Latest

ಸಿನಿಮಾ ಕ್ಷೇತ್ರದಲ್ಲಿ ಬಿರುಕು ಬಿಡಬೇಡಿ: ರಮ್ಯಾ–ದರ್ಶನ್ ಅಭಿಮಾನಿ ವಿವಾದಕ್ಕೆ ರಾಕ್‌ಲೈನ್ ವೆಂಕಟೇಶ್ ಗಂಭೀರ ಎಚ್ಚರಿಕೆ”

ಬೆಂಗಳೂರು – ನಟಿ ರಮ್ಯಾ ಮತ್ತು ನಟ ದರ್ಶನ್ ಅವರ ಅಭಿಮಾನಿಗಳ ನಡುವಿನ ಸಾಮಾಜಿಕ ಮಾಧ್ಯಮ ಜಟಾಪಟಿಗೆ ಸಂಬಂಧಿಸಿದಂತೆ ಇದೀಗ ಹಿರಿಯ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಲಾವಿದರ ಸಂಘದತ್ತ ಮನವಿ ಸಲ್ಲಿಸಿದ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ಚರ್ಚೆ ಪ್ರಾರಂಭವಾಗಲು ದಾರಿ ಹಾಕಿದ್ದಾರೆ.

ರಾಕ್‌ಲೈನ್ ವೇದಿಕೆ ಮೇಲೆ ಮಾತನಾಡುತ್ತಾ, “ಈ ಜಗಳಕ್ಕೆ ಕಾರಣವಾದವರಿಗೂ, ಅದನ್ನು ಮುಂದುವರಿಸಿಕೊಂಡು ಹೋಗುವವರಿಗೂ ಕಾನೂನಿನಡಿ ಶಿಕ್ಷೆಯಾಗಲೇಬೇಕು. ಎಲ್ಲೋ ಕುಳಿತು ಕೆಟ್ಟದಾಗಿ ಮಾತನಾಡೋವರು ಹೆಚ್ಚು ಅಪಾಯಕರರು. ಅವರ ಹಿಂದೆ ನಿಂತಿರುವ ಹೀರೋಗಳನ್ನ ನಾವು ನೋಡಿ ಮೌನವಾಗಬಾರದು. ಯಾರೇ ಆದ್ರೂ, ಅವರ ಫ್ಯಾನ್ಸ್ ಪೇಜ್ ಮೂಲಕ ಬಂದು ಇಂಥ ವೃತ್ತಿಯೊಂದನ್ನು ಮಾಡಿದ್ರು ಎಂದರೆ, ಶಿಕ್ಷೆ ತಪ್ಪಿಲ್ಲ,” ಎಂದು ಎಚ್ಚರಿಸಿದರು.

“ನಿಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ನೀವು ಎಷ್ಟು ಕಾಳಜಿಯಿಂದಿರುತ್ತೀರೋ, ಅಷ್ಟೇ ಕಾಳಜಿ ಇತರರ ಹೆಣ್ಣುಮಕ್ಕಳಿಗೆ ಕೂಡ ತೋರಿಸಬೇಕು. ಯಾವುದೆ ಸ್ಟಾರ್ ನಿಮ್ಮ ಮನೆಯ ಮಹಿಳೆಯರ ರಕ್ಷಣೆಗೆ ಬಾರೋದಿಲ್ಲ. ಹೀಗಾಗಿ ಯಾರ ಅಭಿಮಾನಿ ಆಗಿದ್ರೂ, ಕಾನೂನು ಮೀರಿದವರ ವಿರುದ್ಧ ಸತ್ಯದ ಬೆನ್ನಟ್ಟೋದು ಗಂಡಸ್ತನ ಕೆಲಸ,” ಎಂದರು ಅವರು.

ಚಿತ್ರರಂಗದಲ್ಲಿ ಭಯದ ವಾತಾವರಣ

ಈ ಘಟನೆಯ ಪರಿಣಾಮವಾಗಿ ಹಲವರಲ್ಲಿ ಸಿನಿಮಾ ಮಾಡುವ ಧೈರ್ಯ ಕಡಿಮೆಯಾಗುತ್ತಿದೆ ಎಂದ ಅವರು, “ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಇವರು ಕಟ್ಟಿಕೊಟ್ಟ ಚಿತ್ರರಂಗವನ್ನು ನಾವು ಎಂತಹ ಧೋರಣೆಯಲ್ಲಿ ಬಳಸುತ್ತಿದ್ದೇವೆ ಎಂಬುದರ ಬಗ್ಗೆ ತಕ್ಷಣ ಆತ್ಮಪರಿಶೀಲನೆ ಮಾಡಬೇಕು. 200 ಸಿನಿಮಾಗಳಲ್ಲಿ 30 ಮಾತ್ರ ತೆರೆಗೆ ಬರುತ್ತಿವೆ. ಫ್ಯಾನ್ಸ್‌ಗಳಿಗೆ ಮನವಿ ಮಾಡ್ತೀನಿ – ಈ ವರ್ತನೆ ತಪ್ಪಿದೆ. ಈ ತರಹದ ಸ್ವಾರ್ಥಪೂರ್ಣ ನಡೆ ಚಿತ್ರರಂಗಕ್ಕೆ ನಷ್ಟಮಾಡಬಹುದು,” ಎಂದರು.

ಕಲಾವಿದರ ಒಗ್ಗಟ್ಟಿಗೆ ಕರೆ

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಪ್ಪು ಮಾಡಿದವರು ಕ್ಷಮೆ ಕೇಳಿ ಮುನ್ನಡೆಬೇಕು. “ಚಿತ್ರರಂಗ ಸೃಜನಾತ್ಮಕತೆಯ ವೇದಿಕೆ ಆಗಬೇಕು, ಯಾರು ಬೇಕಾದರೂ ಬಂದು ಸೇರಬೇಕು. ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈಷಮ್ಯ ಬಿತ್ತುವದೇನಾದರೂ ನಡೆದಿದ್ರೆ, ಹಿರಿಯ ಕಲಾವಿದರು ಸೇರಿ ತಕ್ಷಣ ತಡೆಹಿಡಿಯಬೇಕು,” ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ

ಅಭಿಮಾನಿಗಳಿಗೆ ನೇರ ಸಂದೇಶ ನೀಡಿದ ರಾಕ್‌ಲೈನ್, “ನಾವು ಕ್ಯಾಮೆರಾ ಮುಂದೆ ನೀತಿ ಭಾಷಣ ಮಾಡ್ತೀವಿ, ಅದನ್ನ ರಿಯಲ್ ಲೈಫಲ್ಲೂ ಪಾಲಿಸಬೇಕು. ದರ್ಶನ್ ಆಗಲಿ, ಸುದೀಪ್ ಆಗಲಿ – ಎಲ್ಲರೂ ಮುಂದೆ ಬಂದು ಈ ವಿಷಯದ ಬಗ್ಗೆ ಸ್ಪಷ್ಟ ನಿಲುವು ತೋರಬೇಕು,” ಎಂದರು.

ಲೀಗಲ್ ಆಕ್ಷನ್ ತೆಗೆದ ಹಿನ್ನಲೆ

ಸೋಶಿಯಲ್ ಮೀಡಿಯಾದಲ್ಲಿ ತಾನೂ ಟ್ರೋಲ್‌ಗೆ ಗುರಿಯಾದ ಬಗ್ಗೆ ಮಾತನಾಡಿದ ರಾಕ್‌ಲೈನ್, “ನನ್ನನ್ನೂ ಗೇಲಿ ಮಾಡೋಕೆ ಹೊರಟಿದ್ರು. ನನಗೆ ಸಾಬೀತು ಸಿಕ್ಕಿದ ಮೇಲೆ ಲೀಗಲ್ ಆಕ್ಷನ್ ತೆಗೆದಿದ್ದೀನಿ. ಎಂಟು ಕೇಸ್ ಹಾಕಿದ್ದೀನಿ. ಅವರು ಇನ್ನುಲ್ತು ಹಲವಾರು ವರ್ಷಗಳ ಕಾಲ ಕೋರ್ಟ್‌ಗೆ ಹೋಗಬೇಕಿದೆ. ಸಮಯ ಬಂದಾಗ ಸತ್ಯವನ್ನು ಬಹಿರಂಗಪಡಿಸುತ್ತೀನಿ. ಆವಾಗ ಯಾರ ಬೆಂಬಲ ಸಿಗುತ್ತೆ ಅಂತ ಗೊತ್ತಾಗುತ್ತದೆ,” ಎಂದರು.

ಸಮಾಪ್ತಿಗೆ ಕರೆ

“ಇದು ಕಲಾವಿದರ ವಿರುದ್ಧವೋ ಅಭಿಮಾನಿಗಳ ವಿರೋಧವೋ ಅಲ್ಲ – ಇದೊಂದು ವೈಚಾರಿಕ ಪಾಠ. ಕಲಾವಿದರು, ಅಭಿಮಾನಿಗಳು, ನಿರ್ಮಾಪಕರು, ತಂತ್ರಜ್ಞರು ಎಲ್ಲರೂ ಒಂದಾಗಿ ಚಿತ್ರರಂಗವನ್ನು ಮುಂದೆ ಕೊಂಡೊಯ್ಯೋ ಕೆಲಸ ಮಾಡಬೇಕು,” ಎಂಬ ಮೂಲಕ ರಾಕ್‌ಲೈನ್ ವೆಂಕಟೇಶ್ ಸಮಗ್ರ ಚಿತ್ರರಂಗಕ್ಕೆ ಒಂದಾದಂತ ಒಕ್ಕೂಟದ ಸಂದೇಶ ನೀಡಿದ್ದಾರೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

nazeer ahamad

Recent Posts

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

3 minutes ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

5 minutes ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

6 minutes ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

20 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

1 day ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

1 day ago