ಬೆಂಗಳೂರು: ಕರ್ನಾಟಕ ಬಿಜೆಪಿ ಶಿಬಿರದಲ್ಲಿ ಆಂತರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದ್ದು, ನಾಯಕತ್ವದ ವಿರುದ್ ಸಮಾಧಾನ ದಿನದಿಂದ ದಿನಕ್ಕೆ ಗರಿಷ್ಠಕ್ಕೇರಿ ಬಿರುಕು ಹೆಚ್ಚಿಸುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡ ಬಳಿಕವೇ ಈ ಬಿರುಕುಗಳು ಪ್ರಕಟವಾಗಿ ಹೊರಬರುತ್ತಿದ್ದರೆ, ಇತ್ತೀಚಿನ ಬೆಳವಣಿಗೆಗಳು ಪಕ್ಷದ ಅಂತರಾಳದಲ್ಲಿ ಚರ್ಚೆಗೆ ಕಾರಣವಾಗಿವೆ.
ಪಕ್ಷದಿಂದ ಉಚ್ಚಾಟನೆಗೊಳಗಾದ ಬಿಜೇಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ಯತ್ನಾಳ್, “ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ನಿಂತಿದ್ದು ಬಿವೈ ವಿಜಯೇಂದ್ರ. ಇಂತಹ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ ಪಕ್ಷದ ನೇತೃತ್ವ ವಹಿಸುವುದೇ ಶೋಚನೀಯ” ಎಂದು ಕಿಡಿಕಾರಿದ್ದಾರೆ.
ಅಷ್ಟಕ್ಕೆ ನಿಲ್ಲದೆ, ಡಿಕೆ ಶಿವಕುಮಾರ್ ಮತ್ತು ವಿಜಯೇಂದ್ರ ಸೇರಿಕೊಂಡು ಜಾರಕಿಹೊಳಿ ಅವರ ರಾಜಕೀಯ ಬದುಕು ಹಾಳು ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಯತ್ನಾಳ್ ಮಾಡಿದ್ದಾರೆ. ಈ ಹೇಳಿಕೆಗಳು ಈಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿವಾದದ ತಿರುಳನ್ನು ಹುಟ್ಟುಹಾಕಿವೆ.
ಇದರಿಂದಾಗಿ, ಯತ್ನಾಳ್ ಪದೇ ಪದೇ ವಿಜಯೇಂದ್ರನನ್ನು ಟಾರ್ಗೆಟ್ ಮಾಡುತ್ತಿರುವುದು ಹೈಕಮಾಂಡ್‌ನಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆ ಇದೆ. ಇತ್ತ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ನಡೆಯುವವೋ ಎಂಬ ಮಾತುಗಳು ಕೂಡ ಕಿವಿಗುತ್ತಿವೆ.
ಒಟ್ಟಾರೆ, ಕರ್ನಾಟಕ ಬಿಜೆಪಿ ಈಗ ಗಂಭೀರ ಆಂತರಿಕ ಬಿಕ್ಕಟ್ಟಿನಲ್ಲಿದ್ದು, ನಾಯಕತ್ವದ ವಿರೋಧಿ ಧ್ವನಿ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿರುವುದು ಪಕ್ಷದ ಭವಿಷ್ಯಕ್ಕೇ ಸವಾಲಾಗಿ ಪರಿಣಮಿಸಲಿದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ ಶ್ಕಾಂತರಾಜ್.ಕೆ ರವರು ಇದೇ ತಿಂಗಳ ಜೂನ್ 26 ರಂದು ಸಂಜೆ ಸಮಯ ಠಾಣೆಯಲ್ಲಿದ್ದಾಗ…
ಹೊನ್ನಾವರ: ಮಹಿಳೆಯರ ಗೌರವ ಮತ್ತು ಗೌಪ್ಯತೆ ಕಡೆಗಣಿಸುವ ಆತ್ಮಹೀನ ಕೃತ್ಯವೊಂದು ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ. ಸ್ನಾನ ಮಾಡುವ ಮಹಿಳೆಯನ್ನೇ ಇಣುಕಿ…
ಧಾರವಾಡ: ನಗರದ ಹಳೆ ಕೋರ್ಟ್ ವೃತ್ತದ ಬಳಿ ಆಘಾತಕಾರಿ ಘಟನೆ ಒಂದರಲ್ಲಿ, ಕಂಠಪೂರ್ತಿ ಮದ್ಯಪಾನ ಮಾಡಿಕೊಂಡು ಆಟೋ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನು…
ಹುಬ್ಬಳ್ಳಿ, ಜೂನ್ 27 – ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದ ಸಂಯುಕ್ತ ತಪಾಸಣೆಯಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ.…
ಮಂಗಳೂರು: ವಿವಾದಾತ್ಮಕ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹತ್ಯೆ ಪ್ರಕರಣದಲ್ಲಿ ಬಂಧಿತ ಪ್ರಮುಖ…
ಆಂಧ್ರಪ್ರದೇಶದಲ್ಲಿ ಪಶುಪ್ರೇಮಿಗಳಿಗೆ ಮತ್ತು ಗ್ರಾಮಸ್ಥರಲ್ಲಿ ಆಕ್ರೋಶ ಹುಟ್ಟಿಸುವಂತ ಘಟನೆ ನಡೆದಿದೆ. ಎಲೂರು ಜಿಲ್ಲೆಯ ಲಿಂಗಪಾಲಂ ಮಂಡಲದ ಮಾಥ ಗುಡೆಮ್ ಉಪನಗರದ…