ಮಂಡ್ಯ: ಗಾಂಜಾ ಬೆಳೆಯುವುದು ಕಾನೂನು ಪ್ರಕಾರ ಅಪರಾಧವಾಗಿರುವುದಾದರೂ, ಕೆಲವರು ಇದನ್ನು ಪತ್ತೆಗೊಮ್ಮಲು ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದರ ಬೆಳವಣಿಗೆಯನ್ನು ನಡೆಸುತ್ತಾರೆ. ಇತ್ತೀಚೆಗೆ, ಮಂಡ್ಯ ಜಿಲ್ಲೆಯ ಹಳೇಹಳ್ಳಿ ಗ್ರಾಮದಲ್ಲಿ ಗಾಂಜಾ ಬೆಳೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಮದ್ದೂರು ತಾಲೂಕಿನ ಹಳೇಹಳ್ಳಿ ಗ್ರಾಮದ ಕರಿಯಪ್ಪ ಬಿನ್ ನಿಂಗೇಗೌಡ ಎಂಬ ವ್ಯಕ್ತಿ ತನ್ನ ಮನೆ ಮೇಲಿನ ತಾರಸಿ ಮೇಲೆ ಪ್ಲಾಸ್ಟಿಕ್ ಪಾಟಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದನು.

ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ನೇತೃತ್ವದಲ್ಲಿ ಕೊಪ್ಪ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ 3 ಕೆಜಿ 664 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸುಕೊಂಡಿದ್ದಾರೆ. ಆರೋಪಿ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್ 20(1)(i)ನಡಿ ಪ್ರಕರಣ ದಾಖಲಾಗಿದ್ದು, ಕೊಪ್ಪ ಪೋಲೀಸ್ ಠಾಣೆಯಲ್ಲಿ ಕ್ರಮ ಮುಂದುವರಿಸಲಾಗಿದೆ.

Related News

error: Content is protected !!