ಈದ್ ಹಬ್ಬದ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೈದರಾಬಾದ್‌ನ ಸೈಯದ್ ಅಯೂಬ್ ಎಂಬಾತನ ವಿಡಿಯೋ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ‘ಹೈದರಾಬಾದ್ ಯೂತ್ ಕರೇಜ್’ ಎಂಬ ಸ್ವಯಂಸೇವಾ ಸಂಘಟನೆಯೊಂದಿಗೆ ತಾನು ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಅಯೂಬ್, ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಯೂಬ್, ಮುಸ್ಲಿಂ ಸಮುದಾಯದವರು ರಸ್ತೆಗಳಲ್ಲಿ ನಮಾಜ್ ಸಲ್ಲಿಸುವಂತೆ ಕರೆ ನೀಡಿದ್ದಾನೆ. ಈ ಕರೆ ಉತ್ತರ ಪ್ರದೇಶದ ಸಂಭಲ್‌ಗೆ ಮಾತ್ರ ಸೀಮಿತವಲ್ಲದೆ, ದೇಶದಾದ್ಯಂತ ಇರುವ ಮುಸ್ಲಿಮರಿಗೆ ಅನ್ವಯಿಸುತ್ತದೆ ಎಂದು ಅವನು ಹೇಳಿದ್ದಾನೆ.

ಇದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಡೆಸದಂತೆ ಸೂಚನೆ ನೀಡಿರುವ ಆಡಳಿತದ ಕ್ರಮವನ್ನೂ ಅಯೂಬ್ ಸವಾಲು ಹಾಕಿದ್ದಾನೆ. “ಇದನ್ನು ತಡೆಯಲು ಯಾರಿಗಾದರೂ ಸಾಧ್ಯವೆಂದು ಭಾಸವಾದರೆ ಪ್ರಯತ್ನಿಸಿ ನೋಡಲಿ, ನಾವು ಯಾವುದೇ ಬೆದರಿಕೆಗಳಿಗೆ ತಲೆಬಾಗುವುದಿಲ್ಲ” ಎಂಬರ್ಥದಲ್ಲಿ ಅವನು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿ, ರಾಜ್ಯ ಸರ್ಕಾರ ಮುಸ್ಲಿಮರ ಮೇಲೆ ಅನಗತ್ಯ ನಿರ್ಬಂಧ ಹೇರಿದೆ ಎಂದು ಆರೋಪಿಸಲಾಗಿದೆ.

ಇದರ ನಡುವೆ, ಸಂಭಲ್‌ನಲ್ಲಿ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !!