ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ ಶ್ಕಾಂತರಾಜ್.ಕೆ ರವರು ಇದೇ ತಿಂಗಳ ಜೂನ್ 26 ರಂದು ಸಂಜೆ ಸಮಯ ಠಾಣೆಯಲ್ಲಿದ್ದಾಗ ಕೋಲಾರ-ವೇಮಗಲ್ ರಸ್ತೆಯ ಸಂಗೊಂಡಹಳ್ಳಿ ಗ್ರಾಮದ ಸಮೀಪ ಇರುವ ಖಂಡಿ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಆಟೋದಲ್ಲಿ ಗಾಂಜ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳಾದ ಶೇಕ್ ಸಾಧಿಕ್ ಪಾಷ. ರವಿಕುಮಾರ್, ಮುರಳಿ ಮೋಹನ್, ಆಂಜಿನಪ್ಪ, ಸತೀಶ್, ನವೀನ್‌ಕುಮಾರ್, ಆರತಿ, ರವರು ದಾಳಿ ಮಾಡಿ ಆರೋಪಿಯಾದ ಕೋಲಾರ ನಗರ ವಾಸಿ ಮುಭಾರಕ್ ಪಾಷ 40 ವರ್ಷ, ಇವರನ್ನು ವಶಕ್ಕೆ ಪಡೆದುಕೊಂಡು ಸುಮಾರು ಎರಡು ಲಕ್ಷ ಬೆಲೆ ಬಾಳುವ ನಾಲ್ಕು ಕೆ.ಜಿ ಮಾಧಕ ವಸ್ತುವಾದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಆಟೋ ಸಂಖ್ಯೆ ಕೆ.ಎ-19-ಡಿ-8010 ಹಾಗೂ ಒಂದು ಡಿಜಿಟಲ್ ತೋಕದ ಯಂತ್ರ ವಶಪಡಿಸಿಕೊಂಡು ಮೊ. ಸಂಖೆ 262/2025, 20(b)(ii)(B) NDPS Act-1985 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯವೈಖರಿಯದ ಬಗ್ಗೆ ಕೋಲಾರ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐಪಿಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಮತ್ತು ಶ್ ಜಗದೀಶ್ ಹಾಗು ಎಂ.ಎಚ್. ನಾಗ್ತೆ ಪೊಲೀಸ್ ಉಪಾಧೀಕ್ಷಕರು ಕೋಲಾರ ಉಪ ವಿಭಾಗ ರವರು ಮೆಚ್ಚಿ ಪ್ರಸಂಶೆ ವ್ಯಕ್ತ ಪಡಿಸಿದ್ದಾರೆ. ವರದಿ ರೋಷನ್ ಜಮೀರ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…