Latest

ದರೋಡೆಕೋರರ ಬಂಧನ

ಮುಂಡಗೋಡ:  ತಾಲೂಕಿನಲ್ಲಿ ಇತ್ತಿಚೆಗೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು ಸಾರ್ವಜನಿಕರ, ಪ್ರಯಾಣಿಕರ ನಿದ್ದೆಗೆಡಿಸಿದೆ ಆದರೆ ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ಇಲಾಖೆಯ ಉತ್ತಮ ಕಾರ್ಯಾಚರಣೆಯಿಂದ ಹಲವಾರು ಅಕ್ರಮ ಚಟುವಟಿಕೆಗಳು ಹತೋಟಿಗೆ ಬರುತ್ತಿವೆ.
ದಿನಾಂಕ 07/02/2025 ರ ಶುಕ್ರವಾರ ಬೆಳಗಿನ ಜಾವ 6 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಗ್ರಾಮದ ಕ್ರಾಸ್‌ ಕ್ಕಿಂತ ಸುಮಾರು 01 ಕಿಮೀ ದೂರದಲ್ಲಿ ಡಾಂಬರ ರಸ್ತೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಕಾರು ನಿಲ್ಲಿಸಿಕೊಂಡು ನಿಂತಿದ್ದ ಮಲ್ಲಿಕಜಾನ್ ಶಬ್ಬರ ಶೇಖ್ ಸಾ//ಕಿಲ್ಲೆ ಓಣಿ ಮುಂಡಗೋಡ, ಮಹಮ್ಮದ ಇಬ್ರಾಹಿಂ ರಫಿಕ್ ಮಕ್ಬೂಲ್‌ಸಾಬ ಜಮಖಂಡಿ ಸ//ಚೌಡಳ್ಳಿ ಮುಂಡಗೋಡ, ಶಾಹಿಲ್ ಬಾಬಾಬುಡನ್ ನಂದಿಗಟ್ಟಿ ಸಾ//ಮಾರಿಕಾಂಬಾ ನಗರ ಮುಂಡಗೋಡ, ಹರುಣ ಹಮ್ಮಮ್ ಶೇಖ್ ಕಿಲ್ಲೆ ಓಣಿ ಮುಂಡಗೋಡ, ಮಹಮ್ಮದ ಯೂಸುಪ್ ರಿಯಾಜ್ ಅಹ್ಮದ್ ಗಡವಾಲೆ ಸಾ//ಕಿಲ್ಲೆ ಓಣಿ ಮುಂಡಗೋಡ, ಮಹಮ್ಮದ ಇಸ್ಮಾಯಿಲ್ ತಂದೆ ಸೈಸುದ್ದಿನ್ ಪಾನವಾಲೆ ಸಾ//ದೇಶಪಾಂಡೆನಗರ ಮುಂಡಗೋಡ, ತನ್ನೀರ ಅಬ್ದುಲ್ ಹಮೀದ್ ಅಕ್ಕಿಆಲೂರ ಸಾ//ಇಂದಿರಾನಗರ ಮುಂಡಗೋಡ, ದಾದಾಕಲಂದರ್ ಅಬ್ದುಲ್‌ಖಾದರ್ ಸಾ//ನೂರಾನಿಗಲ್ಲಿ ಮುಂಡಗೋಡ ಇವರನ್ನು ಮುಂಡಗೋಡ ಪೋಲಿಸರು ಬಂಧಿಸಿದ್ದಾರೆ.ಇವರು ದರೋಡೆಗೆ ಬಳಸಲು ತಂದಿದ್ದ ಕಾರು,ಎರಡು ಕಟ್ಟಿಗೆಯ ಬಡಿಗೆಗಳು, ಮೂರು ಕಬ್ಬಿಣದ ರಾಡಗಳು, ಚಾಕು, ಗಮ್ ಟೇಪ್ ಹಾಗೂ ಖಾರದ ಪುಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ .
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಎಮ್. ನಾರಾಯಣ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಶ್ರೀ ಗಣೇಶ ಕೆ.ಎಲ್ ಡಿ.ಎಸ್.ವಿ ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಂಗನಾಥ ನೀಲಮ್ಮನವರ ಪೊಲೀಸ್ ನಿರೀಕ್ಷಕರು ಮುಂಡಗೋಡ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಪರಸುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಸಿಬ್ಬಂದಿಯವರಾದ ಪಕೋಟೇಶ್ವರ ನಾಗರವಳ್ಳಿ ಅಣ್ಣಪ್ಪ ಬುಡಿಗೇರಿ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇರುತ್ತದೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೋಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ. ವರದಿ: ಮಂಜುನಾಥ್ ಎಫ್ ಹೆಚ್

nazeer ahamad

Recent Posts

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

1 hour ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

6 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

21 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

1 day ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago