
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವ ಆರೋಪ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದ್ದ ಈ ಜೋಡಿ ರೀಲ್ಸ್ ಹಾಗೂ ವ್ಲಾಗ್‌ಗಳ ಮೂಲಕ ‘ಕ್ಯೂಟ್ ಕಪಲ್’ ಎಂದೇ ಗುರುತಿಸಿಕೊಂಡಿತ್ತು. ಆದರೆ ಇದೀಗ ಇದೇ ಜೋಡಿಯ ವೈಯಕ್ತಿಕ ಜೀವನದ ಕುರಿತಾದ ಆರೋಪವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ
ಮೇಘಾ ತಮ್ಮ ಮನೆಯಿಂದ ಸ್ಥಳೀಯ ಬಸ್‌ನ ಕಂಡಕ್ಟರ್ ಒಬ್ಬರೊಂದಿಗೆ ತೆರಳಿದ್ದಾರೆ ಎಂದು ಅಖಿಲ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಪತ್ನಿ ಮನೆಯಿಂದ ತೆರಳುವಾಗ ನಗದು, ಚಿನ್ನಾಭರಣ ಸೇರಿದಂತೆ ಕೆಲವು ಬೆಲೆಬಾಳುವ ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ ಅಖಿಲ್ ಭಾವನಾತ್ಮಕವಾಗಿ ಮಾತನಾಡಿದ್ದು, ಈ ಘಟನೆ ತಮ್ಮ ಮೇಲೆ ತೀವ್ರ ಮಾನಸಿಕ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಖುಷಿಯ ಕ್ಷಣಗಳನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಈ ಆರೋಪ ಆಘಾತವನ್ನುಂಟು ಮಾಡಿದೆ.
ಅಸಲಿ ಕಾರಣವೇನು?
ಸದ್ಯ ಅಖಿಲ್ ಮಾಡಿರುವ ಆರೋಪಗಳು ಮಾತ್ರ ಸಾರ್ವಜನಿಕವಾಗಿ ಲಭ್ಯವಾಗಿದ್ದು, ಮೇಘಾ ಅವರ ಕಡೆಯಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಹೀಗಾಗಿ ದಂಪತಿಯ ನಡುವೆ ನಿಜವಾಗಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಖಿಲ್ ಅವರ ಆರೋಪಗಳು ಸತ್ಯವೇ, ಮೇಘಾ ಅವರ ಕಡೆಯಿಂದ ಇದಕ್ಕೆ ಬೇರೆಯದೇ ಕಾರಣವಿದೆಯೇ ಎಂಬುದು ಅವರ ಪ್ರತಿಕ್ರಿಯೆ ಅಥವಾ ಅಧಿಕೃತ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುವ ನಗು ಮತ್ತು ವಾಸ್ತವ ಜೀವನದ ನಡುವಿನ ಅಂತರ ಎಷ್ಟಿರಬಹುದು ಎಂಬ ಚರ್ಚೆಗೂ ಈ ಘಟನೆ ಕಾರಣವಾಗಿದೆ. ಸದ್ಯ ‘ಕ್ಯೂಟ್ ಕಪಲ್’ ಎಂದೇ ಖ್ಯಾತರಾಗಿದ್ದ ಅಖಿಲ್-ಮೇಘಾ ಅವರ ಸಂಬಂಧದ ಕುರಿತಾದ ಈ ವಿವಾದ ನೆಟ್ಟಿಗರ ಗಮನ ಸೆಳೆದಿದೆ.






