Latest

ಶಕ್ತಿಸೌಧಕ್ಕೆ ತಂದಿದ್ದ 10 ಲಕ್ಷ ನಗದು ಜಪ್ತಿ!!!

ವಿಧಾನಸೌಧದ ಮುಂದೆ ದೊಡ್ಡದಾಗಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಮೂದು ಮಾಡಿದ್ದರೂ, ಅಲ್ಲಿ  ನಡೆಯುವುದು ಬರೀ ಭ್ರಷ್ಟಾಚಾರ ಎನ್ನುವುದು ಸಮಾನ್ಯ ಸಾರ್ವಜನಿಕರ ದೂರು ಆಗಿದೆ. ಆದಕ್ಕೆ ಪೂರಕ ಎಂಬಂತೆ ನಿನ್ನೆ ಸಂಜೆ ವಿಧಾನಸೌಧದಲ್ಲಿ ಅಧಿಕೃತ ದಾಖಲೆಗಳಿಲ್ಲದ 10 ಲಕ್ಷ ರೂ. ನಗದು ಹಣ ತೆಗೆದುಕೊಂಡು ಹೋಗುತ್ತಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಅವರಿಂದ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ.

ಇನ್ನು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ರಿಂದ ಹಣ ಜಪ್ತಿ ಮಾಡಲಾಗಿದೆ. ಕೆಲಸ ನಿಮಿತ್ತ ವಿಕಾಸ ಸೌಧಕ್ಕೆ ಬಂದಿದ್ದ ಇಂಜಿನಿಯರ್ ಜಗದೀಶ್ ಅವರನ್ನು ವಿಧಾನಸೌಧ ಪಶ್ಚಿಮ ದ್ವಾರದ ಗೇಟ್‌ ಬಳಿ ಪೊಲೀಸರು ಭದ್ರತೆ ದೃಷ್ಟಿಯಿಂದ ಪರಿಶೀಲನೆ ಮಾಡಿದ್ದಾರೆ. ಈ ವೇಲೆ ಸೂಟ್ಕೇಸ್‌ನಲ್ಲಿ 10 ಲಕ್ಷ ರೂ. ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ತಾನು ಈ ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾರೆ.

ಹಣದ ಬಗ್ಗೆ ದಾಖಲೆಗಳು ಲಭ್ಯವಾಗಿಲ್ಲ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಅವರು, ವಿಧಾನ ಸೌಧ ಮತ್ತು ವಿಕಾಸ ಸೌಧ ಭದ್ರತೆಯ ದಾಖಲೆಯಿಲ್ಲದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. PWD ಇಲಾಖೆಯ ಜೂನಿಯರ್ ಇಂಜಿನಿಯರ್ ಒರ್ವರು ಹಣದ ಸಹಿತ ಬಂದಿದ್ದಾರೆ. ಈ ವೇಳೆ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಸರಿಯಾದ ಉತ್ತರ ಸಿಕ್ಕಿಲ್ಲ. ಬಳಿಕ ವಿಧಾನ ಸೌಧ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿ ದೂರು ಬಂದಿದೆ. ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿದೆ. ಹತ್ತು ಲಕ್ಷದ ಐವತ್ತು ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯಕ್ಕೆ ಹಣವನ್ನು ಹಾಜರು ಪಡಿಸಲಿದ್ದೆವೆ. ಹಣ ತಂದಿದ್ದ ವ್ಯಕ್ತಿಗೆ ನೋಟೀಸ್ ನೀಡಲಾಗಿದೆ. ಎಲ್ಲಿ ಡ್ರಾ ಮಾಡಲಾಗಿದೆ. ಯಾರಿಗೆ ಕೊಡುವ ಉದ್ದೇಶ ಇದೆ ಎಂಬುದನ್ನು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಚುನಾವಣೆ ವೇಳೆ ಗಿಮಿಕ್‌ ಮಾಡಲಾಗುತ್ತಿದೆ: ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕಿದೆ. ಯಾವ ಉದ್ದೇಶಕ್ಕೆ ಯಾರಿಗೆ ಹಣ ತಂದಿದ್ದ ಎನ್ನೋದು ಗೊತ್ತಾಗಬೇಕು. ಈಗಷ್ಟೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ. ಅವನ ಸ್ಟೇಟ್ ಮೆಂಟ್ ಪಡೆದ ಬಳಿಕವಷ್ಟೇ ಗೊತ್ತಾಗಬೇಕು. ಶೇಕಡಾ 40% ಅದು-ಇದೂ ಎಲ್ಲ ಹಿಂದಿನ ಸರ್ಕಾರದಲ್ಲೇ ನಡೆದಿತ್ತು. ಇಲ್ಲದಿದ್ದರೆ ಅವರು ಸರ್ಕಾರದಿಂದ ಯಾಕೆ ಇಳಿಯುತ್ತಿದ್ದರು? ಸುಮ್ಮನೆ ಚುನಾವಣೆ ಸಂದರ್ಭ ಗಿಮಿಕ್ ಮಾಡ್ತಿದ್ದಾರೆ. ಈಗಾಗಲೇ ಒಬ್ಬ ಮಂತ್ರಿ ಕೇಸ್ ಹಾಕಿದ್ದಾರೆ ಕೇಸ್ ತನಿಖೆ ನಡೆಯುತ್ತಿದೆ.- ಗೃಹ ಸಚಿವ ಆರಗ ಜ್ಞಾನೇಂದ್ರ

ಭ್ರಷ್ಟರ ಬೇಟೆ

Recent Posts

ಬಾಗಲಕೋಟೆಯಲ್ಲಿ ರಾತ್ರಿ 11 ಗಂಟೆಯ ಬಳಿಕ ನಿಯಮ ಉಲ್ಲಂಘಿಸಿ ಮರಳು ಸಾಗಾಟ: ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್‌ಗಳ ಸಂಚಾರ, ಅಧಿಕಾರಿಗಳು ಮೌನ!?

ಬಾಗಲಕೋಟೆ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ…

2 days ago

ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮಕ್ಕಳ ಮಾನ್ಯತಾ ಅವಧಿಯಲ್ಲೂ ಬದಲಾವಣೆ, ಹೊಸ ನಿಯಮ ಜಾರಿ

ನವದೆಹಲಿ: ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳ ಪಾಸ್‌ಪೋರ್ಟ್‌ನ ಮಾನ್ಯತಾ ಅವಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು…

2 days ago

ಗೌರಿಬಿದನೂರಿನಲ್ಲಿ ಅಪಘಾತಕ್ಕೆ ನಾಲ್ಕು ವರ್ಷದ ಬಾಲಕಿ ಬಲಿ

ತಾಯಿ-ತಂದೆಯಿಲ್ಲದ ವೇದಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನ ಗೌರಿಬಿದನೂರು: ನಗರದಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆಯೇ ಮತ್ತೊಂದು ಮನಕಲಕುವ ರಸ್ತೆ ದುರಂತ…

5 days ago

ಸರ್ಕಾರಿ ಶಾಲಾ ಮಕ್ಕಳಿಗೆ ಅನ್ಯಾಯ: ನೂರು ರೂಪಾಯಿಗೂ ಬೆಲೆಬಾಳದ ಶೂಗಳನ್ನು ವಿತರಿಸಿರುವ ಸರ್ಕಾರ, ಒಂದೇ ತಿಂಗಳಿಗೆ ಹಾಳದ ಶೂಗಳು..!

ಕಳೆದ ವರ್ಷದ 265 ರೂ. ಬೆಲೆಯ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನಲ್ಲಿ ವಿತರಿಸಿದ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ…

6 days ago

50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ: ಖರಾಬು ಜಮೀನು ದಾಖಲೆ ತಿದ್ದುಪಡಿಗೆ ಬೇಡಿಕೆ..!

ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ…

6 days ago

ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದಕ್ಕೆ ರಕ್ತದೊಕುಳಿ: ಅಣ್ಣ–ತಮ್ಮಂದಿರ ಜಗಳದಲ್ಲಿ ತಂದೆ–ಮಗಳು ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ

ಕಿತ್ತೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ–ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ–ಮಗಳನ್ನು ಕೊಚ್ಚಿ…

6 days ago