Latest

ನೀರಿಗಾಗಿ ಗ್ರಾಮಸ್ಥರ ಪರದಾಟ; ಕೈ ಹಿಡಿಯದ ಜಲ ಜೀವನ್ ಮಿಷನ್!

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕೆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಳ್ಳಿಕೆರೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜನರು ಕುಡಿಯಲು ಹಾಗೂ ಬಳಸಲು ನೀರಿಲ್ಲದೇ ದಿನನಿತ್ಯ ಪರದಾಡುವ ಸ್ಥಿತಿ ಉಂಟಾಗಿದೆ. ನೀರಿನ ಸಮಸ್ಯೆ ನೀಗಿಸಲು ಜಲ ಜೀವನ್ ಮಿಷನ್ ಕಾಮಗಾರಿ ಆಗಮಿಸಿದ್ದು, ಜನರಿಗೆ ಜೆಜೆಎಂ ಕಾಮಗಾರಿ ಕೈ ಹಿಡಿಯುತ್ತದೆ ಎಂದುಕೊಂಡಿದ್ದರು, ಆದರೆ ಅದು ಕೂಡ ಕೈ ಹಿಡಿಯಲಿಲ್ಲ, ಜೆಜೆಎಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದು ಹೋಗಿರುವುದು ಕಂಡುಬರುತ್ತದೆ. ಇಲ್ಲಿನ ಗ್ರಾಮದ ಜನರು ದಿನನಿತ್ಯ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ, ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಆರಂಭಗೊಂಡಿರುವ ಜಲ ಜೀವನ್ ಮಿಷನ್‌ನ(ಜೆಜೆಎಮ್) ಯೋಜನೆ ಪ್ರತಿ ಗ್ರಾಮದಲ್ಲಿಯೂ ಕಾಮಗಾರಿ ನಡೆಯುತ್ತಿದ್ದು, ಅದೇ ರೀತಿ ತಳ್ಳಿಕೆರೆ ಗ್ರಾಮದಲ್ಲಿಯೂ ಕಾಮಗಾರಿ ನಡೆದಿರುತ್ತದೆ, ಕಾಮಗಾರಿ ನಡೆದ ಆ ಸಮಯದ ಸ್ಥಳದಲ್ಲಿ ಹಾಕಿದ ಬೋರ್ಡ್ ನಲ್ಲಿ ಜಿಲ್ಲಾ ಪಂಚಾಯತ್ ಬಾಗಲಕೋಟೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಬಾಗಲಕೋಟೆನ ಮೂಲಕ ಕೇಲೂರು ಗ್ರಾಮ ಪಂಚಾಯತಿಯ ತಳ್ಳಿಕೆರೆ ಗ್ರಾಮದ ಜನವಸತಿ ಪ್ರದೇಶದ 386 ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಕಲ್ಪಿಸುವ ಯೋಜನೆ ಹೊಂದಿದ್ದು,ಕಾಮಗಾರಿಯ ಅಂದಾಜು ಮೊತ್ತ,64 ಲಕ್ಷ 80 ಸಾವಿರ ರೂಪಾಯಿ ಒಳಗೊಂಡಿರುತ್ತದೆ, ತಳ್ಳಿಕೆರೆ ಗ್ರಾಮದ ಜನತೆ ಕಳೆದ ಎರಡು ವರ್ಷಗಳಿಂದ ಮನೆ ಮನೆಗೆ ಗಂಗೆ ಇನ್ನೂ ತಲುಪದೇ ಇರುವುದು ಜನರಲ್ಲಿ ಅಸಮಾಧಾನ ಉಂಟು ಮಾಡಿದೆ. ಗ್ರಾಮದ ಕೆಲ ಪ್ರದೇಶಗಳಲ್ಲಿ ಮಾತ್ರ ಕೆಲಸ ಮಾಡಿ ಅದರಲ್ಲೂ ಸ್ವಲ್ಪವೂ ಕಾಮಗಾರಿಯ ಪೂರ್ಣತೆ ಕಂಡಿರುವುದಿಲ್ಲ, ನಳಗಳನ್ನು ಅಳವಡಿಸಿಲ್ಲ. ಕಾಮಗಾರಿಯ ಬೋರ್ಡ್ ಅನ್ನು ಎರಡು ದಿನ ಮಾತ್ರ ಹಾಕಿ ನಂತರ ಅದನ್ನು ತಾವೇ ಕಿತ್ತುಕೊಂಡು ಹೋಗಿದ್ದಾರೆ ಎಂಬುದು ಅಲ್ಲಿನ ಜನರ ಪಿಸು ಮಾತಾಗಿದೆ, ಇದರಿಂದ ಜೆಜೆಎಂ ಕಾಮಗಾರಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಇದರ ಸಲುವಾಗಿ ಗ್ರಾಮದ ಜನರು ಹಲವು ಬಾರಿ ಇದರ ಬಗ್ಗೆ ತಿಳಿಸಿದರು ಯಾವೊಬ್ಬ ಅಧಿಕಾರಿಯೂ ಇದಕ್ಕೆ ಸ್ಪಂದಿಸುತ್ತಿಲ್ಲ, ತಳ್ಳಿಕೇರೆ ಗ್ರಾಮದ ಜನರು ಜೆಜೆಎಂ ಕಾಮಗಾರಿ ಮಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಇದರಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರಾದ ವೀರೇಶ ನಾಗರಬೇಂಚಿ ಹಾಗೂ ಇಂಜಿನಿಯರ್ ಆದ ಕಾಶಿರಾಯ್ ನಾಯಕ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರವರ ಮೇಲೆ ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗ್ರಾಮದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು, ಹಾಗೂ ತಳ್ಳಿಕೆರೆ ಗ್ರಾಮದ ಜನರಿಗೆ ನೀರಿನ ಸೌಲಭ್ಯ ಒದಗಿಸಿ ಕೊಡಬೇಕು.

nazeer ahamad

Recent Posts

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

14 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

18 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago

ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…

2 days ago