Latest

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣ ಬಸ್ ನಿಲ್ದಾಣದ ಅವ್ಯವಸ್ಥೆ.

ದೇವರಹಿಪ್ಪರಗಿ: ಹಳೆಯ ಬಸ್‌ನಿಲ್ದಾಣದ ಕಟ್ಟಡವನ್ನು ನವೀಕರಣದ ಹೆಸರಿನಲ್ಲಿ ಕೆಡವಿ ಬಿಟ್ಟಿದ್ದಾರೆ. ಕಟ್ಟಡ ಮಾಡಿ ಒಳ್ಳೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಿ ಆದರೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮತ್ತು ಬಸ್ ನಿಲ್ಲಿಸಲು ವ್ಯವಸ್ಥೆ ಮಾಡಿ ಅನುಕೂಲಮಾಡಿ ಕೊಡಬೇಕಿತ್ತು.
ಆದರೆ ಆ ವ್ಯವಸ್ಥೆ ಮಾಡದೆ ಇರುವುದರಿಂದ ಪರದಾಡುತ್ತಿರುವ ಚಾಲಕರು ಮತ್ತು ಪ್ರಯಾಣಿಕರು, ಈ ಬಸ್‌ನಿಲ್ದಾಣ ಕಟ್ಟಡ ಕೆಡವಿದರಿಂದ ಪ್ರಯಾಣಿಕರು ಫಜೀತಿ ಪಡುವಂತಾಗಿದೆ.
ಇದರಿಂದ ಬಸ್ಸಗಾಗಿ ಕಾಯುತ್ತಿರುವ ಪ್ರಯಾಣಿಕರು ಎಲ್ಲೆಂದರಲ್ಲಿ ನಿಲ್ಲುವಂತಾಗಿದೆ. ಚಾಲಕರು ಬಸ್ ಎಲ್ಲಿ ನಿಲ್ಲಿಸುವುದೆಂದು ಗೊಂದಲಕ್ಕೆ ಒಳಗಾಗಿದರೆ.
ಒಂದು ಬಸ್ ಇನ್ನೊಂದು ಬಸ್ಸಿಗೆ ಜಾಗ ಮಾಡಿಕೊಡುವುದಕ್ಕೆ ಮುಂದಕ್ಕೆ ಚಲಿಸಿ ನಿಯಂತ್ರಣ ತಪ್ಪಿದರೆ ಅಂಗಡಿಯತ್ತ ಬಸ್ ನುಗ್ಗಿ ಅನಾಹುತ ಸಂಭವಿಸಬಹುದು.
ಈ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಕೆಸರು ಗದ್ದೆಯಂತೆಯಾಗಿ ಪ್ರಯಾಣಿಕರು, ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ದೇವರಹಿಪ್ಪರಗಿ ಇದು ತಾಲೂಕು ಕೇಂದ್ರವಾಗಿರುವದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಈ ಪಟ್ಟಣಕ್ಕೆ ಆಗಮಿಸುತ್ತಾರೆ. ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಜನ – ಜಂಗುಳಿಯಿಂದ ಕೂಡಿರುತ್ತದೆ. ವಿಜಯಪುರ, ಗುಲ್ಬರ್ಗಾ, ಇಂಡಿ, ತಾಳಿಕೋಟೆ, ಬಸವನ ಬಾಗೇವಾಡಿ, ಹೂ ಹಿಪ್ಪರಗಿ ಊರುಗಳಿಗೆ ಹೋಗಬೇಕಾದರೆ ದೇವರಹಿಪ್ಪರಗಿ ಪಟ್ಟಣದ ಮಾರ್ಗಗದಿಂದ ಬಸ್ ಬದಲಾವಣೆ ಮಾಡಿಕೊಂಡು ಹೋಗಬೇಕಾಗುತ್ತದೆ. ಮತ್ತು ಹಳ್ಳಿಗಾಡಿನ ಜನ ತಮ್ಮ ಗ್ರಾಮಕ್ಕೆ ಹೋಗಬೇಕಾದರೆ ಈ ಪಟ್ಟಣದಿಂದ ಬಸ್ ಹಿಡಿದು ತಮ್ಮ ಹಳ್ಳಿಗಳಿಗೆ ಹೋಗಬೇಕಾಗುತ್ತದೆ.
ಪ್ರಯಾಣಿಕರು ಮಳೆಯಲ್ಲಿ ನಿಂತುಕೊಂಡೆ ಬಸ್ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲದಲ್ಲಿ ಬಸ್ಸಿಗೆ ಕಾಯುವ ಪ್ರಯಾಣಿಕರು ಅಲ್ಲಿ-ಇಲ್ಲಿ ನಿಂತು, ಕುಳಿತು ಸಾಗುತ್ತಿದ್ದರು. ಆದರೆ ಈಗ ಮಳೆಗಾಲ ಪ್ರಾರಂಭವಾಗಿದೆ ಇದರಿಂದ ಜನರ ಪರಿಸ್ಥಿತಿ ಹೈರಾಣಗುತ್ತಿದೆ. ಈ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ, ಚಾಹದ ಅಂಗಡಿಯಲ್ಲಿ ಚಾಹ ಕುಡಿದರೆ ಮಾತ್ರ ನೀರು ಕುಡಿಯಲು ಕೊಡುತ್ತಾರೆ. ಈ ಬಸ್ ನಿಲ್ದಾಣದಲ್ಲಿ ಕುಳಿತು ಕೊಳ್ಳಲು ಬಿಡಿ ನಿಂತುಕೊಳ್ಳಲು ವ್ಯವಸ್ಥೆಯಿಲ್ಲ ಎಂದು ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧಪಟ್ಟ ಇಲಾಖೆಯವರು, ಶಾಸಕರು ಗುತ್ತಿಗೆ ಹಿಡಿದಂತ ಗುತ್ತಿಗೆದಾರ ಈ ಕಡೆ ಸ್ವಲ್ಪ ಲಕ್ಷ್ಯವಹಿಸಿದರೆ ಪ್ರಯಾಣಿಕರು ಸುರಕ್ಷಿತವಾಗಿ ಮಳೆಗಾಲವನ್ನು ಕಳೆಯಬಹುದು.
ವರದಿ : ಮಹಾಂತೇಶ ಹಾದಿಮನಿ

ಭ್ರಷ್ಟರ ಬೇಟೆ

Recent Posts

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ಬೇಸತ್ತು ಚರಂಡಿ ಸ್ವಚ್ಛಗೊಳಿಸಿದ ಮಹಿಳೆ.

ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…

7 hours ago

ಬಸವನ ಬಾಗೇವಾಡಿಯಲ್ಲಿ ಅಕ್ರಮ LPG ರೀಫಿಲ್ಲಿಂಗ್ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳಿಂದ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಆರೋಪ…

14 hours ago

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

2 days ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

2 days ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

3 days ago