
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ 15 ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ. ದೀಪಿಕಾ ಎಂಬ ವಿದ್ಯಾರ್ಥಿನಿ, ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿ ಶಿಕ್ಷಣ ಪಡೆಯುತ್ತಿದ್ದಳು.
ನಾಗರಾಜ್ ಮತ್ತು ವಸಂತ ದಂಪತಿಯ ಮಗಳು ದೀಪಿಕಾ, ಬೆಳಗ್ಗೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಳಾಗಿದ್ಧಾಳೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ದೀಪಿಕಾಗೆ ಮಾರ್ಗ ಮಧ್ಯೆ ಸಾವನೋವಾಯಿತು.
ಈ ಘಟನೆ ಗ್ರಾಮದಲ್ಲಿ ದುಃಖದ ಛಾಯೆ ಮೂಡಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ದೀಪಿಕಾದ ಅಕಾಲಿಕ ಮರಣವು ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಶಾಲಾ ಶಿಕ್ಷಕರನ್ನು ಆಘಾತಕ್ಕೊಳಗಾಗಿಸಿದೆ.
ಹೃದಯಾಘಾತದಿಂದ ಕಳೆದ ಕೆಲವು ದಿನಗಳಲ್ಲಿ ಇಂತಹ ಅಸಹಜ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಯುವ ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಹೆಚ್ಚಿಸುವ ಅಗತ್ಯವೂ ಇಂದು ಚರ್ಚೆಗೆ ಬರತೊಡಗಿದೆ.






