Categories: CrimeLatest

‘ಮರ್ಯಾದೆ’ ಹೆಸರಿನ ಕ್ರೌರ್ಯ: ಪ್ರೀತಿಸಿದ ತಂಗಿಗೆ ವಿಷ ಕುಡಿಸಿ ಕೊಂದ ಅಣ್ಣಂದಿರು!

ಬೆಳಗಾವಿ: ರಾಜ್ಯದಲ್ಲಿ ಕಾನೂನು ಕಠಿಣವಾಗಿದ್ದರೂ, ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ಹತ್ಯೆಗಳು ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಹುಬ್ಬಳ್ಳಿ ಘಟನೆಯ ಬೆನ್ನಲ್ಲೇ, ಈಗ ಬೆಳಗಾವಿ ಜಿಲ್ಲೆಯಲ್ಲೂ ಮತ್ತೊಂದು ಭೀಕರ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಪ್ರೀತಿಸಿದ ಕಾರಣಕ್ಕೆ ಯುವತಿಯೊಬ್ಬಳು ತನ್ನದೇ ಕುಟುಂಬದವರಿಂದ ಜೀವ ಕಳೆದುಕೊಂಡಿದ್ದಾಳೆ.

ಪ್ರೀತಿಯ ದಾರಿ ಹಿಡಿದ ಸತ್ಯವ್ವ
ಸೌದತ್ತಿ ತಾಲೂಕಿನ ಸತ್ಯವ್ವ ಎಂಬ ಯುವತಿ ಕೃಷ್ಣ ಪಾಟೀಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯವರ ವಿರೋಧದ ನಡುವೆಯೂ ಫೆಬ್ರವರಿ 17ರಂದು ಇಬ್ಬರೂ ಓಡಿಹೋಗಿ ಬೆಳವಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಈ ಸಂಬಂಧವನ್ನು ಕುಟುಂಬಸ್ಥರು ಒಪ್ಪಿಕೊಳ್ಳದೇ ವಿರೋಧ ಮುಂದುವರಿಸಿದ್ದರು.

ರಾಜಿ ಸಂಧಾನದ ಹೆಸರಿನಲ್ಲಿ ಪ್ಲಾನ್
ಕೆಲವು ದಿನಗಳ ನಂತರ ಕುಟುಂಬಸ್ಥರು ಇವರಿಬ್ಬರನ್ನು ಪತ್ತೆಹಚ್ಚಿ ಊರಿಗೆ ಕರೆತಂದರು. ಮೇಲ್ನೋಟಕ್ಕೆ ರಾಜಿ ಸಂಧಾನದ ಮಾತು ನಡೆಸಿದರೂ, ಒಳಗೊಳಗೆ ಕ್ರೂರ ಸಂಚು ರೂಪಿಸಿದ್ದರು. ಸತ್ಯವ್ವಳನ್ನು ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಿ, ಪ್ರಿಯಕರನನ್ನು ಮರೆತುಬಿಡುವಂತೆ ಒತ್ತಾಯಿಸಿದರು. ಆದರೆ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ವಿಷ ಕುಡಿಸಿ ಕೊಲೆ, ನಂತರ ಶವ ಸುಟ್ಟು ಸಾಕ್ಷಿ ನಾಶ
ಮಾರ್ಚ್ 21ರಂದು ಅರಗ ಗ್ರಾಮಕ್ಕೆ ಕರೆತಂದ ಬಳಿಕ, ಅಣ್ಣ ಶಾನೂರ, ಚಿಕ್ಕಪ್ಪ ಪ್ರಕಾಶ ಹಾಗೂ ಭಾವ ಕಲ್ಲಪ್ಪ ಸೇರಿ ಸತ್ಯವ್ವಳಿಗೆ ಬಲವಂತವಾಗಿ ವಿಷ ಕುಡಿಸಿದ್ದಾರೆ. ನಂತರ, ಈ ಕ್ರೂರ ಕೃತ್ಯವನ್ನು ಮರೆಮಾಚಲು ಶವವನ್ನು ಹಾಸಿಗೆ-ಬಟ್ಟೆ ಸಮೇತ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ.

ಪ್ರಿಯಕರನ ಅನುಮಾನದಿಂದ ಬಯಲಾಯ್ತು ಪ್ರಕರಣ
ಸತ್ಯವ್ವ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕೃಷ್ಣ ಪಾಟೀಲ್ ಅನುಮಾನಗೊಂಡು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಪಿಐ ಜಾವೇದ್ ಮುಶಪೂರಿ ನೇತೃತ್ವದ ಪೊಲೀಸರು ಶಾನೂರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳ ಬಂಧನ
ಈ ಪ್ರಕರಣದಲ್ಲಿ ಅಣ್ಣ ಶಾನೂರ, ಚಿಕ್ಕಪ್ಪ ಪ್ರಕಾಶ ಮತ್ತು ಭಾವ ಕಲ್ಲಪ್ಪರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

ಸಮಾಜಕ್ಕೆ ಪ್ರಶ್ನೆ
‘ಮರ್ಯಾದೆ’ ಎಂಬ ಹೆಸರಿನಲ್ಲಿ ಪ್ರೀತಿಸಿದವರನ್ನೇ ಕೊಲ್ಲುವ ಮನೋಭಾವ ಇನ್ನೂ ಜೀವಂತವಾಗಿರುವುದು ಆತಂಕಕಾರಿ. ಸತ್ಯವ್ವಳ ದುಃಖದ ಅಂತ್ಯ, ಸಮಾಜದ ಮುಂದೆ ಮತ್ತೊಮ್ಮೆ ಗಂಭೀರ ಪ್ರಶ್ನೆ ಎತ್ತಿದೆ.

ಭ್ರಷ್ಟರ ಬೇಟೆ

Recent Posts

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

14 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

18 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago

ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…

2 days ago