ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು ಕಾರಣಗಳಿಂದ ದಂಪತಿಗಳು ವಿಚ್ಛೇದನದ ದಾರಿಯನ್ನು ಹಿಡಿಯುತ್ತಿರುವುದು ಸಾಮಾನ್ಯವಾಗಿದೆ. ಈ ನಡುವೆ, ಪತ್ನಿಯ ಅಕ್ರಮ ಸಂಬಂಧ ತಿಳಿದಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಅದನ್ನು ಸಹಿಸಿಕೊಂಡಿರುವ ವ್ಯಕ್ತಿಯೊಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಮಕ್ಕಳಿಗಾಗಿ ಪತ್ನಿಯ ದ್ರೋಹವನ್ನೇ ಸಹಿಸಿಕೊಂಡಿದ್ದೇನೆ” ಎಂದು ಆತ ತನ್ನ ನೋವನ್ನು ಹಂಚಿಕೊಂಡಿದ್ದಾನೆ. ಮೂರು ವರ್ಷಗಳ ಹಿಂದೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿ ಮೋಸ ಮಾಡಿದ ವಿಷಯ ತಿಳಿದಿದ್ದರೂ, ಕುಟುಂಬ ಭಂಗವಾಗಬಾರದೆಂಬ ಕಾರಣಕ್ಕೆ ಆತ ಮೌನವಾಗಿ ಬದುಕು ಮುಂದುವರಿಸಿದ್ದಾನೆ.

ಪತ್ನಿಯೊಂದಿಗೆ ಒಂದೇ ಮನೆಯಲ್ಲಿದ್ದರೂ, ಆಕೆಯ ಮೇಲೆ ಪ್ರೀತಿ ಸಂಪೂರ್ಣವಾಗಿ ಕಳೆದುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ. ತಂದೆಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೂ, ದಾಂಪತ್ಯ ಸಂಬಂಧದಿಂದ ಆತ ಭಾವನಾತ್ಮಕವಾಗಿ ಬಹಳ ಹಿಂದೆಯೇ ದೂರವಾಗಿರುವುದಾಗಿ ಸ್ಪಷ್ಟಪಡಿಸಿದ್ದಾನೆ.

ಇತ್ತೀಚೆಗೆ ಮತ್ತೊಬ್ಬ ಮಹಿಳೆಯನ್ನು ಭೇಟಿಯಾದ ಬಳಿಕ ತನ್ನ ಜೀವನದಲ್ಲಿ ಮತ್ತೆ ಸಂತೋಷ ಕಂಡಿರುವುದಾಗಿ ಆತ ಹೇಳಿದ್ದಾನೆ. ಆಕೆ ತನ್ನನ್ನು ಗೌರವದಿಂದ ಕಾಣುತ್ತಾಳೆ, ತನ್ನ ಬದುಕಿಗೆ ಹೊಸ ಅರ್ಥ ನೀಡಿದ್ದಾಳೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾನೆ.

ಈ ಹಿನ್ನೆಲೆಯಲ್ಲಿ, “ಇನ್ನೂ ಪತ್ನಿಗೆ ಬದ್ಧನಾಗಿಯೇ ಇರಬೇಕಾ? ಅಥವಾ ವಿಚ್ಛೇದನ ನೀಡಿ ಹೊಸ ಜೀವನ ಆರಂಭಿಸಬೇಕಾ?” ಎಂಬ ಪ್ರಶ್ನೆಯನ್ನು ಆತ ನೆಟ್ಟಿಗರ ಮುಂದೆ ಇಟ್ಟಿದ್ದಾನೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೆಲವರು “ಮೋಸ ಮಾಡಿದ ಪತ್ನಿಯನ್ನು ಕ್ಷಮಿಸುವುದೇ ಮೊದಲ ತಪ್ಪು, ಮಕ್ಕಳಿಗಾಗಿಯೇ ಆದರೂ ದೂರವಾಗಬೇಕು” ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು “ಮಕ್ಕಳ ಭವಿಷ್ಯವನ್ನೂ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಿ” ಎಂದು ಸಲಹೆ ನೀಡಿದ್ದಾರೆ.

Related News

error: Content is protected !!