Latest

“ಮದ್ಯಪಾನ ಮಾಡಿ ದೇವಾಲಯದಲ್ಲೇ ನಿದ್ದೆಗೆ ಜಾರಿದ ಕಳ್ಳ.!

ಜಾರ್ಖಂಡ್‌ನ ನೊಮುಂಡಿಯಲ್ಲಿ ವಿಚಿತ್ರ ಕಳ್ಳತನ ಪ್ರಕರಣವೇ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡಿದ ಯುವಕನೊಬ್ಬ ದೇವಾಲಯದೊಳಗೆ ನುಗ್ಗಿ ಕಳ್ಳತನ ಮಾಡಿದ್ದ ವೇಳೆ ಕುಡಿದ ಮತ್ತಿನಲ್ಲಿ ಅಲ್ಲೇ ಮಲಗಿ ಬಿದ್ದ ಘಟನೆ ಬೆಳಗಿನ ಜಾವ ಬಹಿರಂಗವಾಗಿದೆ.

ರಾತ್ರಿ ಹೆಚ್ಚು ಮದ್ಯ ಸೇವಿಸಿದ ವೀರ್ ನಾಯಕ್ ಎಂಬ ಯುವಕ, ತನ್ನ ಸ್ನೇಹಿತರೊಂದಿಗೆ ಕುಡಿದು ತಿರುಗಾಡುತ್ತಿದ್ದ. ನಂತರ ನೊಮುಂಡಿಯಲ್ಲಿರುವ ಕಾಳಿ ದೇವಾಲಯದ ಗೋಡೆಯ ಮೇಲೆ ಹತ್ತಿ, ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾನೆ. ದೇವಾಲಯದ ಒಳಗಡೆ ಪ್ರವೇಶಿಸಿದ ನಂತರ, ಅಲಂಕಾರ ಸಾಮಗ್ರಿಗಳು, ಗಂಟೆ, ಪೂಜಾ ಥಾಲಿ, ಚಿನ್ನ–ಬೆಳ್ಳಿ ಆಭರಣಗಳು ಮತ್ತು ದೇವರ ಕಿರೀಟವನ್ನೂ ಸೇರಿ ಹಲವಾರು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾನೆ.

ಕದ್ದ ವಸ್ತುಗಳನ್ನು ತನ್ನ ಬ್ಯಾಗಿನಲ್ಲಿ ತುಂಬಿಕೊಂಡು ದೇವಾಲಯದಿಂದ ಪಲಾಯನಗೊಳ್ಳಲು ಸಿದ್ಧತೆ ನಡೆಸುತ್ತಿದ್ದ ಆತನಿಗೆ ಮದ್ಯದ ನಿಂದ್ರೆ ಕಾಡಿದ್ದು, ಅಲ್ಲಿಯೇ ಮಲಗಿ ಹೋಗಿದ್ದಾನೆ. ಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದ ಅರ್ಚಕರು ಮತ್ತು ಭಕ್ತರು ಈ ದೃಶ್ಯವನ್ನು ನೋಡಿ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವರ ಕಿರೀಟವನ್ನು ಹಿಡಿದು ಮಲಗಿದ್ದ ವೀರ್ ನಾಯಕ್‌ನ ಫೋಟೋಗಳು ಈಗ ಹಬ್ಬಿಹೋಗಿವೆ.

ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ, ದೇವಾಲಯದಿಂದ ಕಳವು ಮಾಡಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ತನಿಖೆ ಮುಂದುವರೆದಿದ್ದು, ಈತನ ಹಿಂದೆ ಇನ್ನೂ ಯಾರಾದರೂ ಸೇರಿಕೊಂಡಿರಬಹುದಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

nazeer ahamad

Recent Posts

ಧರ್ಮಸ್ಥಳ ಶವ ಹೂತು ಪ್ರಕರಣ: ಎಸ್‌ಐಟಿಗೆ ಮತ್ತಷ್ಟು ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ಬಹಿರಂಗವಾದ ಶವ ಹೂತು ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ವೇಗವರ್ಧನೆಗಾಗಿ ವಿಶೇಷ ತನಿಖಾ ತಂಡಕ್ಕೆ…

10 minutes ago

ಧರ್ಮಸ್ಥಳ ನದಿ ತಟದಲ್ಲಿ ಹೂತ ಶವಗಳ ಬೇಟೆ: ಎಸ್ಐಟಿ ಉತ್ಖನನ ಕಾರ್ಯಾಚರಣೆಗೂ ವೇಗ

ಬೆಳ್ತಂಗಡಿ, ಜುಲೈ 31 – ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಿಗೂಢವಾಗಿ ಹೂತ ಶವಗಳ ಮಾಹಿತಿ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ…

35 minutes ago

ಕುಡಿಯಲು ಹಣ ನೀಡದ ತಾಯಿಯನ್ನು ಮಗನೇ ಕೊಂದ ಭೀಕರ ಘಟನೆ : ಶವ ಪಕ್ಕದಲ್ಲೇ ಮಲಗಿದ ಹಂತಕ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲ್ಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕುಡಿಯಲು ಹಣ ಕೇಳಿದ ಮಗನಿಗೆ ತಾಯಿ ನಿಷೇಧಿಸಿದ್ದಕ್ಕೆ…

2 hours ago

ದರ್ಭಂಗಾದಲ್ಲಿ ಯುವತಿ ಅಪಹರಣ: ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದ ಪೊಲೀಸರ ವಿರುದ್ಧ ಆಕ್ರೋಶ

ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ದಿನದ ಬೆಳಗಿನ ಜಾವ ನಡೆದ ಯುವತಿಯ ಅಪಹರಣ ಪ್ರಕರಣ ಇದೀಗ ಪೊಲೀಸರ ನಿರ್ಲಕ್ಷ್ಯ ಆರೋಪದಿಂದ ಚರ್ಚೆಗೆ…

2 hours ago

ಮಂಗಳೂರು: ನೇತ್ರಾವತಿ ನದಿಯಿಂದ ಮರಳು ಕಳ್ಳ ಸಾಗಾಟ – ಪಿಕಪ್ ಹಾಗೂ ಸ್ಕೂಟರ್ ವಶಕ್ಕೆ

ಮಂಗಳೂರು ನಗರದಲ್ಲಿ ಮರಳು ಕಳ್ಳ ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ನಡೆಸಿದ ತಪಾಸಣೆಯ ವೇಳೆ…

14 hours ago

ಭಟ್ಕಳ ಸಮುದ್ರ ದುರಂತ: ದೋಣಿ ಮುಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರು ರಕ್ಷಣೆ

ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು,…

15 hours ago