Categories: CorruptionCrimeLatest

ವಿಎಒ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಮೊದಲ ರ್ಯಾಂಕ್ ಪಡೆದ ಅಭ್ಯರ್ಥಿ ವಿರುದ್ಧ ಎಫ್‌ಐಆರ್ ದಾಖಲು

ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪದಡಿ ಮೊದಲ ರ್ಯಾಂಕ್ ಪಡೆದಿದ್ದ ಅಭ್ಯರ್ಥಿ ಶಂಕರ ಬಸವರಾಜ ಬನ್ನೂರ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ನಿರ್ದೇಶನದಂತೆ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ಸವಣೂರು ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಖೋಡೆ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಗುಡಿಕೇರಿ ಓಣಿಯ ಎಲೆಪೇಟೆ ನಿವಾಸಿ ಶಂಕರ ಬಸವರಾಜ ಬನ್ನೂರ ಅವರು ಅಕ್ಟೋಬರ್ 4ರಂದು ಶಿಗ್ಗಾವಿಯ ಬಿ.ಬಿ. ಮಾಮ್ಲದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ವಿಎಒ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು.

ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆದ ಎರಡೂ ಅವಧಿಯ ಪರೀಕ್ಷೆಗಳಲ್ಲಿ ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ಸಾಧನವನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ದು ನಕಲು ಮಾಡಿದ್ದಾರೆ ಎಂಬುದು ದೂರಿನಲ್ಲಿರುವ ಆರೋಪವಾಗಿದೆ. ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು, ಸರಿಯಾದ ಉತ್ತರಗಳನ್ನು ಪಡೆದು ಒಎಂಆರ್ ಉತ್ತರ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ರೀತಿ ಅಕ್ರಮ ಎಸಗಿ ಒಟ್ಟು 200 ಅಂಕಗಳಿಗೆ 151.25 ಅಂಕಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಭಾನುವಾರ ರಾತ್ರಿ ಶಿಗ್ಗಾವಿ ತಹಶೀಲ್ದಾರ್ ಯಲ್ಲಪ್ಪ ಅವರು ಪೊಲೀಸ್ ಠಾಣೆಗೆ ತೆರಳಿ ಉಪವಿಭಾಗಾಧಿಕಾರಿಗಳ ದೂರನ್ನು ಸಲ್ಲಿಸಿದ್ದರು. ದೂರಿನ ಪರಿಶೀಲನೆ ನಡೆಸಿದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2023ರ ಪರೀಕ್ಷಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ: ಪತ್ನಿ ಸೇರಿ ಒಂದೇ ಕುಟುಂಬದ 7 ಮಂದಿಯನ್ನು ಕೊಂದ ಪತಿ!

ಕೌಟುಂಬಿಕ ಕಲಹಕ್ಕೆ ಏಳು ಜೀವಗಳ ಬಲಿ; ಕ್ಯಾಬ್ ಚಾಲಕ ಇಂದುಶೇಖರ್ ಬಂಧನ, ವಿಚಾರಣೆಯಲ್ಲಿ ಬಯಲಾಯ್ತು ನರಮೇಧದ ರಹಸ್ಯ ಬೆಂಗಳೂರು: ಸಿಲಿಕಾನ್…

1 day ago

ಟೈಗರ್ ಶ್ರಾಫ್‌ಗೆ ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹರಿಯಾಣದ 22 ವರ್ಷದ ಯುವತಿ ಅರೆಸ್ಟ್!

ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡದ ಶಂಕೆ ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್‌ಗೆ…

1 day ago

ಗೌರಿಬಿದನೂರಿನ ಪ್ರಶಾಂತ್ ನಗರದಲ್ಲಿ ಸರಣಿ ಕಳ್ಳತನ: ವ್ಯಾಪಾರಸ್ಥರಲ್ಲಿ ಆತಂಕ!

ಅಂಗಡಿಗಳು, ನಂದಿನಿ ಬೂತ್‌, ಪಾರ್ಲರ್‌ಗಳೇ ಕಳ್ಳರ ಟಾರ್ಗೆಟ್ – ರಾತ್ರಿ ಗಸ್ತು ಹೆಚ್ಚಿಸಲು ಸ್ಥಳೀಯರ ಆಗ್ರಹ ಗೌರಿಬಿದನೂರು: ನಗರದ ಪ್ರಶಾಂತ್…

1 day ago

ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಭವಿಷ್ಯ ರಾಜ್ಯ ಸರ್ಕಾರದ ಕೈಯಲ್ಲಿ!

ಡಿಪಿಆರ್ ಸ್ಥಗಿತಕ್ಕೆ ಕರ್ನಾಟಕ ಸರ್ಕಾರಕ್ಕಷ್ಟೇ ಅಧಿಕಾರ: NWDA ಸ್ಪಷ್ಟನೆ | ಯೋಜನೆ ಮುಂದುವರಿಕೆ ಅಥವಾ ರದ್ದತಿಗೆ ಸರ್ಕಾರದ ನಿರ್ಧಾರವೇ ಅಂತಿಮ…

2 days ago

₹10 ಚಿಲ್ಲರೆಗಾಗಿ ಕಿರಿಕ್‌..! ಚಲಿಸುತ್ತಿದ್ದ ಬಸ್‌ನಿಂದ ಮಹಿಳಾ ಕಂಡಕ್ಟರ್‌ನ್ನೇ ನೂಕಿದ ಪ್ರಯಾಣಿಕಳು; 10 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ದುರಂತ ಅಂತ್ಯ!

ತೆಲಂಗಾಣ: ಕೇವಲ ₹10 ಚಿಲ್ಲರೆ ಹಣದ ವಿಚಾರಕ್ಕೆ ಆರಂಭವಾದ ಜಗಳವೊಂದು ಕೊನೆಗೆ ಮಹಿಳಾ ಕಂಡಕ್ಟರ್‌ನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ…

2 days ago

ಮಹಿಳೆಯ ಖಾಸಗಿ ವಿಡಿಯೋ ಬಳಸಿ ಬೆದರಿಕೆ, ಕಿರುಕುಳ: ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ, ₹5 ಸಾವಿರ ದಂಡ

ಭಟ್ಕಳ:ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ…

4 days ago