ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹರಿಯಾಣದ ಮಹಿಳಾ ರೈತರ ಗುಂಪಿನ ನಡುವೆ ಶನಿವಾರ ವಿಶಿಷ್ಟ ಸಂವಾದ ನಡೆಯಿತು. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಔತಣಕೂಟಕ್ಕೆ ಆಹ್ವಾನಿಸಲ್ಪಟ್ಟ ಮಹಿಳೆಯರು ರಾಹುಲ್ ಗಾಂಧಿ ಅವರ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದು, ಈ ವೇಳೆ “ರಾಹುಲ್ ಗೆ ಮದುವೆ ಮಾಡಿ” ಎಂದು ಮಹಿಳೆಯೊಬ್ಬರು ಸಲಹೆ ನೀಡಿದರು, ಇದಕ್ಕೆ ಸೋನಿಯಾ ಗಾಂಧಿ ತಮಾಷೆಯಾಗಿ ಪ್ರತಿಕ್ರಿಯಿಸಿದರು, “ನೀವು ಅವನಿಗೆ ಹುಡುಗಿಯನ್ನು ಹುಡುಕಿ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ತಮ್ಮ ಟ್ವಿಟರ್ ನಲ್ಲಿ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಕೆಲವು ವಿಶೇಷ ಅತಿಥಿಗಳೊಂದಿಗೆ ಅಮ್ಮ, ಪ್ರಿಯಾಂಕಾ ಮತ್ತು ನನಗೆ ನೆನಪಿಡಬೇಕಾದ ದಿನವಾಗಿದ್ದು! ಸೋನಿಪತ್ನ ರೈತ ಸಹೋದರಿಯರ ದೆಹಲಿ ದರ್ಶನ, ಮನೆಯಲ್ಲಿ ಅವರೊಂದಿಗೆ ಊಟ ಮತ್ತು ಮಾಡಲು ಸಾಕಷ್ಟು ಮೋಜಿನ ವಿಷಯಗಳು. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮತ್ತು ಸಾಕಷ್ಟು ಪ್ರೀತಿ – ಅಮೂಲ್ಯ ಉಡುಗೊರೆಗಳನ್ನು ಒಟ್ಟಿಗೆ ಪಡೆದಿದ್ದೇನೆ” ಎಂದು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

Related News

error: Content is protected !!