ಇಂದಿನ ತಂತ್ರಜ್ಞಾನ ಯುಗದಲ್ಲಿ ಸಂಬಂಧಗಳಲ್ಲಿನ ನಂಬಿಕೆ ಕುಸಿತದ ಘಟನೆಗಳು ಹೆಚ್ಚುತ್ತಿವೆ. ದಾಂಪತ್ಯ ಜೀವನದಲ್ಲೇ ಅಲ್ಲ, ಪ್ರೇಮ ಸಂಬಂಧಗಳಲ್ಲಿಯೂ ಮೋಸ, ಅಕ್ರಮ ಸಂಬಂಧಗಳು ಸಾಮಾನ್ಯವಾಗುತ್ತಿರುವುದು ಸಮಾಜದ ಚಿಂತಾಜನಕ ಬೆಳವಣಿಗೆಯಾಗಿದೆ. ಇಂತಹ ವಿಚಿತ್ರ ಹಾಗೂ ಆಶ್ಚರ್ಯಕರ ಘಟನೆಯೊಂದು Mexicoನಲ್ಲಿ ನಡೆದಿದೆ.

ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರೊಂದಿಗೆ ರಹಸ್ಯವಾಗಿ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಆತನ ಬದುಕಿರುವವರೆಗೂ ಈ ವಿಚಾರ ಇಬ್ಬರು ಪ್ರೇಯಸಿಯರಿಗೂ ಗೊತ್ತಾಗಿರಲಿಲ್ಲ. ಆತನ ಸಾವಿನ ನಂತರವೇ ಈ ರಹಸ್ಯ ಬಹಿರಂಗವಾಗಿದೆ.

ಅಂತ್ಯಸಂಸ್ಕಾರದ ವೇಳೆ ನಡೆದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಶವಪೆಟ್ಟಿಗೆಯ ಮುಂದೆ ಇಬ್ಬರು ಮಹಿಳೆಯರು “ಅವನು ನನ್ನವನು” ಎಂದು ಜಗಳವಾಡಿ ಕೈಕೈಗೂ ಹೋಗಿದ್ದಾರೆ. ಗಲಾಟೆ ಅಷ್ಟು ತೀವ್ರವಾಗಿದ್ದು, ಶವಪೆಟ್ಟಿಗೆಯನ್ನೇ ಅಲುಗಾಡಿಸುವ ಮಟ್ಟಕ್ಕೆ ತಲುಪಿದೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋದಲ್ಲಿ ಸೆರೆಹಿಡಿದಿದ್ದು, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಮೃತ ವ್ಯಕ್ತಿ ಇಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದರೂ, ಒಬ್ಬರಿಗೂ ಮತ್ತೊಬ್ಬರ ವಿಷಯ ತಿಳಿಯದಂತೆ ಜಾಗ್ರತೆಯಿಂದ ಸಂಬಂಧವನ್ನು ಮುಚ್ಚಿಟ್ಟಿದ್ದ. ಆದರೆ ಆತನ ಸಾವಿನ ನಂತರ ಸತ್ಯ ಬಹಿರಂಗಗೊಂಡಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಇಬ್ಬರು ಪ್ರೇಯಸಿಯರು ಶವಪೆಟ್ಟಿಗೆಯ ಮುಂದೆ ಜಗಳವಾಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬಂದಿದ್ದ ಜನರು ಈ ದೃಶ್ಯ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವರು ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಮೃತ ವ್ಯಕ್ತಿಯ “ಚಾಣಾಕ್ಷತನ”ವನ್ನು ವ್ಯಂಗ್ಯವಾಗಿ ಪ್ರಶಂಸಿಸಿದರೆ, ಇನ್ನೂ ಕೆಲವರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.

ಆದರೆ, ಈ ವಿಡಿಯೋ ನಿಜವೇ ಅಥವಾ ನಾಟಕೀಯ ಸನ್ನಿವೇಶವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಇಂಟರ್‌ನೆಟ್‌ನಲ್ಲಿ ಇದು ವೇಗವಾಗಿ ಹರಿದಾಡುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

Related News

error: Content is protected !!