ಮೈಸೂರು: ಮೈಸೂರಿನ ಸಾಹುಕಾರ್ ಹುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ನವಜಾತ ಶಿಶುವನ್ನು ಬಟ್ಟೆ ಸುತ್ತಿ ಬಾವಿಗೆ ಎಸೆದ ಘಟನೆ ಬೆಳಕಿಗೆ ಬಂದಿದೆ.

ಗಂಡು ಮಗುವನ್ನು ಬಟ್ಟೆಯಲ್ಲಿ ಸುತ್ತಿ, ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಬಿಸಾಡಿ ಹೋಗಿರುವ ಘಟನೆ ಕೃತ್ಯವೆಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಿಗ್ಗೆ ಜಮೀನಿಗೆ ತೆರಳಿದ ಸ್ಥಳೀಯರು, ಮಗುವಿನ ಅಳುವಿನ ಶಬ್ದ ಕೇಳಿ ಅಲ್ಲಿಗೆ ಧಾವಿಸಿದರು. ಕೂಡಲೇ ಮಗುವನ್ನು ಹೊಂಡದಿಂದ ಹೊರತೆಗೆಯಲು ಯಶಸ್ವಿಯಾದರು.

ಸ್ಥಳೀಯರು ಮಗುವನ್ನು ರಕ್ಷಿಸಿದರೂ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ನವಜಾತ ಶಿಶು ಕೊನೆಯುಸಿರೆಳೆದಿದೆ. ಈ ಘಟನೆ ಸಂಬಂಧಿಸಿ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣರಾದವರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಆಘಾತವನ್ನು ಮೂಡಿಸಿದೆ ಮತ್ತು ನವಜಾತ ಶಿಶುವಿನ ಜೀವನವನ್ನು ಉಳಿಸಲು ಸಾಧ್ಯವಾಗದೆ ಜನರು ವಿಷಾದ ವ್ಯಕ್ತಪಡಿಸಿದ್ದಾರೆ.

Related News

error: Content is protected !!