ಇಂದಿನ ವೇಗದ ಜೀವನದಲ್ಲಿ, ಮದುವೆಯಾದ ನಂತರ ಕೆಲಸದ ಅವಶ್ಯಕತೆಗಾಗಿ ದಂಪತಿಗಳು ಕುಟುಂಬದಿಂದ ದೂರವಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಸಣ್ಣ ಮಕ್ಕಳನ್ನು ನೋಡಿಕೊಳ್ಳುವ ಸೌಕರ್ಯ ಇಲ್ಲದ ಕಾರಣ, ಹೆಚ್ಚಿನವರು ಡೇ ಕೇರ್ ಕೇಂದ್ರಗಳ ಸಹಾಯವನ್ನು ಅವಲಂಬಿಸುತ್ತಾರೆ. ಆದರೆ, ಕೆಲವೆಡೆ ಮಕ್ಕಳ ಮೇಲೆ ನಿರ್ಲಕ್ಷ್ಯ ಅಥವಾ ದುರ್ವ್ಯವಹಾರ ನಡೆಯುತ್ತಿರುವ ದೂರುಗಳು ಕೇಳಿಬರುತ್ತವೆ. ನೋಯ್ಡಾದಲ್ಲಿ ನಡೆದ ಇತ್ತೀಚಿನ ಘಟನೆ ಇದಕ್ಕೆ ನಿದರ್ಶನವಾಗಿದೆ.
ಭಯಾನಕ ಡೇ ಕೇರ್ ಕಿರುಕುಳ
ನೋಯ್ಡಾದ ಸೆಕ್ಟರ್ 137ರಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಡೇ ಕೇರ್‌ನಲ್ಲಿ 15 ತಿಂಗಳ ಮಗುವಿನ ಮೇಲೆ ಸಿಬ್ಬಂದಿ ಮೃಗೀಯ ವರ್ತನೆ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಕೆಲಸದ ನಿಮಿತ್ತ ಮಗುವನ್ನು ಪ್ರತಿದಿನ ಡೇ ಕೇರ್‌ಗೆ ಬಿಟ್ಟು ಹೋಗುತ್ತಿದ್ದ ಪೋಷಕರು, ಕೆಲವು ದಿನಗಳ ನಂತರ ಮಗುವಿನ ದೇಹದಲ್ಲಿ ಗಾಯದ ಕಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಂಕೆ ವ್ಯಕ್ತಪಡಿಸಿದರು. ವಿಚಾರಿಸಿದಾಗ, ಸಿಬ್ಬಂದಿ ಸಮರ್ಪಕ ಉತ್ತರ ನೀಡದೆ ಪೋಷಕರ ಮೇಲೆಯೇ ಅಹಂಕಾರದಿಂದ ವರ್ತಿಸಿದ್ದಾಳೆ.
ಸಿಸಿಟಿವಿ ದೃಶ್ಯಗಳಲ್ಲಿ ಆಘಾತ
ಸಿಟ್ಟಿಗೆದ್ದ ಪೋಷಕರು ಡೇ ಕೇರ್ ಆಡಳಿತಕ್ಕೆ ದೂರು ನೀಡಿ, ಅಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಬೆಚ್ಚಿಬೀಳುವಂತಹ ದೃಶ್ಯಗಳು ದಾಖಲಾಗಿದ್ದವು. ವಿಡಿಯೋದಲ್ಲಿ, ಅಳುತ್ತಿದ್ದ ಮಗುವನ್ನು ಮೊದಲಿಗೆ ಸಿಬ್ಬಂದಿ ಎತ್ತಿಕೊಂಡು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಮಗು ಅಳು ನಿಲ್ಲಿಸದಿದ್ದಾಗ ಆಕೆ ಮಗುವಿನ ಕಾಲಿಗೆ ಕೈಯಿಂದ ಚಿವುಟುವುದು, ಕೈಗೆ ಬಾಯಿಯಿಂದ ಕಚ್ಚುವುದು, ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಯುವುದು, ಹಾಗೂ ಮೇಲಿನಿಂದ ನೆಲಕ್ಕೆ ಎಸೆದು ಹಾಕುವಂತೆ ಕ್ರೂರ ವರ್ತನೆ ತೋರಿದ್ದಳು.
ಸಿಬ್ಬಂದಿ ಬಂಧನ
ಈ ದೃಶ್ಯಾವಳಿಯ ಆಧಾರದ ಮೇಲೆ ಪೋಷಕರು ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದ್ದು, ಡೇ ಕೇರ್‌ಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.
ಈ ರೀತಿಯ ಕ್ರೂರ ವರ್ತನೆಗಳು ಪೋಷಕರಲ್ಲಿ ಭೀತಿಯನ್ನು ಉಂಟುಮಾಡಿ, ಡೇ ಕೇರ್‌ಗಳ ಮೇಲೆ ಇರುವ ನಂಬಿಕೆಗೆ ದೊಡ್ಡ ಧಕ್ಕೆಯನ್ನು ತರುತ್ತಿವೆ. ಮಕ್ಕಳ ಸುರಕ್ಷತೆಯತ್ತ ಕಡ್ಡಾಯ ನಿಗಾವಹಿಸುವ ಅಗತ್ಯ ಮತ್ತೆ ಸ್ಪಷ್ಟವಾಗಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…
ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…
ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…
ನವದೆಹಲಿ: ತನ್ನ ಪ್ರಿಯಕರ ಮತ್ತೊಬ್ಬ ಮಹಿಳೆಯೊಂದಿಗೆ ತೆರಳಿದ್ದಾನೆ ಎಂದು ಆರೋಪಿಸಿ ದೆಹಲಿ ಮೂಲದ ಖ್ಯಾತ ಬ್ಲಾಗರ್ ಶ್ವೇತಾ ದ್ವಿವೇದಿ ಸಾಮಾಜಿಕ…
ಬಳ್ಳಾರಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿಜವಾದ ಜಮೀನು ಮಾಲೀಕರ ಹೆಸರನ್ನು ದುರುಪಯೋಗಪಡಿಸಿಕೊಂಡು ಸುಮಾರು ₹1.08 ಕೋಟಿ ಮೌಲ್ಯದ ಜಮೀನನ್ನು ವಂಚನೆಯಿಂದ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇದೀಗ ಮಹತ್ವದ ಹಂತ ತಲುಪಿದೆ. ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಮಾಫಿ…