ಕೊಟ್ಟೂರು:- ಪಟ್ಟಣದಲ್ಲಿ ಬೈಕ್ ನ ಹ್ಯಾಂಡ್ ಲಾಕ್ ಮುರಿದು ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆರೋಪಿತನಿಂದ 1,00,000 ರೂ ಬೆಲೆ ಬಾಳುವ ಒಟ್ಟು ಮೂರು ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ದಿನಾಂಕ 07-05-2025 ರಂದು ರಾತ್ರಿ 8-15 ಘಂಟೆಗೆ ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡ ಕೊಟ್ಟೂರು ಪೊಲೀಸರು ಆರೋಪಿತನ ಪತ್ತೆಗಾಗಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿವೈಎಸ್ಪಿ ಕೂಡ್ಲಿಗಿ ರವರ ಮಾರ್ಗದರ್ಶನದಲ್ಲಿ ಶ್ರೀ ವೆಂಕಟಸ್ವಾಮಿ.ಟಿ,ಸಿಪಿಐ ಕೊಟ್ಟೂರು ರವರ ನೇತೃತ್ವದಲ್ಲಿ ಶ್ರೀ ಮತಿ ಗೀತಾಂಜಲಿ ಶಿಂಧೆ ಪಿಎಸ್ಐ,ಸಿಬ್ಬಂದಿಗಳಾದ ಶ್ರೀ ಬಸವರಾಜ್ ಹೆಚ್,ಶ್ರೀ ವೀರೇಶ್,ಶ್ರೀ ಶಶಿಧರ,ಶ್ರೀ ನಾಗಪ್ಪ,ಶ್ರೀ ಯರಿಸ್ವಾಮಿ,ಇವರುಗಳ ನೇತೃತ್ವದಲ್ಲಿ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ ಕಾರ್ಯನಿರತರಾಗಿ ಆರೋಪಿ ಕೆ.ಹನುಮಂತ@ಟಿಂಗು ತಂದೆ ತಿಂದಪ್ಪ 23 ವರ್ಷ ವಾಸ ಉಜ್ಜಿನಿ ಹೊಸ ಪ್ಲಾಟ್ ಉಜ್ಜಿನಿ,ಕೊರವ ಜನಾಂಗಕ್ಕೆ ಸೇರಿದ್ದು ಗಾರೆ ಕೆಲಸ ಮಾಡಿಕೊಂಡಿರುತ್ತಾನೆ.
ಈತನನ್ನು ದಿನಾಂಕ 09-05-2025 ರಂದು ಬೆಳಿಗ್ಗೆ 11-45 ಘಂಟೆಗೆ ಕೊಟ್ಟೂರು ಪಟ್ಟಣದ ಶ್ರೀ ಮರುಳ ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತನಿಂದ ಅಂದಾಜು 1,00,000 ರೂ ಬೆಲೆ ಬಾಳುವ ಹೀರೋ ಸ್ಪ್ಲೆಂಡರ್ ಪ್ಲಸ್ ಮೂರು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಪತ್ತೆ ಕಾರ್ಯಾಚರಣೆಗೆ ಮಾನ್ಯ ಶ್ರೀ ಹರಿಬಾಬು ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ವರದಿ:- ಮಣಿಕಂಠ. ಬಿ
ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…
Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…
ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…
ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…