Latest

ಬೂಟು ಕಳಚಿಕೊಂಡು ಹೊಡೀತೀನಿ! ದೆಹಲಿ ಕರ್ನಾಟಕ ಭವನದಲ್ಲಿ ಸಿದ್ದು & ಡಿಕೆಶಿ ವಿಶೇಷ ಅಧಿಕಾರಿಗಳ ಜಟಾಪಟಿ

ದೆಹಲಿ, ಜುಲೈ 25: ರಾಜಧಾನಿ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿಗಳ ನಡುವೆ ಉಲ್ಬಣಗೊಂಡ ವಾದ-ವಿವಾದ ಈಗ ಖಾಸಗಿ ನಾಟಕವನ್ನು ಬಿಟ್ಟು ಅಧಿಕೃತ ದೂರು ಹಂತಕ್ಕೆ ತಲುಪಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿ ಆಂಜನೇಯ, ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಿ ಮೋಹನ್ ಕುಮಾರ್ ವಿರುದ್ಧ ಗಂಭೀರ ದೂರನ್ನು ದಾಖಲಿಸಿದ್ದಾರೆ.

ಆಂಜನೇಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಿವಾಸಿ ಆಯುಕ್ತರಿಗೆ ನೀಡಿದ ದೂರುದಲ್ಲಿ, ಸಿಎಂ ಅಧಿಕಾರಿಯ ವರ್ತನೆ ತನ್ನ ಕಾರ್ಯನಿರ್ವಹಣೆಗೆ ತೀವ್ರ ಅಡಚಣೆ ಉಂಟುಮಾಡಿದುದಾಗಿ ಆರೋಪಿಸಿದ್ದಾರೆ. “ಮೋಹನ್ ಕುಮಾರ್ ಅವರು ಅಧಿಕಾರದ ಹೆಮ್ಮೆಯೊಂದಿಗೆ ಮಾತನಾಡುತ್ತಾ, ನನ್ನನ್ನು ಬೂಟು ಕಳಚಿಕೊಂಡು ಹೊಡೆಯುತ್ತೇನೆ ಎಂದು ಸಾರ್ವಜನಿಕವಾಗಿ ಬೆದರಿಸಿದ್ದಾರೆ,” ಎಂದು ಆಂಜನೇಯ ದೂರಿನಲ್ಲಿ ತಿಳಿಸಿದ್ದಾರೆ.

ದೂರುದಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳು ಹೀಗಿವೆ:

ಸಿಎಂ ಅಧಿಕಾರಿ ಮೋಹನ್ ಕುಮಾರ್ ಅವರಿಂದ ನಿರಂತರ ಅವಮಾನ.

“ಬೂಟು ಕಳಚಿಕೊಂಡು ಹೊಡೆಯುತ್ತೇನೆ” ಎಂಬ ಬೆದರಿಕೆ ಅವರದೇ ಚೇಂಬರ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ.

ಪ್ರಮೀಳಾ ಎಂಬ ಮತ್ತೊಬ್ಬ ಸಿಬ್ಬಂದಿಯ ಸಮ್ಮುಖದಲ್ಲಿಯೂ ಅಪಮಾನಿತಸ್ಥಿತಿ.

ಸೇವಾ ದಾಖಲೆಯನ್ನು ಪರಿಶೀಲಿಸಿದರೆ, ಈ ಮೊದಲು ಕೂಡಾ ಹಿರಿಯ ಅಧಿಕಾರಿ ಎಂ.ಎಂ. ಜೋಷಿಗೆ ಹಲ್ಲೆ ಮಾಡಿದ ವರದಿ ಇದೆ.

ಹಿರಿಯತೆ ಹೊಂದಿದ್ದರೂ, ತಮ್ಮನ್ನು ಲೆಕ್ಕಾಧಿಕಾರಿ ಹುದ್ದೆಗೆ ವರ್ಗಾಯಿಸದಂತೆ ತಡೆಯಲಾಗುತ್ತಿದೆ ಎಂಬ ಆರೋಪ.

ನ್ಯಾಯಕ್ಕಾಗಿ ಅರ್ಜಿ:

“ನಾನು ಒಬ್ಬ ಗ್ರೂಪ್ ಬಿ ಅಧಿಕಾರಿಯಾಗಿದ್ದು, ಉಪ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಮೇಲೆ ಇಂತಹ ನಿಂದನೆ ಹಾಗೂ ಬೆದರಿಕೆಗಳು ನನ್ನ ಮಾನಸಿಕ ಸ್ಥಿತಿಗೆ ಭಾರೀ ಆಘಾತ ತಂದಿದೆ. ಮೋಹನ್ ಕುಮಾರ್ ವಿರುದ್ಧ ತಕ್ಷಣ ಇಲಾಖಾ ವಿಚಾರಣೆ ನಡೆಸಿ, ನ್ಯಾಯ ಒದಗಿಸಬೇಕು,” ಎಂಬುದು ಆಂಜನೇಯ ಅವರ ವಿನಂತಿಯ ಸಾರಾಂಶ.

ಈ ಘಟನೆ ಸಿಎಂ-ಡಿಸಿಎಂ ಲೈನಿನಲ್ಲಿರುವ ಅಧಿಕಾರಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಬಹಿರಂಗಪಡಿಸಿದ್ದು, ಸರಕಾರದೊಳಗಿನ ಆಡಳಿತ ಶಿಸ್ತು ಪ್ರಶ್ನೆಗೆ ಒಳಪಡಿಸಿದೆ. ಇಲಾಖಾ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರ ತರಲಾಗುತ್ತದೆಯೇ ಎನ್ನುವುದು ಮುಂದೆ ಗಮನಿಸಬೇಕಾದ ವಿಷಯ.

nazeer ahamad

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

4 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

19 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

23 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago