ಕಾರವಾರ: ಕಳೆದ ಒಂದು ವರ್ಷದ ಹಿಂದೆಯಷ್ಟೇ ಉತ್ತರ ಕನ್ನಡ‌ ಜಿಲ್ಲೆಗೆ ಆಗಮಿಸಿ ತಮ್ಮ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕೆಲಸಗಳನ್ನು ಮಾಡುತ್ತಾ ಜಿಲ್ಲೆಯಲ್ಲಿನ ಮಟ್ಕಾದಂತಹ ಅದೆಷ್ಟೋ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದರು.ಹೀಗಾಗಿ ಇವರನ್ನು ಜಿಲ್ಲೆಯ ಜನರು ದಕ್ಷ ಎಸ್ಪಿ ಎಂದೆ ಕರೆಯುತ್ತಿದ್ದರು.ಯಾವಾಗ ಈ ಅಧಿಕಾರಿ ಭ್ರಷ್ಟರ ಮಾತುಗಳಿಗೆ ಬೆಲೆ ಕೊಡದೆ ಕೆಲಸ ಮಾಡಲು ಪ್ರಾರಂಭಿಸಿದರೋ ಅಂದಿನಿಂದಲೇ ಇವರ ವರ್ಗಾವಣೆಗೆ ಸ್ಕೆಚ್ಅನ್ನು ಹಾಕಿದ್ದರು ಎನ್ನಲಾಗಿದೆ.ಕಳೆದ ಎರಡು ತಿಂಗಳ ಹಿಂದೆಯೇ ಎಸ್ ಪಿ ಮೇಡಂ ಅವರ ವರ್ಗಾವಣೆಯ ಮಾತುಗಳು ಕೇಳಿ ಬಂದಿದ್ದವು ಆಗ ಜಿಲ್ಲೆಯ ಅದಷ್ಟೋ ಶುದ್ಧ ಮನಸ್ಸುಗಳು ಸಾಮಾಜಿಕ ಜಾಲತಾಣಗಳ ಮೂಲಕ ಎಸ್ ಪಿ ಮೇಡಂ ಅವರನ್ನು ವರ್ಗಾವಣೆ ಮಾಡದಂತೆ ಆಕ್ರೋಶವನ್ನೂ ಸಹ ಹೊರಹಾಕಿದ್ದವು.
ತಮ್ಮ ಇಲಾಖೆಯಲ್ಲಿಯೇ ಇರುವ ಕೆಲವು ಅಧಿಕಾರಿಗಳು ಇವರ ಕಾರ್ಯವೈಕರಿಯ ಬಗ್ಗೆ ಒಳಗೊಳಗೆ ಕೈ ಹಿಸುಕಿಕೊಳ್ಳುವಂತಾಗಿತ್ತು ಮತ್ತು ಅಕ್ರಮ ದಂದೇಕೋರರು ಈ ಅಧಿಕಾರಿ ಯಾವಾಗ ಹೋಗುತ್ತಾರೆಯೋ ಮಾರಾಯ ಎಂಬ ಮಾತುಗಳನ್ನು ಆಡುತ್ತಾ ಎಸ್ ಪಿ ಮೇಡಂ ಅವರ ದಕ್ಷತೆಗೆ ಬೆಚ್ಚಿಬಿದ್ದಿದ್ದರು.
ಅದೇನೆ ಇರಲಿ ಸರ್ಕಾರ ದಕ್ಷ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ಕೊಡುತ್ತಾ ಒಳ್ಳೆಯ ಆಡಳಿತವನ್ನು ನಡೆಸುವಲ್ಲಿ ಸಹಕಾರವನ್ನು ಕೊಡಬೇಕಿತ್ತು ಆದರೆ ರಾಜ್ಯದಲ್ಲಿಯೇ ಇವರೊಬ್ಬರ ವರ್ಗಾವಣೆ ಆದೇಶವನ್ನು ಮಾಡಿರುವುದು ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲ ಎನ್ನುವುದು ಸಾಬೀತಾಗಿದೆ.
ವರದಿ:ಮಂಜುನಾಥ ಹರಿಜನ.

Related News

error: Content is protected !!