ಕಾರವಾರ: ಕಳೆದ ಒಂದು ವರ್ಷದ ಹಿಂದೆಯಷ್ಟೇ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ತಮ್ಮ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕೆಲಸಗಳನ್ನು ಮಾಡುತ್ತಾ ಜಿಲ್ಲೆಯಲ್ಲಿನ ಮಟ್ಕಾದಂತಹ ಅದೆಷ್ಟೋ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದರು.ಹೀಗಾಗಿ ಇವರನ್ನು ಜಿಲ್ಲೆಯ ಜನರು ದಕ್ಷ ಎಸ್ಪಿ ಎಂದೆ ಕರೆಯುತ್ತಿದ್ದರು.ಯಾವಾಗ ಈ ಅಧಿಕಾರಿ ಭ್ರಷ್ಟರ ಮಾತುಗಳಿಗೆ ಬೆಲೆ ಕೊಡದೆ ಕೆಲಸ ಮಾಡಲು ಪ್ರಾರಂಭಿಸಿದರೋ ಅಂದಿನಿಂದಲೇ ಇವರ ವರ್ಗಾವಣೆಗೆ ಸ್ಕೆಚ್ಅನ್ನು ಹಾಕಿದ್ದರು ಎನ್ನಲಾಗಿದೆ.ಕಳೆದ ಎರಡು ತಿಂಗಳ ಹಿಂದೆಯೇ ಎಸ್ ಪಿ ಮೇಡಂ ಅವರ ವರ್ಗಾವಣೆಯ ಮಾತುಗಳು ಕೇಳಿ ಬಂದಿದ್ದವು ಆಗ ಜಿಲ್ಲೆಯ ಅದಷ್ಟೋ ಶುದ್ಧ ಮನಸ್ಸುಗಳು ಸಾಮಾಜಿಕ ಜಾಲತಾಣಗಳ ಮೂಲಕ ಎಸ್ ಪಿ ಮೇಡಂ ಅವರನ್ನು ವರ್ಗಾವಣೆ ಮಾಡದಂತೆ ಆಕ್ರೋಶವನ್ನೂ ಸಹ ಹೊರಹಾಕಿದ್ದವು.
ತಮ್ಮ ಇಲಾಖೆಯಲ್ಲಿಯೇ ಇರುವ ಕೆಲವು ಅಧಿಕಾರಿಗಳು ಇವರ ಕಾರ್ಯವೈಕರಿಯ ಬಗ್ಗೆ ಒಳಗೊಳಗೆ ಕೈ ಹಿಸುಕಿಕೊಳ್ಳುವಂತಾಗಿತ್ತು ಮತ್ತು ಅಕ್ರಮ ದಂದೇಕೋರರು ಈ ಅಧಿಕಾರಿ ಯಾವಾಗ ಹೋಗುತ್ತಾರೆಯೋ ಮಾರಾಯ ಎಂಬ ಮಾತುಗಳನ್ನು ಆಡುತ್ತಾ ಎಸ್ ಪಿ ಮೇಡಂ ಅವರ ದಕ್ಷತೆಗೆ ಬೆಚ್ಚಿಬಿದ್ದಿದ್ದರು.
ಅದೇನೆ ಇರಲಿ ಸರ್ಕಾರ ದಕ್ಷ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ಕೊಡುತ್ತಾ ಒಳ್ಳೆಯ ಆಡಳಿತವನ್ನು ನಡೆಸುವಲ್ಲಿ ಸಹಕಾರವನ್ನು ಕೊಡಬೇಕಿತ್ತು ಆದರೆ ರಾಜ್ಯದಲ್ಲಿಯೇ ಇವರೊಬ್ಬರ ವರ್ಗಾವಣೆ ಆದೇಶವನ್ನು ಮಾಡಿರುವುದು ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲ ಎನ್ನುವುದು ಸಾಬೀತಾಗಿದೆ.
ವರದಿ:ಮಂಜುನಾಥ ಹರಿಜನ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…