ರಾಯಚೂರು, ಜುಲೈ 6: ಮೊಹರಂ ಹಬ್ಬದ ಆಚರಣೆ ದುರಂತಕ್ಕೆ ಕಾರಣವಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಗ್ನಿಕುಂಡದ ಕಾರ್ಯಕ್ರಮದಲ್ಲಿ ದುರ್ಘಟನೆ ಸಂಭವಿಸಿದ್ದು, ಓರ್ವ ವ್ಯಕ್ತಿ ಬೆಂಕಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಬಳಿಕ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಹನುಮಂತ್ ಎಂದು ಗುರುತಿಸಲಾಗಿದೆ. ಮೊಹರಂ ಸಂದರ್ಭದಲ್ಲಿ ಅಲಾವಿ ಕುಣಿಯನ್ನು ಹಾಯುವ ಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ವೇಳೆ, ಕಟ್ಟಿಗೆಯಲ್ಲಿ ಕಾಲು ಸಿಲುಕಿದ್ದು, ನಿಯಂತ್ರಣ ತಪ್ಪಿದ ಹನುಮಂತ್ ಬೃಹತ್ ಅಗ್ನಿಕುಂಡಕ್ಕೆ ಬಿದ್ದು, ತೀವ್ರ ಗಾಯಗಳಿಗೆ ಒಳಗಾಗಿದ್ದಾರೆ.

ತಕ್ಷಣವೇ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯು ಸ್ಥಳೀಯರಲ್ಲಿ ಆಘಾತ ಸೃಷ್ಟಿಸಿದ್ದು, ಹಬ್ಬದ ಸಂಭ್ರಮ ಮಂಕುಗೊಂಡಿದೆ.

ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!