Categories: CrimeLatest

₹10 ಚಿಲ್ಲರೆಗಾಗಿ ಕಿರಿಕ್‌..! ಚಲಿಸುತ್ತಿದ್ದ ಬಸ್‌ನಿಂದ ಮಹಿಳಾ ಕಂಡಕ್ಟರ್‌ನ್ನೇ ನೂಕಿದ ಪ್ರಯಾಣಿಕಳು; 10 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ದುರಂತ ಅಂತ್ಯ!

ತೆಲಂಗಾಣ: ಕೇವಲ ₹10 ಚಿಲ್ಲರೆ ಹಣದ ವಿಚಾರಕ್ಕೆ ಆರಂಭವಾದ ಜಗಳವೊಂದು ಕೊನೆಗೆ ಮಹಿಳಾ ಕಂಡಕ್ಟರ್‌ನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ಬಸ್‌ನಿಂದ ಮಹಿಳಾ ಪ್ರಯಾಣಿಕಳೊಬ್ಬಳು ಕಂಡಕ್ಟರ್‌ನ್ನು ಕೆಳಕ್ಕೆ ನೂಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 24 ವರ್ಷದ ಕಂಡಕ್ಟರ್ ಪ್ರವಾಳಿಕಾ, 10 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಮೃತಪಟ್ಟಿದ್ದಾರೆ.

ಏನಿದು ಘಟನೆ?

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರವಾಳಿಕಾ ಅವರು ಅಕ್ಟೋಬರ್ 25ರಂದು ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಮಿಟ್ಟಗೊಡೆಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮೌನಿಕಾ ಎಂಬ ಮಹಿಳೆ ತನ್ನ ಮಗನೊಂದಿಗೆ ಬಸ್ ಹತ್ತಿದ್ದರು. ಮಗನ ಟಿಕೆಟ್‌ಗಾಗಿ ಮೌನಿಕಾ ₹100 ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಂಡಕ್ಟರ್ ಪ್ರವಾಳಿಕಾ ಅವರು ₹90 ಚಿಲ್ಲರೆ ಹಣವನ್ನು ಟಿಕೆಟ್‌ನ ಹಿಂಭಾಗದಲ್ಲಿ ಬರೆದು ನೀಡಿದ್ದರು ಎನ್ನಲಾಗಿದೆ.

ಆದರೆ, ಚಿಲ್ಲರೆ ಹಣ ನೀಡುವ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಮೌನಿಕಾ, ಚಲಿಸುತ್ತಿದ್ದ ಬಸ್‌ನಿಂದಲೇ ಪ್ರವಾಳಿಕಾ ಅವರನ್ನು ಕೆಳಕ್ಕೆ ನೂಕಿದ್ದಾರೆ ಎಂದು ಆರೋಪಿಸಲಾಗಿದೆ.

ಕಂಡಕ್ಟರ್ ಕಾಲಿನ ಮೇಲೆ ಹರಿದ ಬಸ್ ಚಕ್ರ!

ಬಸ್‌ನಿಂದ ರಸ್ತೆಗೆ ಬಿದ್ದ ಪ್ರವಾಳಿಕಾ ಅವರ ಎಡಗಾಲಿನ ಮೇಲೆ ಬಸ್‌ನ ಹಿಂಬದಿಯ ಚಕ್ರ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

10 ದಿನಗಳ ಹೋರಾಟ ಅಂತ್ಯ; ಕಂಡಕ್ಟರ್ ಸಾವು!

ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪ್ರವಾಳಿಕಾ ಅವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮೌನಿಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇವಲ ₹10 ಚಿಲ್ಲರೆ ಹಣಕ್ಕಾಗಿ ಆರಂಭವಾದ ಕ್ಷುಲ್ಲಕ ಜಗಳವೊಂದು ಯುವ ಮಹಿಳಾ ಕಂಡಕ್ಟರ್‌ನ ಬದುಕನ್ನೇ ಕಸಿದುಕೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆಘಾತ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಭ್ರಷ್ಟರ ಬೇಟೆ

Recent Posts

ಮಾದನಬಾವಿ ಗೋಶಾಲೆಯ ದುಸ್ಥಿತಿಗೆ ಆಕ್ರೋಶ: ಗೋವುಗಳಿಗೆ ಮೇವು, ನೀರು ಹಾಗೂ ಚಿಕಿತ್ಸೆ ಒದಗಿಸಲು ಆಗ್ರಹ

ಧಾರವಾಡ: ತಾಲೂಕಿನ ಮಾದನಬಾವಿ ಗ್ರಾಮದ ಗೋಶಾಲೆಯಲ್ಲಿ ಗೋವುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಗೋಶಾಲೆಯ ಅವ್ಯವಸ್ಥೆ ಸರಿಪಡಿಸಿ…

5 hours ago

ಮುಂಡಗೋಡದ ರಾಜಲಕ್ಷ್ಮಿ ಜ್ಯುವೆಲ್ಲರ್ಸ್‌ನಲ್ಲಿ ಬೆಳ್ಳಿ ಆಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಮಹಿಳೆಯರ ಬಂಧನ

ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದ ಎದುರಿನ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದ್ದ ಬೆಳ್ಳಿ ಆಭರಣ ಕಳವು ಪ್ರಕರಣವನ್ನು ಮುಂಡಗೋಡ ಪೊಲೀಸರು…

5 hours ago

ಫೋನ್‌ಪೇ ಹಣ ಪಾವತಿ ನಕಲಿ ಸಂದೇಶ ತೋರಿಸಿ ಮೊಬೈಲ್ ವಂಚನೆ: ಬೆಂಗಳೂರಿನಲ್ಲಿ ಆರೋಪಿಯ ಬಂಧನ

ಕುಮಟಾ: ಮೊಬೈಲ್ ಖರೀದಿಸಿ ಫೋನ್‌ಪೇ ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಸಂದೇಶ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು…

5 hours ago

ಮಾರ್ಚ್ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ: ಸಿಇಒ ಡಾ. ದಿಲೀಷ್ ಶಶಿ ಕಟ್ಟುನಿಟ್ಟಿನ ಸೂಚನೆ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು (MVS) ಯೋಜನೆಯ ಕಾಮಗಾರಿಯನ್ನು ಉತ್ತರ…

5 hours ago

ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ: ಪತ್ನಿ ಸೇರಿ ಒಂದೇ ಕುಟುಂಬದ 7 ಮಂದಿಯನ್ನು ಕೊಂದ ಪತಿ!

ಕೌಟುಂಬಿಕ ಕಲಹಕ್ಕೆ ಏಳು ಜೀವಗಳ ಬಲಿ; ಕ್ಯಾಬ್ ಚಾಲಕ ಇಂದುಶೇಖರ್ ಬಂಧನ, ವಿಚಾರಣೆಯಲ್ಲಿ ಬಯಲಾಯ್ತು ನರಮೇಧದ ರಹಸ್ಯ ಬೆಂಗಳೂರು: ಸಿಲಿಕಾನ್…

2 days ago

ಟೈಗರ್ ಶ್ರಾಫ್‌ಗೆ ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹರಿಯಾಣದ 22 ವರ್ಷದ ಯುವತಿ ಅರೆಸ್ಟ್!

ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡದ ಶಂಕೆ ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್‌ಗೆ…

2 days ago