ವಾರಣಾಸಿ (ಉತ್ತರ ಪ್ರದೇಶ): ಇಬ್ಬರು ಮಕ್ಕಳ ತಾಯಿಯೊಬ್ಬಳು ತನ್ನ 20 ವರ್ಷದ ಪ್ರಿಯಕರನೊಂದಿಗೆ ಹೋಗುವುದಾಗಿ ಪತಿಯ ಎದುರೇ ಹಠ ಹಿಡಿದು, ರೈಲ್ವೇ ನಿಲ್ದಾಣದಲ್ಲಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಮಹಿಳೆಯು ತನ್ನ ಪ್ರಿಯಕರನನ್ನು ಭೇಟಿಯಾಗಲು ಬನಾರಸ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಳು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ದಿಢೀರ್ ಆಗಮಿಸಿದ ಆಕೆಯ ಪತಿ, ಇಬ್ಬರನ್ನೂ ಒಟ್ಟಿಗೆ ಕಂಡಿದ್ದಾನೆ. ಬಳಿಕ ಪತಿ ವಿಚಾರಣೆ ನಡೆಸುತ್ತಿದ್ದಂತೆ ಸ್ಥಳದಲ್ಲಿ ಮಾತಿನ ಚಕಮಕಿ ಆರಂಭವಾಗಿದೆ.

ಈ ವೇಳೆ ಮಹಿಳೆ ಸಾರ್ವಜನಿಕರ ಮುಂದೆಯೇ ಪ್ರಿಯಕರನನ್ನು ತಬ್ಬಿಕೊಂಡು, “ನಾನು ಇವನ ಜೊತೆಯೇ ಇರುತ್ತೇನೆ. ಇವನನ್ನೇ ಮದುವೆಯಾಗುತ್ತೇನೆ” ಎಂದು ಪತಿಯ ಎದುರೇ ಪಟ್ಟು ಹಿಡಿದಿದ್ದಾಳೆ ಎನ್ನಲಾಗಿದೆ. ಮಹಿಳೆಯ ವರ್ತನೆಯಿಂದ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮತ್ತೊಂದೆಡೆ, ಪತಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದು, “ನಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಸುಖವಾಗಿ ಸಾಗುತ್ತಿದ್ದ ಸಂಸಾರವನ್ನು ಬಿಟ್ಟು, ಇಷ್ಟು ಚಿಕ್ಕ ವಯಸ್ಸಿನ ಯುವಕನೊಂದಿಗೆ ಹೋಗಲು ಆಕೆ ಹಠ ಹಿಡಿದಿದ್ದಾಳೆ” ಎಂದು ಅಳಲು ತೋಡಿಕೊಂಡಿದ್ದಾನೆ ಎನ್ನಲಾಗಿದೆ. ಯುವಕ ಕೂಡ ಮಹಿಳೆಯನ್ನು ಬಿಟ್ಟುಕೊಡಲು ನಿರಾಕರಿಸಿ, ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ನಿಲ್ದಾಣದಲ್ಲಿ ಜನರ ಗುಂಪು ಹೆಚ್ಚಾಗಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ಎರಡೂ ಕುಟುಂಬಗಳ ಸದಸ್ಯರನ್ನು ಕರೆಸಿಕೊಂಡಿರುವ ಪೊಲೀಸರು, ಮಾತುಕತೆ ಹಾಗೂ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರಕರಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

Related News

error: Content is protected !!