ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಕೋಳಿ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಪರಿಣಾಮ ನೂರಾರು ಕೋಳಿಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅವುಗಳನ್ನು ಹಿಡಿದುಕೊಳ್ಳಲು ಮುಗಿಬಿದ್ದ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.
ಲಾರಿ ಪಲ್ಟಿಯಾದ ಕ್ಷಣ
ಮಾಹಿತಿಯ ಪ್ರಕಾರ, ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಅಚಾನಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ್ದರಿಂದ, ಲಾರಿಯಲ್ಲಿದ್ದ ಕೋಳಿಗಳು ರಸ್ತೆಯ ಮೇಲೆ ಹರಡಿದವು. ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಹಾದುಹೋಗುತ್ತಿದ್ದ ಪ್ರಯಾಣಿಕರು ಲಾರಿ ಸಮೀಪಕ್ಕೆ ದೌಡಾಯಿಸಿ, ಕೈಗೆ ಸಿಕ್ಕಷ್ಟು ಕೋಳಿಗಳನ್ನು ಹಿಡಿದುಕೊಳ್ಳಲು ಹರಸಾಹಸ ಪಟ್ಟರು.
ಜನರ ಹಾವಳಿ, ವೈರಲ್ ಆಗಿದ ದೃಶ್ಯ
ಘಟನೆಯ ಸುದ್ದಿಯೊಡನೆ ಪಕ್ಕದ ಹಳ್ಳಿಯವರೂ ಸ್ಥಳಕ್ಕೆ ಆಗಮಿಸಿ ಕೋಳಿಗಳನ್ನು ಹಿಡಿಯಲು ಮುಗಿಬಿದ್ದರು. ಈ ಗದ್ದಲದ ಮಧ್ಯೆ ಕೆಲವರು ಕೈಗೆ ಸಿಕ್ಕಷ್ಟು ಕೋಳಿಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಲು ಪ್ರಾರಂಭಿಸಿದರು. ಕೆಲವರು ಬೈಕ್ ಹಾಗೂ ಸೈಕಲ್ ಬಳಸಿ ಕೋಳಿಗಳನ್ನು ಸಾಗಿಸಿಕೊಳ್ಳುತ್ತಿದ್ದರೆ, ಇತರ ಕೆಲವರು ಬಟ್ಟೆ ಹಾಗೂ ಚೀಲಗಳಲ್ಲಿ ತುಂಬಿಕೊಂಡು ಹೋಗುವ ದೃಶ್ಯವೂ ಕಂಡುಬಂದಿದೆ.
ಸದ್ಯ, ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದು, ನೆಟ್ಟಿಗರು ಇದರ ಬಗ್ಗೆ ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಲಾರಿಯ ಚಾಲಕನ ಸ್ಥಿತಿ ಹಾಗೂ ಅಪಘಾತದ ಪೈಚಾರಿ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…