ಕ್ನೋ, ಜೂನ್ 23 – ಉತ್ತರ ಪ್ರದೇಶದ ಕ್ನೋ ಪ್ರದೇಶದಲ್ಲಿ ಪೊಲೀಸರ ನಿರ್ಲಕ್ಷ್ಯದಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಘಟನೆ ಜೂನ್ 12ರಂದು ನಡೆದಿದ್ದು, ಇದೀಗ ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯ ಪ್ರಕಾರ, ಆರೋಪಿಗಳಿಬ್ಬರು ಬೈಕ್ ಮೇಲೆ ಕುಳಿತು ಮಾತನಾಡುತ್ತಿದ್ದುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೇ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಲ್ಲಿಗೆ ಬರುತ್ತಾರೆ. ಆದರೆ, ಆರೋಪಿಗಳನ್ನು ನೋಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮೆರುತ್ತಾರೆ. ಅಷ್ಟರಲ್ಲಿ, ಓರ್ವ ಆರೋಪಿ ಸೂಟ್ಕೇಸ್‌ ಹಿಡಿದು ಪರಾರಿಯಾಗುತ್ತಾನೆ.

ಈ ದ್ರಶ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ವಾದನೆಗಳ ನಡುವೆಯೇ ಇಬ್ಬರು ಪೊಲೀಸರ ಸೇವೆಯನ್ನು ಅಮಾನತುಗೊಳಿಸಿ ತನಿಖೆ ಆರಂಭಿಸಲಾಗಿದೆ.

Related News

error: Content is protected !!