Categories: CrimeLatest

ಫೋನ್‌ಪೇ ಹಣ ಪಾವತಿ ನಕಲಿ ಸಂದೇಶ ತೋರಿಸಿ ಮೊಬೈಲ್ ವಂಚನೆ: ಬೆಂಗಳೂರಿನಲ್ಲಿ ಆರೋಪಿಯ ಬಂಧನ

ಕುಮಟಾ: ಮೊಬೈಲ್ ಖರೀದಿಸಿ ಫೋನ್‌ಪೇ ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಸಂದೇಶ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ ಕುಮಟಾದ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಮಾತೋಶ್ರೀ ಏಜೆನ್ಸಿಸ್ ಮೊಬೈಲ್ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ರಿಯಲ್‌ಮಿ ಸಿ-100 ಎಕ್ಸ್ (4/64 ಜಿಬಿ) ಮೊಬೈಲ್ ಖರೀದಿಸಿದ್ದನು. ಮೊಬೈಲ್‌ನ ಒಟ್ಟು ಬೆಲೆ ₹16,700 ಅನ್ನು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ಮೊಬೈಲ್‌ನಲ್ಲಿ ನಕಲಿ ಸಂದೇಶ ತೋರಿಸಿದ್ದಾನೆ. ಇದನ್ನು ನಂಬಿದ ಅಂಗಡಿ ಮಾಲೀಕರಿಂದ ಮೊಬೈಲ್ ಪಡೆದುಕೊಂಡ ಆತ, ಹಣ ಪಾವತಿಸದೆ ಸ್ಥಳದಿಂದ ಪರಾರಿಯಾಗಿದ್ದನು.

ಈ ವಂಚನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕ, ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ಅವರು ಅಕ್ಟೋಬರ್ 24ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆಯ ಭಾಗವಾಗಿ ಪೊಲೀಸರು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಗಮ್ಮನಹಳ್ಳಿ ಗ್ರಾಮದ ಕಿರಣಕುಮಾರ ಪಿ. (30) ಎಂಬ ಆರೋಪಿಯನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಇನ್ನು ಕೃತ್ಯಕ್ಕೆ ಬಳಸಿದ್ದ ಘೋರ್ಡ್ ಐಕಾನ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರ ಅಂದಾಜು ಮೌಲ್ಯ ₹1 ಲಕ್ಷ ಎಂದು ತಿಳಿದುಬಂದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಕುಮಟಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ., ಪಿಎಸ್‌ಐಗಳಾದ ವಿಠಲ ಮಲವಡಕರ ಹಾಗೂ ಸಾವಿತ್ರಿ ನಾಯಕ ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಹಾಗೂ ಸುಬ್ರಹ್ಮಣ್ಯ ಹೆಗಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ. ಕುಮಟಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.

ಭ್ರಷ್ಟರ ಬೇಟೆ

Recent Posts

ಮಾದನಬಾವಿ ಗೋಶಾಲೆಯ ದುಸ್ಥಿತಿಗೆ ಆಕ್ರೋಶ: ಗೋವುಗಳಿಗೆ ಮೇವು, ನೀರು ಹಾಗೂ ಚಿಕಿತ್ಸೆ ಒದಗಿಸಲು ಆಗ್ರಹ

ಧಾರವಾಡ: ತಾಲೂಕಿನ ಮಾದನಬಾವಿ ಗ್ರಾಮದ ಗೋಶಾಲೆಯಲ್ಲಿ ಗೋವುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಗೋಶಾಲೆಯ ಅವ್ಯವಸ್ಥೆ ಸರಿಪಡಿಸಿ…

5 hours ago

ಮುಂಡಗೋಡದ ರಾಜಲಕ್ಷ್ಮಿ ಜ್ಯುವೆಲ್ಲರ್ಸ್‌ನಲ್ಲಿ ಬೆಳ್ಳಿ ಆಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಮಹಿಳೆಯರ ಬಂಧನ

ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದ ಎದುರಿನ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದ್ದ ಬೆಳ್ಳಿ ಆಭರಣ ಕಳವು ಪ್ರಕರಣವನ್ನು ಮುಂಡಗೋಡ ಪೊಲೀಸರು…

5 hours ago

ಮಾರ್ಚ್ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ: ಸಿಇಒ ಡಾ. ದಿಲೀಷ್ ಶಶಿ ಕಟ್ಟುನಿಟ್ಟಿನ ಸೂಚನೆ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು (MVS) ಯೋಜನೆಯ ಕಾಮಗಾರಿಯನ್ನು ಉತ್ತರ…

5 hours ago

ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ: ಪತ್ನಿ ಸೇರಿ ಒಂದೇ ಕುಟುಂಬದ 7 ಮಂದಿಯನ್ನು ಕೊಂದ ಪತಿ!

ಕೌಟುಂಬಿಕ ಕಲಹಕ್ಕೆ ಏಳು ಜೀವಗಳ ಬಲಿ; ಕ್ಯಾಬ್ ಚಾಲಕ ಇಂದುಶೇಖರ್ ಬಂಧನ, ವಿಚಾರಣೆಯಲ್ಲಿ ಬಯಲಾಯ್ತು ನರಮೇಧದ ರಹಸ್ಯ ಬೆಂಗಳೂರು: ಸಿಲಿಕಾನ್…

2 days ago

ಟೈಗರ್ ಶ್ರಾಫ್‌ಗೆ ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹರಿಯಾಣದ 22 ವರ್ಷದ ಯುವತಿ ಅರೆಸ್ಟ್!

ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡದ ಶಂಕೆ ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್‌ಗೆ…

2 days ago

ಗೌರಿಬಿದನೂರಿನ ಪ್ರಶಾಂತ್ ನಗರದಲ್ಲಿ ಸರಣಿ ಕಳ್ಳತನ: ವ್ಯಾಪಾರಸ್ಥರಲ್ಲಿ ಆತಂಕ!

ಅಂಗಡಿಗಳು, ನಂದಿನಿ ಬೂತ್‌, ಪಾರ್ಲರ್‌ಗಳೇ ಕಳ್ಳರ ಟಾರ್ಗೆಟ್ – ರಾತ್ರಿ ಗಸ್ತು ಹೆಚ್ಚಿಸಲು ಸ್ಥಳೀಯರ ಆಗ್ರಹ ಗೌರಿಬಿದನೂರು: ನಗರದ ಪ್ರಶಾಂತ್…

2 days ago