ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಂದ ಗುಪ್ತ ಮಾಹಿತಿಯೊಂದಿಗೆ ಮಿಂಚಿನ ಕಾರ್ಯಚರಣೆ ನಡೆಸಿ, ಶ್ರೀಗಂಧ ಮರಗಳನ್ನು ಕದಿಯುತ್ತಿದ್ದ ಆರೋಪಿ ಬಂಧಿಸಿ ಅವನಿಂದ 15 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳು ವಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸಾದ್.ವಿ ಸುಗಟೂರು ಹೋಬಳಿಯ ತಮ್ಮ ತೋಟದ ಸುತ್ತಲೂ ಸುಮಾರು 200 ಶ್ರೀಗಂಧದ ಮರಗಳನ್ನು ಬೆಳೆಸಿದ್ದರು, ಮರಗಳು ಸುಮಾರು 26 ಅಡಿಗಳ ಉದ್ದ, ದಪ್ಪ 1.4 ಅಡಿಗಳಿದ್ದು ದಿನಾಂಕ 23-07-2024 ರಂದು ಮಧ್ಯರಾತ್ರಿಯ ಸಮಯದಲ್ಲಿ ನಾಯಿಗಳು ಸದ್ದು ಮಾಡುತ್ತಿದ್ದನ್ನು ಕಂಡು, ಮನೆಯಿಂದ ಹೊರಗಡೆ ಬಂದು ನೋಡಿದಾಗ ಮನೆಯ ಪಕ್ಕದಲ್ಲಿ ತಮ್ಮ ತೋಟದಲ್ಲಿರುವಂತಹ ಶ್ರೀಗಂಧದ ಮರಗಳ ಪೈಕಿ 5 ಮರಗಳು ಕಡಿದು ಕಳ್ಳರು ಕಳವು ಮಾಡಿದ್ದು, ಉಳಿದ ಸುಮಾರು 6 ಮರಗಳಿಗೆ ರಂಪದಲ್ಲಿ ಸ್ವಲ್ಪಮಟ್ಟಿಗೆ ಕೊಯ್ದು ಪರಾರಿಯಾಗಿದ್ದಾರೆ. ಕೊಡಲೇ ಶ್ರೀಗಂಧ ಮರಗಳ ಕಳ್ಳತನದ ದೂರನ್ನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ .ಬಿ ಐ.ಪಿ.ಎಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಮತ್ತು ಜಗದೀಶ್ ರವರ ಮಾರ್ಗದರ್ಶನದಲ್ಲಿ ಕೋಲಾರ ಉಪವಿಭಾಗದ ಪೋಲಿಸ್ ಉಪಾಧೀಕ್ಷಕರಾದ ಎಂ.ಹೆಚ್.ನಾಗ್ಲೆ ರವರ
ಮುಂದಾಳತ್ವದಲ್ಲಿ ಕಾಂತರಾಜ.ಕೆ ಪೊಲೀಸ್ ಇನ್ಸಪೆಕ್ಟರ್ ಮತ್ತು ಅವರ ತಂಡದ ಸಾಧಿಕ್ ಪಾಷ, ರಾಜೇಶ್, ಹಾಗೂ ಜಿಲ್ಲಾ ಅಪರಾಧ ಪತ್ತೆದಳ ಸಿಬ್ಬಂದಿಯಾದ ರಾಘವೇಂದ್ರ, ಆಂಜಿನಪ್ಪ, ನವೀನ್, ಸತೀಶ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಮುರಳಿ ರವರು ಹಲವಾರು ಗುಪ್ತ ಮಾಹಿತಿಯೊಂದಿಗೆ ಮಾಹಿತಿ ಕಲೆಹಾಕಿ ಆರೋಪಿಯಾದ ವೆಂಕಟರಮಣಪ್ಪ 50 ವರ್ಷ, ಉಪ್ಪಾರಪಲ್ಲಿ ಗ್ರಾಮ, ಲಕ್ಷ್ಮೀಪುರ ಪಂಚಾಯ್ತಿ, ಶ್ರೀನಿವಾಸಪುರ ತಾಲ್ಲೂಕು, ಎಂಬ ಆರೋಪಿಯಿಂದ ಮಾಲು ಸಮೇತ ಕೋಲಾರ-ಶ್ರೀನಿವಾಸಪುರ ರಸ್ತೆಯ ಮೂರಾಂಡಹಳ್ಳಿ ಕ್ರಾಸ್ ಬಳಿ ಬಂಧಿಸಿ ಇತನಿಂದ ಸುಮಾರು 50,000 ರೂ. ಬೆಲೆ ಬಾಳುವ 15 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಪಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ವರದಿ: ರೋಶನ್ ಜಮೀರ್
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…
ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…