
ಮುಂಬೈ: ಬಾಲಿವುಡ್ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ ನಬೀಲ್ ನದ್ಲವಿ ಎಂಬ ವ್ಯಕ್ತಿಯೊಂದಿಗೆ ಮಲೈಕಾ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಿವುಡ್ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮಲೈಕಾ ಈ ಹಿಂದೆ ನಟ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. 1998ರಲ್ಲಿ ನಡೆದ ಈ ವಿವಾಹಕ್ಕೆ 2017ರಲ್ಲಿ ಅಧಿಕೃತವಾಗಿ ಅಂತ್ಯ ಹಾಡಲಾಗಿತ್ತು. ಬಳಿಕ ನಟ ಅರ್ಜುನ್ ಕಪೂರ್ ಜೊತೆಗಿನ ಮಲೈಕಾ ಅವರ ಸಂಬಂಧವೂ ಹಲವು ವರ್ಷಗಳ ಕಾಲ ಸುದ್ದಿಯಲ್ಲಿತ್ತು. ಇಬ್ಬರೂ 2018ರಿಂದ ಡೇಟಿಂಗ್ನಲ್ಲಿದ್ದು, 2024ರಲ್ಲಿ ಬೇರ್ಪಟ್ಟಿರುವುದಾಗಿ ವರದಿಯಾಗಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಮಲೈಕಾ ಅವರ ಹೆಸರು ಉದ್ಯಮಿ ಹಾಗೂ ವಜ್ರ ವ್ಯಾಪಾರಿ ಹರ್ಷ್ ಮೆಹ್ತಾ ಜೊತೆಗೂ ಕೇಳಿಬಂದಿತ್ತು. ಇಬ್ಬರು ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಡೇಟಿಂಗ್ ವದಂತಿಗಳು ಹರಿದಾಡಿದ್ದವು. ಆದರೆ ಮಲೈಕಾ ಅಥವಾ ಹರ್ಷ್ ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ನಬೀಲ್ ಜೊತೆಗಿನ ಫೋಟೋ ವೈರಲ್
ಇದೀಗ ನಬೀಲ್ ನದ್ಲವಿ ಜೊತೆ ಮಲೈಕಾ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಮಲೈಕಾ ಅವರ ಜೀವನದಲ್ಲಿ ಮತ್ತೊಂದು ಹೊಸ ಸಂಬಂಧ ಆರಂಭವಾಗಿದೆಯೇ ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.
ಆದರೆ ನಬೀಲ್ ಮತ್ತು ಮಲೈಕಾ ನಡುವಿನ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅವರಿಬ್ಬರ ಭೇಟಿಯು ಸ್ನೇಹ, ವೃತ್ತಿಪರ ಕೆಲಸ ಅಥವಾ ಮತ್ತಾವುದೇ ಕಾರಣಕ್ಕೆ ಸಂಬಂಧಿಸಿದ್ದೇ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಸದ್ಯಕ್ಕೆ ಹರಿದಾಡುತ್ತಿರುವುದು ಕೇವಲ ಸಾಮಾಜಿಕ ಜಾಲತಾಣದ ಚರ್ಚೆ ಹಾಗೂ ಊಹಾಪೋಹಗಳಷ್ಟೇ.
ಮಲೈಕಾ ಕೂಡ ಈ ಫೋಟೋಗಳ ಹಿನ್ನೆಲೆಯಲ್ಲಿ ಹೊಸ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹಿಂದೆ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದ್ದ ಅವರು, ತಮ್ಮ ಜೀವನದಲ್ಲಿ ಸಂಗಾತಿಗಾಗಿ ಸಕ್ರಿಯವಾಗಿ ಹುಡುಕಾಟ ನಡೆಸುತ್ತಿಲ್ಲ ಎಂದು ಹೇಳಿದ್ದರು.






