Latest

ಸವಾಲಾದ ಒಳಚರಂಡಿ ವ್ಯವಸ್ಥೆಯ ನಿರ್ವಹಣೆ.

ಮ್ಯಾನ್ ಹೋಲ್ ನಿಂದ ಗಲೀಜು ಹೊರಗೆ ಹರಿದು ಬರುತ್ತಿದೆ. ರಸ್ತೆಯ ತುಂಬೆಲ್ಲ ಗಬ್ಬು ತ್ಯಾಜ್ಯ ಹರಡಿಕೊಂಡು ಒಂದು ವಾರ ಕಳೆದಿದೆ. ದುರಸ್ತಿ ಮಾಡುವಂತೆ ಮಹಾನಗರ ಪಾಲಿಕೆಗೆ ಮನವಿ ಕೊಟ್ಟರೂ ಕೂಡ ಸ್ಪಂದಿಸುತ್ತಿಲ್ಲ. ಹುಬ್ಬಳ್ಳಿಯ ಹೃದಯ ಭಾಗ ಜೆಸಿ ನಗರದ ಅಜಂತಾ ಹೋಟೆಲ್ ಪಕ್ಕದ ಆಟೋ ನಿಲ್ದಾಣದಲ್ಲಿದ್ದ ಆಟೋ ಚಾಲಕರೊಬ್ಬರ ಮಾತಿದು. ಇದು ಕೇವಲ ಅವರೊಬ್ಬರದೇ ಸಮಸ್ಯೆ ಅಲ್ಲ, ಅವಳಿ ನಗರದ ಬಹುತೇಕ ಭಾಗಗಳಲ್ಲಿ ಇಂತಹ ದೂರುಗಳು ಕೇಳಿ ಬರುತ್ತಿವೆ. ಅವಳಿ ನಗರದ ಹಲವಡೆ ಮ್ಯಾನ್ ಹೋಲ್ ಗಳು ಭರ್ತಿಯಾಗಿ, ತ್ಯಾಜ್ಯ ನೀರು ಹೊರಚಿಮ್ಮುವ ಸಮಸ್ಯೆ ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಯಲ್ಲೂ ಸಹ ಕಾಣಬಹುದಾಗಿದೆ. ನಗರದ ಪ್ರತಿ ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ ಹಲವಾರು ದಶಕಗಳ ಹಿಂದೆ ಆಳವಡಿಸಿದ ಒಳಚರಂಡಿ ಯು ಜಿ ಡಿ, ಅಳವಡಿಸಿದ ಕೊಳವೆಗಳು ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಹೀಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ( ಕೆ ಯು ಡಬ್ಲ್ಯೂ ಎಸ್ ಡಿ ಬಿ) ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಒಳಚರಣಿ ವ್ಯವಸ್ಥೆ ದುರಸ್ತಿ ಮತ್ತು ನಿರ್ವಹಣೆ ಮಾಡುವುದು ದಿನ ಕಳೆದಂತೆ ಸವಾಲಾಗಿ ಪರಿಣಮಿಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ( ಕೆ ಯು ಡಬ್ಲ್ಯೂ ಎಸ್ ಡಿ ಬಿ) ಮೂಲಕ 40 ಕೋಟಿ ವೆಚ್ಚದಲ್ಲಿ ವಿವಿಧ ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಪ್ರದೇಶಗಳನ್ನು ಗುರುತಿಸಿ, ಚಿಕ್ಕದಾದ ಕೊಳವೆಗಳನ್ನು ಬದಲಾಯಿಸುವ ಕಾಮಗಾರಿ ಈಗಾಗಲೇ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಬಹುತೇಕ 99 ರಷ್ಟು ಪ್ರದೇಶವು ಒಳಚರಂಡಿ ವ್ಯವಸ್ಥೆಗೆ ಒಳಪಟ್ಟಿದೆ. ಹೊಸದಾಗಿ ತಲೆ ಎದ್ದಿರುವ ಕೆಲ ಬಡಾವಣೆಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇಲ್ಲ ಎನ್ನುವುದು ಹುಬ್ಬಳ್ಳಿ ಧಾರವಾಡ ಪಾಲಿಕೆಯ ಅಧಿಕಾರಿಗಳ ವಿವರಣೆ. ಧಾರವಾಡ ನಗರದಲ್ಲಿ ಒಳ ಚಲನ ವ್ಯವಸ್ಥೆ ಅಯೋಮಯವಾಗಿದೆ. ಜಿಲ್ಲಾ ಕೇಂದ್ರವಾದರೂ ಇದುವರೆಗೂ ಶೇಕಡ 40ರಷ್ಟು ಪ್ರದೇಶದಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಿದೆ. ಶೇಕಡ 60 ರಷ್ಟು ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ. ವಿವಿಧ ಯೋಜನೆಗಳ ಅಡಿ ಯು ಜಿ ಡಿ ಕಾಮಗಾರಿ ಮಾಡುವುದಕ್ಕಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸರ್ಕಾರದಿಂದ ಅನುದಾನ ಪಡೆಯುವುದಕ್ಕಾಗಿ ಪ್ರಸ್ತಾವ ಸಲ್ಲಿಸಿದೆ. ಅಮೃತ್ ಯೋಜನೆ 1 ಅನುದಾನದಲ್ಲಿ ಧಾರವಾಡದ ಕೆಲವು ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇರುವ ರೀತಿಯಲ್ಲಿ ಕಾಮಗಾರಿಯಾಗಿದೆ. ಒಳಚರಂಡಿ ವ್ಯವಸ್ಥೆ ಇರುವ ಪ್ರದೇಶಕ್ಕಿಂತಲೂ ವ್ಯವಸ್ಥೆ ಇಲ್ಲದ ಪ್ರದೇಶವೇ ಹೆಚ್ಚಿನ ಪ್ರಮಾಣದಲ್ಲಿದೆ.

ಹೊಸ ಕಾಮಗಾರಿ: ಧಾರವಾಡ ನಗರದ ವಾರ್ಡ್ ಸಂಖ್ಯೆ 1 ರಿಂದ 9 ರ ವ್ಯಾಪ್ತಿಯಲ್ಲಿ ಸಮಗ್ರವಾಗಿ ಒಳಚರಂಡಿ ವ್ಯವಸ್ಥೆ ಮಾಡುವುದಕ್ಕಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಡಿಪಿಆರ್ ಸಿದ್ದಪಡಿಸಲಾಗಿದೆ. ಧಾರವಾಡದ ಶಾಸಕರಾದ ವಿನಯ್ ಕುಲಕರ್ಣಿ ರಾಜ್ಯ ಸರ್ಕಾರದಿಂದ 170 ಕೋಟಿ ಅನುದಾನ ಮಂಜೂರಾತಿ ಮಾಡಿಸಿದರು. ಹೊಸದಾಗಿ ಯು ಜಿ ಡಿ ಕಾಮಗಾರಿ ಆರಂಭಿಸುವುದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಎಂದು ಮಹಾನಗರ ಪಾಲಿಕೆಯ ಸೂಪರ್ ಹಿಟ್ ಎಂಜಿನಿಯರ್ ವಿಜಯಕುಮಾರ್ ಅವರು ತಿಳಿಸಿದರು. ಹುಬ್ಬಳ್ಳಿ ಹೊಸಕೋಟೆ ಮುಂಭಾಗ ಕಲ್ಲೂರ ಲೇಔಟ್ ಮಾರ್ಗದಲ್ಲಿರುವ ಮ್ಯಾನ್ ಹೋಲ್ ನಿಂದ ಹಲವು ತಿಂಗಳುಗಳಿಂದ ಹೊರಗೆ ಬಂದು ರಸ್ತೆಯ ಮೇಲೆ ಹರಿಯುತ್ತಿದೆ. ಧಾರವಾಡದಲ್ಲಿಯೂ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಬರಲಿದೆ. ಹುಬ್ಬಳ್ಳಿ ನಗರ ಸಂಪೂರ್ಣ ವ್ಯವಸ್ಥೆಯಲ್ಲಿದೆ. ಆದರೆ ಕೆಲವು ಕಡೆ ಕೊಳವೆ ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ ವಿಜಯಕುಮಾರ್ ಆರ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸೂಪರಿಡೆಂಟ್ ಎಂಜಿನಿಯರ. ಜನರಿಂದ ವ್ಯಕ್ತವಾದ ಆಕ್ರೋಶ ಒಳ ಚರಂಡಿ ಭರ್ತಿಯಾಗಿ ಮ್ಯಾನ್ ಹೋನ್ ಮೂಲಕ ರಸ್ತೆಯಲ್ಲಿ ಗಲೀಜು ಹೊರ ಚಿಮ್ಮುವ ಸಮಸ್ಯೆ ಕೆಲವು ಕಡೆಗಳಲ್ಲಿ ಶಾಶ್ವತ ಎನ್ನುವಂತಾಗಿದೆ. ಹುಬ್ಬಳ್ಳಿಯ ಹೆಗ್ಗೇರಿ ಮಾರುತಿ ನಗರದ ಮೂಲಕ ಆರ್ ಎನ್ ಶೆಟ್ಟಿ ರಸ್ತೆ ಸಂಪರ್ಕಿಸುವ ಮಾರ್ಗದಲ್ಲಿ ಮ್ಯಾನ್ ಹೋಲ್ ಬಾಯ್ತೆರೆದು ಸಮಸ್ತ ನಿರ್ಮಾಣವಾಗುವುದು ಪುನರಾವರ್ತನೆ ಆಗುತ್ತಲೇ ಇದೆ. ಆಕ್ರೋಶಗೊಂಡ ಜನರು ರಸ್ತೆ ಸಂಚಾರವನ್ನು ತಡೆದು ಈಚೆಗೆ ಪ್ರತಿಭಟನೆ ನಡೆಸಿದರು.

ವರದಿ: ಶಿವರಾಜ್ ಪಿ.ಆರ್.

ಭ್ರಷ್ಟರ ಬೇಟೆ

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

8 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

8 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

8 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

8 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

1 day ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

1 day ago