಾರಿ ಸಾಕ್ಷ್ಯಗಳು ದೊರೆತಿದ್ದು, ವಿಚಾರಣೆಯಲ್ಲಿಯೇ ಪ್ರಕರಣದ ಬಗೆ ಬಿಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಲಕ್ಷ್ಮೀ ದೇವಮ್ಮ ತಮ್ಮ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತ ಡಾ. ರಾಮಚಂದ್ರ, ಸ್ನೇಹಿತರಾದ ಸತೀಶ್ ಮತ್ತು ಕಿರಣ್‌ ಸಹಾಯದಿಂದ ಕೊಲೆ ಯತ್ನ ರೂಪಿಸಿದ್ದರು. ಸತೀಶ್‌ ಫಾರ್ಮ್‌ಹೌಸ್‌ನಲ್ಲಿ ಕೊಲೆ ನಡೆದಿದ್ದು, ನಂತರ ಶವವನ್ನು ತುಂಡುಮಾಡಿ 10ಕ್ಕೂ ಹೆಚ್ಚು ಕಡೆ ಎಸೆಯಲಾಗಿದೆ ಎನ್ನಲಾಗಿದೆ.

ಘಟನೆಯ ನಂತರ ಆರೋಪಿಗಳು ಧರ್ಮಸ್ಥಳಕ್ಕೆ ಯಾತ್ರೆಗೆ ತೆರಳಿದ್ದರೂ, ಪೊಲೀಸರು ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಘಟನೆಯ ಭೀಕರತೆ
ಆಗಸ್ಟ್ 7ರಂದು ಚಿಂಪುಗಾನಹಳ್ಳಿ ಬಳಿ ಮಹಿಳೆಯ ಕೈಗಳು ಸೇರಿದಂತೆ ಎಂಟು ಶವದ ತುಂಡುಗಳು ಪತ್ತೆಯಾಗಿದ್ದವು. ಮತ್ತೊಂದು ದಿನ, ಆಗಸ್ಟ್ 8ರಂದು ಸಿದ್ದರಬೆಟ್ಟ, ಮಲ್ಲೇಕಾವು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಪ್ಪು ಕವರ್ ಪಾಕೆಟ್‌ಗಳಲ್ಲಿ ಕಾಲು, ದೇಹದ ಭಾಗಗಳು, ತಲೆ ಸೇರಿದಂತೆ 10ಕ್ಕೂ ಹೆಚ್ಚು ತುಂಡುಗಳು ಸಿಕ್ಕಿವೆ. ಒಟ್ಟಾರೆ ಚಿಂಪುಗಾನಹಳ್ಳಿ, ಮರೇನಾಯಕನಹಳ್ಳಿ, ಚಿಕ್ಕಾವಳಿ ಕೆರೆ, ಲಿಂಗಾಪುರ, ಜೋನಿಗರಹಳ್ಳಿ ಸೇರಿದಂತೆ ಹಲವೆಡೆ ಶವದ ಭಾಗಗಳು ಪತ್ತೆಯಾಗಿವೆ.

ಕೆಲವು ಪಾಕೆಟ್‌ಗಳಲ್ಲಿ ಕಬ್ಬಿಣದ ಮೇಟಲ್ ಪೀಸ್‌ಗಳೂ ಪತ್ತೆಯಾಗಿದ್ದು, ಇದರಿಂದ ಶವವನ್ನು ಪ್ಯಾಕ್ ಮಾಡುವ ವೇಳೆ ಬಳಸಿದ ಸಾಮಗ್ರಿಗಳ ಬಗ್ಗೆ ತನಿಖೆ ಮುಂದುವರಿದಿದೆ.

ಮೊದಲಿಗೆ ವಾಮಚಾರ ಶಂಕೆ, ಈಗ ಕೊಲೆ ದೃಢ
ಘಟನೆಯ ಆರಂಭದಲ್ಲಿ, ಹಲವು ಕಡೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿರುವುದರಿಂದ ವಾಮಚಾರಕ್ಕೆ ಸಂಬಂಧಿಸಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ತನಿಖೆಯಿಂದ ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎನ್ನುವುದು ಸ್ಪಷ್ಟವಾಗಿದೆ.

ಮೃತಳ ಕೈ ಮೇಲೆ ಎರಡು ಟ್ಯಾಟೂಗಳು ಪತ್ತೆಯಾಗಿದ್ದು, ಗುರುತಿನ ಮಾಹಿತಿ ದೊರಕಲು ಸಹಾಯವಾಯಿತು. ಶವದ ಎಲ್ಲಾ ಭಾಗಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದ್ದು, ಹೆಚ್ಚಿನ ವೈಜ್ಞಾನಿಕ ತನಿಖೆ ಮುಂದುವರಿದಿದೆ.

ಪೊಲೀಸ್ ಹೇಳಿಕೆ
“ಈ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ತುಮಕೂರು ಜಿಲ್ಲಾ ಎಸ್‌ಪಿ ಅಶೋಕ್ ವೆಂಕಟ್ ತಿಳಿಸಿದ್ದಾರೆ.

ಈ ಘಟನೆ ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ಕಾಲದಲ್ಲಿ ದಾಖಲಾಗಿರುವ ಅತ್ಯಂತ ಭೀಕರ ಹತ್ಯೆಯಾಗಿ ದಾಖಲಾಗಿದ್ದು, ಸ್ಥಳೀಯರಲ್ಲಿ ಭೀತಿ ಮತ್ತು ಆಕ್ರೋಶ ಉಂಟುಮಾಡಿದೆ.

nazeer ahamad

Recent Posts

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

18 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

24 hours ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

24 hours ago

ವಿವಾಹಿತ ಮಹಿಳೆ ಜೊತೆ ಬಾಯ್‌ಫ್ರೆಂಡ್‌ ಪರಾರಿ? ಕಣ್ಣೀರಿಟ್ಟ ದೆಹಲಿ ಬ್ಲಾಗರ್; “ನನ್ನನ್ನು ಬಿಟ್ಟು ಆಕೆಯಲ್ಲೇನಿತ್ತು?”

ನವದೆಹಲಿ: ತನ್ನ ಪ್ರಿಯಕರ ಮತ್ತೊಬ್ಬ ಮಹಿಳೆಯೊಂದಿಗೆ ತೆರಳಿದ್ದಾನೆ ಎಂದು ಆರೋಪಿಸಿ ದೆಹಲಿ ಮೂಲದ ಖ್ಯಾತ ಬ್ಲಾಗರ್ ಶ್ವೇತಾ ದ್ವಿವೇದಿ ಸಾಮಾಜಿಕ…

24 hours ago

ನಕಲಿ ಮಾಲೀಕರನ್ನು ನಿಲ್ಲಿಸಿ ₹1.08 ಕೋಟಿ ಮೌಲ್ಯದ ಜಮೀನು ಮಾರಾಟ: ನಾಲ್ವರ ವಿರುದ್ಧ FIR

ಬಳ್ಳಾರಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿಜವಾದ ಜಮೀನು ಮಾಲೀಕರ ಹೆಸರನ್ನು ದುರುಪಯೋಗಪಡಿಸಿಕೊಂಡು ಸುಮಾರು ₹1.08 ಕೋಟಿ ಮೌಲ್ಯದ ಜಮೀನನ್ನು ವಂಚನೆಯಿಂದ…

1 day ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ಮುಂದುವರಿಕೆ; ವಿಚಾರಣೆಯಲ್ಲಿ ಸ್ಫೋಟಕ ಅಂಶಗಳ ಉಲ್ಲೇಖ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇದೀಗ ಮಹತ್ವದ ಹಂತ ತಲುಪಿದೆ. ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಮಾಫಿ…

2 days ago