ಕೊಟ್ಟೂರು:- ಪಟ್ಟಣದಲ್ಲಿ ಮರಿ ಕೊಟ್ಟೂರೇಶ್ವರ ದೇವಸ್ಥಾನದಿಂದ ಕೂಡ್ಲಿಗಿ ರಸ್ತೆಯ ಡಾ. ಬಿ.ಆರ್.ಅಂಬೇಡ್ಕರ್ ನಗರದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದೀಪದ ಕಂಬಗಳನ್ನು ನಿರ್ಮಿಸಿದ್ದು,ಕಂಬಗಳಲ್ಲಿರುವ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಹಾಕಿ ಮುಚ್ಚುವುದು ಬಿಟ್ಟು ಹಾಗೆ ವಿದ್ಯುತ್ ತಂತಿಗಳಿಗೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ.ರಸ್ತೆಯ ಮಧ್ಯದಲ್ಲಿರುವ ಕಂಬಗಳು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿಧ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಕಾರಣ ಸಾರ್ವಜನಿಕರಿಗೆ ಈ ವಿದ್ಯುತ್ ತಂತಿಗಳು ತಗುಲಿ ಅನಾಹುತ ಸಂಭವಿಸುವ ಮುನ್ಸೂಚನೆಗಳು ಕಾಣುತ್ತಿದೆ.ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ತಂತಿಗಳನ್ನು ವಿದ್ಯುತ್ ಕಂಬದ ಒಳಗಡೆ ಸರಿಪಡಿಸಿ ಅನಾಹುತಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭ ಆಗಿರುವುದರಿಂದ ಹಾಗೂ ತಾಲೂಕಿನಲ್ಲಿ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಬರುತ್ತಿರುವುದರಿಂದ ಮಳೆಗಾಲದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವುಗಳು ಆಗಿರುವುದು ನಮ್ ಕಣ್ ಮುಂದೆ ಅನೇಕ ಉದಾಹರಣೆಗಳು ಇವೆ ಹಾಗಾಗಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಸಂಬಂಧ ಪಟ್ಟ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದರು.
ವರದಿ: ಮಣಿಕಂಠ
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…