Crime

ದೆಹಲಿ ಬೆಚ್ಚಿ ಬೀಳಿಸಿದ ವಿಕೃತಿ: ತಾಯಿಯ ಮೇಲೆ ಎರಡು ಬಾರಿ ಅತ್ಯಾಚಾರ

ನವದೆಹಲಿ, ಆಗಸ್ಟ್ 17: ದೆಹಲಿಯ ಹೌಝ್‌ಕ್ವಾಝಿ ಪ್ರದೇಶದಲ್ಲಿ ನಡೆದಿರುವ ಅಮಾನುಷ ಘಟನೆ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. 39 ವರ್ಷದ ಯುವಕನು ಸ್ವಂತ ತಾಯಿಯ ಮೇಲೆಯೇ ಎರಡು ಬಾರಿ ದೌರ್ಜನ್ಯ ಎಸಗಿರುವ ಆರೋಪ ಹೊರಬಿದ್ದಿದೆ.

ಪೊಲೀಸರ ಮಾಹಿತಿಯಂತೆ, 65 ವರ್ಷದ ಮಹಿಳೆ ತನ್ನ ಪತಿ ಮತ್ತು ಕಿರಿಯ ಮಗಳೊಂದಿಗೆ ಜುಲೈ 17ರಂದು ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಅರೇಬಿಯಾ ತೆರಳಿದ್ದರು. ಈ ವೇಳೆಯಲ್ಲಿ ಮನೆಯಲ್ಲಿ ಇದ್ದ ಮಗ ಸತತವಾಗಿ ತಂದೆಗೆ ಕರೆ ಮಾಡಿ ತಕ್ಷಣ ಮನೆಗೆ ಮರಳುವಂತೆ ಒತ್ತಾಯಿಸಿದ್ದ. ತಾಯಿಗೆ ಅಕ್ರಮ ಸಂಬಂಧವಿದೆ ಎಂಬ ಗಂಭೀರ ಆರೋಪವನ್ನೂ ತಂದೆಯ ಮುಂದೆ ಮಾಡಿದ್ದ. ಇದರಿಂದ ತಕ್ಷಣವೇ ಕುಟುಂಬ ಭಾರತಕ್ಕೆ ಮರಳಿತ್ತು.

ಮನೆಗೆ ಬಂದು ಕೂಡಲೇ ಗಲಾಟೆ ಶುರುವಾಯಿತು. ತಂದೆ ಮಾತಿನ ಮೂಲಕ ಮಗನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವನು ಯಾರ ಮಾತನ್ನೂ ಕೇಳಲಿಲ್ಲ. ತಾಯಿಗೆ ಡಿವೋರ್ಸ್ ಕೊಡಿಸುವಂತೆ ತಂದೆಯನ್ನು ಒತ್ತಾಯಿಸುತ್ತಾ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದ.

ಆಗಸ್ಟ್ 11ರಂದು, ತಾಯಿಯೊಂದಿಗೆ ಮಾತನಾಡಬೇಕಿದೆ, ಕೆಲವು ಪ್ರಶ್ನೆಗಳಿವೆ ಎಂದು ಹೇಳಿ, ಕೋಣೆಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿದ್ದಾನೆ. ಬಳಿಕ ಬಲವಂತವಾಗಿ ಬುರ್ಖಾ ತೆಗೆಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. “ನಾನು ನಿನ್ನ ತಾಯಿ” ಎಂದು ಅಳುತ್ತ ಬೇಡಿಕೊಂಡರೂ ಮಗ ವಿಕೃತಿ ಮೆರೆದಿದ್ದಾನೆಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಯ ನಂತರ ಹಿರಿಯ ಮಗಳ ಮನೆಗೆ ತೆರಳಿದ್ದ ಮಹಿಳೆ ಆಗಸ್ಟ್ 14ರಂದು ಮನೆಗೆ ಹಿಂತಿರುಗಿದಾಗ ಮತ್ತೊಮ್ಮೆ ಮಗ ಅವಳ ಮೇಲೆಯೇ ದೌರ್ಜನ್ಯ ಎಸಗಿದ್ದಾನೆ. ಇದರಿಂದ ತತ್ತರಿಸಿದ ತಾಯಿ ಕೊನೆಗೂ ಕಿರಿಯ ಮಗಳೊಂದಿಗೆ ಪೊಲೀಸರ ಶರಣಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹೌಝ್‌ಕ್ವಾಝಿ ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆಯಲು ತೀವ್ರ ಶೋಧ ನಡೆಸುತ್ತಿದ್ದಾರೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

nazeer ahamad

Recent Posts

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

13 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

17 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago

ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…

2 days ago