ಯಲ್ಲಾಪುರದಲ್ಲಿ ಭೀಕರ ಅನಾಹುತ ದೀ 27 ರಂದು ಮದ್ಯಾಹ್ನ 3 ರ ಸುಮಾರಿಗೆ ಯಲ್ಲಾಪುರದ ನಾಯ್ಕನಕೆರೆ ಹತ್ತಿರ ಸಿದ್ಧಿ ವಿನಾಯಕ ಟ್ರೇಡರ್ಸ್ ಎದುರಿಗೆ N H 63 ರಸ್ತೆಯ ಮೇಲೆ ಬುಲೆರೋ ಪಿಕ್ ಅಪ್ ವಾಹನ ಗಾಡಿ ನಂಬರ್ KA 25 AB 8002 ವಾಹನ ಚಾಲಕ ದಿನೇಶ ತಂದೆ ಚದರಸಿಂಗ ಈತನು ತನ್ನ ವಾಹನವನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗ ಹಾಗೂ ಚಾಲನೆ ಮಾಡಿಕೊಂಡು ನಿಷ್ಕಾಳಜಿಯಿಂದ ಬಂದವನು ತನ್ನ ಮುಂದೆ ಹೋಗುತ್ತಿದ್ದ ಟ್ರಕ್ ನ್ನು ಓವರ್ ಟೇಕ್ ಮಾಡಿದ್ದು ಅಲ್ಲದೆ ತನ್ನ ರಸ್ತೆಯ ಬಲಬದಿಗೆ ಹೋಗಿದ್ದು ತನ್ನ ವೇಗವನ್ನು ನಿಯಂತ್ರಿಸಲಾಗದೆ ಯಲ್ಲಾಪುರ ಟೌನ್ ಕಡೆಯಿಂದ ನಾಯ್ಕನಕೆರೆ ಕಡೆಗೆ ಸಚಿನ್ ಇವರು ತನ್ನ ವಾಹನವನ್ನು ಬಲಭಾಗದಿಂದ ತನ್ನ ಬದಿಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ಗಾಡಿ ನಂ KA 31 R 5917 ದ್ವಿಚಕ್ರ ವಾಹನ ಅಪಘಾತ ಪಡಿಸಿದ್ದರಿಂದಲೇ ಈ ಅಪಘಾತವಾಗಿ , ಮೋಟಾರ್ ಸೈಕಲ್ ಸವಾರನದ ಸಚಿನ ಈತನ ತಲೆ ಒಡೆದು , ಮೆದುಳು ಮಾಂಸ ಹೊರಬಂದಿದ್ದು ಬಲ ಕಾಲು ಮುರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ, ಮೋಟಾರ್ ಹಿಂಬದಿ ಸವಾರ ದೀಪಕ ಈತನ ಕಾಲಿಗೆ , ಕೈ ಗೆ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಪೆಟ್ಟು ಪಡಿಸಿ , ಎರಡೂ ವಾಹನಗಳನ್ನು ಜಖಂಗೊಳಿಸಿದ್ದಾನೆ . ಸದರಿ ಬುಲೆರೋ ಪಿಕ್ ಅಪ್ ವಾಹನದ ಚಾಲಕನ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ವರದಿ : ಶ್ರೀಪಾದ್ ಎಸ್ ಏಚ್

Related News

error: Content is protected !!