ಕೋಲಾರ, ಜೂನ್ 11 – ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ಅಧಿಕಾರದ ದುರ್ಬಳಕೆ ಹಾಗೂ ಮಾಮೂಲಿ ಹಣ ವಸೂಲಿಗೆ ಸಂಬಂಧಿಸಿದ ಪ್ರಕರಣವೊಂದು ಮುನ್ನೆಚ್ಚರಿಕೆಯ ದಾಳಿಯಿಂದ ಹೊರಬಿದ್ದಿದೆ. ಲೋಕಾಯುಕ್ತ ಇಲಾಖೆಯು ನೇರವಾಗಿ ಚಟುವಟಿಕೆ ನಡೆಸಿ, ಠಾಣೆಯ ಪೇದೆ ಹಾಗೂ ಪಿಎಸ್‌ಐ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಪೇದೆ ಸುರೇಶ್ ಅವರು ನಂಗಲಿಯಲ್ಲಿನ ಬಾರ್ ಮಾಲೀಕರಿಂದ ಪ್ರತಿದಿನ ಮಾಮೂಲಿ ಹಣ ಸಂಗ್ರಹಿಸುತ್ತಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಹಲವು ದಿನಗಳಿಂದ ಗುಪ್ತ ನಿಗಾವಹಿಸಿದ್ದರು. ಇತ್ತೀಚೆಗೆ ನಡೆದ ದಾಳಿಯಲ್ಲಿ, ಸುರೇಶ್ ಅವರು ಬಾರ್ ಮಾಲೀಕ ಪ್ರಶಾಂತ್ ಬಳಿ ₹10,000 ಲಂಚ ಸ್ವೀಕರಿಸುತ್ತಿರುವಾಗಲೇ ಬಲೆಗೆ ಬಿದ್ದಿದ್ದಾರೆ.
ಆತನ ವಶದಲ್ಲಿರುವ ಲೋಕಾಯುಕ್ತರು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ, ಈ ಹಣ ಸಂಗ್ರಹ ಕಾರ್ಯ ನಂಗಲಿ ಠಾಣೆಯ ಪಿಎಸ್ಐ ಅರ್ಜುನ್ ಗೌಡ ಅವರ ಆದೇಶದಂತೆ ನಡೆಯುತ್ತಿದ್ದುದಾಗಿ ಸುರೇಶ್ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ PSI ಅರ್ಜುನ್ ಗೌಡ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಭರ್ಜರಿ ದಾಳಿಗೆ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ನೇತೃತ್ವ ವಹಿಸಿದ್ದು, ಕೋಲಾರದ ಲೋಕಾಯುಕ್ತ ಎಸ್‌ಪಿಐ ಧನುಂಜಯ ಅವರು ಕೂಡ ನಂಗಲಿ ಠಾಣೆಗೆ ಭೇಟಿ ನೀಡಿ ತನಿಖೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಪ್ರಸ್ತುತ ಇಬ್ಬರೂ ಅಧಿಕಾರಿಗಳು ಲೋಕಾಯುಕ್ತದ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.
ನ್ಯಾಯದ ಸಂಕೇತವಾಗಬೇಕಾದ ಠಾಣೆಯೊಳಗೇ ಲಂಚ ಸಂಸ್ಕೃತಿಯು ದಿನನಿತ್ಯದ ಸಂಪ್ರದಾಯದಂತಾಗಿ ಬೆಳೆದುಬಂದಿರುವುದು ಸಾರ್ವಜನಿಕರಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟನೆ, ಇತರ ಠಾಣೆಗಳಲ್ಲಿಯೂ ಇಂತಹ ಭ್ರಷ್ಟಾಚಾರ ನಡೆಯುತ್ತಿರುವುದೇ ಎಂಬ ಆತಂಕವನ್ನು ಹುಟ್ಟುಹಾಕಿದ್ದು, ಅಧಿಕಾರಿಗಳ ಮೇಲ್ವಿಚಾರಣೆಯ ಅಗತ್ಯತೆ ಪುನಃ ಒತ್ತಿ ಹೇಳುತ್ತಿದೆ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…