ಶಿವಮೊಗ್ಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಐವರು ಆರೋಪಿಗಳಿಗೆ ಜಾಮೀನು ನೀಡಿರುವ ಘಟನೆ ಬಯಲಿಗೆ ಬಂದಿದೆ. ಪ್ರಕರಣದ ಬೆಳಕು ವಿಚಾರಣೆಯೊಂದರ ಸಂದರ್ಭದಲ್ಲಿ ಹೊರಬಿದ್ದಿದ್ದು, ಸುಹೇಲ್ ಎಂಬ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ಈ ವಂಚನೆ ಬಗ್ಗೆ ಅನುಮಾನ ಉಂಟಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಜಗದೀಶ್ ಎಂಬುವವರು ಇಬ್ರಾಹಿಂ ಖಲೀಲ್, ಫೈರೋಜ್, ಅರ್ಬಾಜ್, ನಯಾಜ್ ಅಹಮದ್ ಮತ್ತು ಸುಹೇಲ್ ಎಂಬ ಐದು ಮಂದಿಗೆ ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನುದಾರರಾಗಿದ್ದಾರೆ ಎಂದು ದಾಖಲಾಗಿತ್ತು. ಆದರೆ, ವಿಚಾರಣೆ ವೇಳೆ ಸುಹೇಲ್ ಹಾಜರಾಗದ ಕಾರಣ, ನ್ಯಾಯಾಲಯವು ಜಾಮೀನುದಾರನಿಗೆ ನೋಟಿಸ್ ನೀಡಿತು.

ನ್ಯಾಯಾಲಯಕ್ಕೆ ಹಾಜರಾದ ಜಗದೀಶ್, ತಾನು ಯಾರಿಗೂ ಜಾಮೀನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಜಾಮೀನು ದಾಖಲೆಗಳಲ್ಲಿ ಬಳಸಲಾದ ಫೋಟೋ ಕೂಡ ತಮ್ಮದು ಅಲ್ಲ, ಮತ್ತು ಆರೋಪಿಗಳನ್ನು ಪರಿಚಯವಿಲ್ಲ ಎಂದು ನ್ಯಾಯಾಧೀಶರ ಮುಂದೆ ತಿಳಿಸಿದ್ದಾರೆ.

ಇದರಿಂದಾಗಿ, ಅಪರಿಚಿತ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಜಗದೀಶ್ ಹೆಸರಿನಲ್ಲಿ ಜಾಮೀನು ನೀಡಿರುವುದು ಬಹಿರಂಗಗೊಂಡಿದೆ. ಈ ಬಗ್ಗೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಜಾಮೀನುದಾರನಾಗಿ ಬಂದ ವ್ಯಕ್ತಿ, ಆತನನ್ನು ಕರೆತಂದ ನಸರುಲ್ಲಾ, ಮತ್ತು ಐದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Related News

error: Content is protected !!