Categories: CrimeLatest

2.5 ವರ್ಷದ ಕಂದಮ್ಮನನ್ನು ಜೀವಂತವಾಗಿಯೇ ಹೂತ ರಾಕ್ಷಸಿ! ಗಲ್ಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ

ಇಡೀ ಕುಟುಂಬದ ಮುದ್ದಿನ ಕಂದಮ್ಮನಾಗಿದ್ದ ಕೇವಲ ಎರಡೂವರೆ ವರ್ಷದ ದಿಲ್ ರೋಜ್‌ನ ದಾರುಣ ಹತ್ಯೆ ಪ್ರಕರಣ ಇಂದಿಗೂ ಮನಕಲಕುವ ಘಟನೆಯಾಗಿ ಉಳಿದಿದೆ. ನೆರೆಮನೆಯ ಮಹಿಳೆಯೊಬ್ಬಳು ಅಸೂಯೆ ಮತ್ತು ದ್ವೇಷದ ಕಾರಣದಿಂದ ಈ ಮುಗ್ಧ ಮಗುವಿನ ಜೀವ ತೆಗೆದಿದ್ದಳು. ಇದೀಗ ಆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಆರೋಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಮತ್ತೆ ಪ್ರಕರಣವನ್ನು ಸುದ್ದಿಯಲ್ಲಿರಿಸಿದೆ.

ಮಾಹಿತಿಯ ಪ್ರಕಾರ, ದಿಲ್ ರೋಜ್ ಕುಟುಂಬದ ಎಲ್ಲರ ಪ್ರೀತಿಯ ಕಂದಮ್ಮಳಾಗಿದ್ದಳು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿಚ್ಛೇದಿತ ಮಹಿಳೆ ನೀಲಂಗೆ ಕುಟುಂಬದ ಮೇಲಿದ್ದ ವೈಯಕ್ತಿಕ ದ್ವೇಷ ಮತ್ತು ಅಸೂಯೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಒಂದು ದಿನ ಮಗುವನ್ನು ಸ್ಕೂಟರ್‌ನಲ್ಲಿ ಸುತ್ತಾಡಿಸಿ ಕರೆತರುತ್ತೇನೆ ಎಂದು ನಂಬಿಸಿ ಕರೆದುಕೊಂಡು ಹೋದ ನೀಲಂ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ.

ಹಲ್ಲೆಯಿಂದ ಮಗು ಕಿರುಚದಂತೆ ಅದರ ಬಾಯಿಗೆ ಮಣ್ಣು ತುರುಕಿ, ಜೀವಂತವಾಗಿದ್ದಾಗಲೇ ಸಣ್ಣ ಗುಂಡಿಯಲ್ಲಿ ಹೂತು ಹಾಕಿದ್ದಾಳೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಗು ಕಾಣೆಯಾಗುತ್ತಿದ್ದಂತೆಯೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ನೀಲಂ ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿತ್ತು. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರೂ, ಅಷ್ಟರಲ್ಲಾಗಲೇ ಮಗು ಉಸಿರುಗಟ್ಟಿ ಮೃತಪಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಅತ್ಯಂತ ಕ್ರೂರ ಹಾಗೂ ‘ವಿರಳಾತಿ ವಿರಳ’ ಪ್ರಕರಣ ಎಂದು ಪರಿಗಣಿಸಿ ನೀಲಂಗೆ ಮರಣದಂಡನೆ ವಿಧಿಸಿತ್ತು. ಆದರೆ ಇದೀಗ ಆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಭ್ರಷ್ಟರ ಬೇಟೆ

Recent Posts

ಪತಿಯನ್ನೇ ಕೊಲ್ಲಲು ಪತ್ನಿಯ ಸ್ಕೆಚ್‌! ಪ್ರಿಯಕರನ ಮೊಬೈಲ್‌ನಲ್ಲಿ ಸಿಕ್ತು ಶಾಕಿಂಗ್ ಸಾಕ್ಷಿ..!

ಸೂರ್ಯಾಪೇಟೆ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಲು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಸಂಚು…

12 hours ago

ಗಂಡ ನೈಟ್ ಡ್ಯೂಟಿಗೆ ಹೋದಾಗ ಮಕ್ಕಳಿಗೆ ನಿದ್ರೆ ಗುಳಿಗೆ; ಲವ್ವರ್ ಜೊತೆ ಪತ್ನಿಯ ಚಕ್ಕಂದ.. ಮಧ್ಯರಾತ್ರಿ ಮನೆಗೆ ಬಂದ ಗಂಡನಿಗೆ ಕಾದಿತ್ತು ಘೋರ ದುರಂತ!

ಸೋನ್‌ಭದ್ರ: ಗಂಡ ನೈಟ್ ಡ್ಯೂಟಿಗೆ ಹೋದ ಬಳಿಕ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಪತ್ನಿ, ಕೊನೆಗೆ…

12 hours ago

ರೈಲ್ವೆ ಕಾಮಗಾರಿ ಕಾರ್ಮಿಕರಿದ್ದ ಬೊಲೆರೋ ಪಲ್ಟಿ: ಎಂಟು ಮಂದಿಗೆ ಗಂಭೀರ ಗಾಯ

ಗೌರಿಬಿದನೂರು: ರೈಲ್ವೆ ಇಲಾಖೆಯ ಕಾಮಗಾರಿ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ…

12 hours ago

ಹುಬ್ಬಳ್ಳಿ–ಧಾರವಾಡದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ: 1,339 ಮಂದಿ ವಿರುದ್ಧ ಪ್ರಕರಣ

ಹುಬ್ಬಳ್ಳಿ–ಧಾರವಾಡ: ಅವಳಿ ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಹುಬ್ಬಳ್ಳಿ–ಧಾರವಾಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು…

2 days ago

ವಿದ್ಯುತ್ ತಂತಿ ಅಳವಡಿಸಿ ಎರಡು ಜಿಂಕೆಗಳ ಬಲಿ: ಜಮೀನಿನಲ್ಲೇ ಮಾಂಸ ಬೇಯಿಸುತ್ತಿದ್ದ ಆರೋಪಿಗಳು!

ಸಾಗರ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಎರಡು ಗಂಡು ಜಿಂಕೆಗಳನ್ನು ವಿದ್ಯುತ್ ಸ್ಪರ್ಶದಿಂದ ಸಾಯಿಸಿ, ಅವುಗಳ ಮಾಂಸವನ್ನು ಜಮೀನಿನಲ್ಲೇ…

2 days ago

ಅರ್ಚಕ ವಿಶ್ವೇಶ್ವರ ಭಟ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕುಮಟಾ: ನಗರದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಮತ್ತು…

2 days ago